ಬಿಜೆಪಿ ಕಾರ್ಯಕಾರಣಿ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ತಮ್ಮ ಪಕ್ಷದ ಕಾರ್ಯಕರ್ತರಿಗೆ ಹೇಳಿದ್ದಾರೆ ಎನ್ನಲಾದ ಮಾತಿಗೆ ಬಾಲಿವುಡ್ ನಿರ್ದೇಶಕ ಅನುರಾಗ್ ಕಶ್ಯಪ್ (Anurag Kashyap) ತಿರುಗೇಟು ನೀಡಿದ್ದಾರೆ. ಚುನಾವಣೆ ವೇಳೆಗಾದರೂ ಅವರು ಮಾತನಾಡಿದ್ದಾರಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಪ್ರಧಾನಿಗಳು ಪದೇ ಪದೇ ಈ ಮಾತುಗಳನ್ನು ಹೇಳುವ ಮೂಲಕ ಕಾರ್ಯಕರ್ತರನ್ನು ಸದಾ ಜಾಗೃತರಾಗಿ ಇಡಬೇಕು ಎಂದೂ ಅವರು ಹೇಳಿಕೆ ನೀಡಿದ್ದಾರೆ.
Advertisement
ಇತ್ತೀಚಿನ ದಿನಗಳಲ್ಲಿ ಸಿನಿಮಾಗಳ ಬಗ್ಗೆ ರಾಜಕೀಯ ಮುಖಂಡರು ಮತ್ತು ಕಾರ್ಯಕರ್ತರು ವಿಪರೀತ ಎನ್ನುವಂತೆ ಟೀಕೆ ಮಾಡುತ್ತಿದ್ದಾರೆ. ಅದರಲ್ಲೂ ಪಠಾಣ್, ಬ್ರಹ್ಮಾಸ್ತ್ರ ಸಿನಿಮಾಗಳಿಗೆ ಬಾಯ್ಕಾಟ್ (Boycott) ಅಭಿಯಾನ ಮಾಡುವ ಮೂಲಕ ಸಾಕಷ್ಟು ತೊಂದರೆ ಕೊಟ್ಟಿದ್ದಾರೆ. ಹಲವು ದಿನಗಳಿಂದ ಈ ರೀತಿಯ ಪ್ರತಿಭಟನೆಗಳು ಸಿನಿಮಾ ರಂಗದಲ್ಲಿ ಕಾಮನ್ ಎನ್ನುವಂತಾಗಿದೆ. ಹಾಗಾಗಿ ನರೇಂದ್ರ ಮೋದಿ ಅವರು, ಯಾವುದೇ ಸಿನಿಮಾದ ಸಹವಾಸಕ್ಕೆ ಹೋಗದೇ, ಅದರ ಬಗ್ಗೆ ಮಾತನಾಡದೇ ದೂರ ಉಳಿದುಕೊಳ್ಳಿ ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: `ಶೈಲೂ’ ನಟಿ ಭಾಮಾ ದಾಂಪತ್ಯ ಬದುಕಿನಲ್ಲಿ ಬಿರುಕು?
Advertisement
Advertisement
ಈ ಸಲಹೆಗೆ ತಮ್ಮದೇ ಆದ ರೀತಿಯಲ್ಲಿ ಪ್ರತಿಕ್ರಿಯೆ ನೀಡಿರುವ ಅನುರಾಗ್ ಕಶ್ಯಪ್, ‘ಮೋದಿ ಅವರು ಈ ಮಾತುಗಳನ್ನು ನಾಲ್ಕು ವರ್ಷಗಳ ಹಿಂದೆಯೇ ಹೇಳಬೇಕಿತ್ತು. ಈಗ ಎಲ್ಲವೂ ಕೈ ಮೀರಿ ಹೋಗಿದೆ. ಅವರ ಮಾತುಗಳನ್ನು ಯಾರೂ ಕೇಳುವುದಿಲ್ಲ ಎನ್ನುವಂತಹ ವಾತಾವರಣ ಉಂಟಾಗಿದೆ. ಅವರ ಹೇಳಿಕೆ ಯಾವುದೇ ಪರಿಣಾಮವನ್ನು ಉಂಟು ಮಾಡದು’ ಎಂದು ಅನುರಾಗ್ ಮಾತನಾಡಿದ್ದಾರೆ.
Advertisement
ಪಠಾಣ್ ಸಿನಿಮಾಗೆ ಸಂಬಂಧಿಸಿದಂತೆ ಕನ್ನಡದ ನಟ, ಹೋರಾಟಗಾರ ಚೇತನ್ ಕೂಡ ಈ ವಿವಾದದ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಯಾವ ಬಣ್ಣವೂ ಯಾವುದರ ಸಂಕೇತ ಆಗಬಾರದು ಎಂದು ಹೇಳಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿರುವ ಅವರು, ‘ಕೇಸರಿ ಹಿಂದೂಗಳ ಸಂಕೇತವಲ್ಲ. ಹಿಂದೂಗಳ ಬಣ್ಣ ಆಗಬಾರದು. ಕೇಸರಿ ಬಣ್ಣ ತ್ಯಾಗದ ಸಂಕೇತ. ಅದು ಭಾರತದ ರಾಷ್ಟ್ರ ಧ್ವಜದಲ್ಲೂ ಇದೆ. ಹಸಿರು ಬಣ್ಣ ಕೂಡ ಅಷ್ಟೇ, ಅದು ಕೂಡ ಯಾರದೋ ಬಣ್ಣವಲ್ಲ. ಇದೊಂದು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಪ್ರಯತ್ನವಷ್ಟೇ’ ಎಂದು ಪ್ರತಿಕ್ರಿಯಿಸಿದ್ದಾರೆ.
ಪಠಾಣ್ ಸಿನಿಮಾದ ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿಕಿನಿ ಧರಿಸಿದ್ದರು. ಆ ಹಾಡಿನ ಸಾಹಿತ್ಯದಲ್ಲೂ ಕೇಸರಿ ಬಣ್ಣಕ್ಕೆ ಅವಮಾನಿಸಲಾಗಿದೆ ಎನ್ನುವ ಆರೋಪ ಕೇಳಿ ಬಂದಿತ್ತು. ಈ ಹಿನ್ನೆಲೆಯಲ್ಲಿ ಸೆನ್ಸಾರ್ ಮಂಡಳಿ ಕೂಡ ಹಾಡಿನಲ್ಲಿಯ ಕೆಲವು ಚಿತ್ರಿಕೆಗಳಿಗೆ ಕತ್ತರಿ ಹಾಕುವಂತೆ ಹೇಳಿತ್ತು. ಕೆಲವು ಕಡೆ ಈ ಸಿನಿಮಾವನ್ನು ರಿಲೀಸ್ ಮಾಡದಂತೆ ಥಿಯೇಟರ್ ಗೂ ಮುತ್ತಿಗೆ ಹಾಕಲಾಯಿತು.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k