ನವದೆಹಲಿ: ಶ್ರಾವಣ ಪೌರ್ಣಮಿಯ ಈ ದಿನ ಪ್ರತಿಯೊಬ್ಬ ಸೋದರಿಯೂ ತನ್ನ ಸೋದರನಿಗೆ ರಕ್ಷೆ ಕಟ್ಟಿ ತನ್ನ ಮಾನ, ಪ್ರಾಣ ಮತ್ತು ಸ್ವಾಭಿಮಾನದ ರಕ್ಷಣೆ ಮಾಡು ಅಣ್ಣಾ ಎಂದು ವಿನಂತಿಸುವ ಹಬ್ಬವೇ ರಕ್ಷಾಬಂಧನ (Rakhi Festival 2024). ಅದನ್ನು ನಿಭಾಯಿಸಬೇಕಾದದ್ದು ಪ್ರತಿಯೊಬ್ಬ ಅಣ್ಣನ ಕರ್ತವ್ಯ. ಈ ನಿಟ್ಟಿನಲ್ಲಿಂದು ಇಡೀ ದೇಶವೇ ರಕ್ಷಾ ಬಂಧನ ಆಚರಿಸಿದೆ. ಈ ಸಂಭ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ (PM Modi) ಸಹ ಭಾಗಿಯಾಗಿದ್ದಾರೆ.
Advertisement
ನಾವು ಆಚರಿಸುವ ಫಾದರ್ಸ್ ಡೇ, ಮದರ್ಸ್ ಡೇ, ಲವರ್ಸ್ ಡೇ ಇವೆಲ್ಲವೂ ಪಾಶ್ಚಾತ್ಯ ಅನುಕರಣೆಯಿಂದ ಬಂದ ಹಬ್ಬಗಳು. ಆದರೆ ರಕ್ಷಾ ಬಂಧನ (ಅಥವಾ ರಾಖೀ ಹಬ್ಬ) (Raksha Bandhan celebrations) ಅಪ್ಪಟ ಭಾರತೀಯ ಸಂಸ್ಕೃತಿಯ ಹಬ್ಬ ಎಂಬ ಕಾರಣಕ್ಕೆ ಅದು ನಮಗೆ ಹೆಚ್ಚು ಆಪ್ತವಾಗಬೇಕು ಎಂದು ಹೇಳುತ್ತಾರೆ ಹಿರಿಯರು. ಇಲ್ಲಿ ಸೋದರತೆಯು ರಕ್ತ ಸಂಬಂಧವನ್ನು ಮೀರಿದ್ದು, ಜಾತಿ, ಮತ, ಭಾಷೆ, ರಾಷ್ಟ್ರಗಳ ಸೀಮೆಗಳನ್ನು ಮೀರಿದ್ದು ಎನ್ನುವುದು ನೂರಾರು ಬಾರಿ ಸಾಬೀತಾಗಿದೆ. ಹಾಗಾಗಿಯೇ ಪ್ರತಿ ವರ್ಷವೂ ದೇಶದಲ್ಲಿ ರಕ್ಷಾಬಂಧನದ ದಿನ ಅಣ್ಣ-ತಂಗಿಯರು ಸಹೋದರತ್ವವನ್ನು ಮೆರೆಯುತ್ತಾರೆ. ಇದನ್ನೂ ಓದಿ: ನ್ಯಾಯಮೂರ್ತಿ ಹೇಮಾ ಸಮಿತಿ ವರದಿ: ಕೇರಳ ಚಿತ್ರೋದ್ಯಮದಲ್ಲಿ ಅಲ್ಲೋಲ ಕಲ್ಲೋಲ
Advertisement
Advertisement
ಈ ಸಂಭ್ರಮದಲ್ಲಿ ಪ್ರಧಾನಿ ಮೋದಿ ಸಹ ದೇಶದ ಜನರೊಂದಿಗೆ ಭಾಗಿಯಾಗಿದ್ದಾರೆ. ಸೋಮವಾರ ದೆಹಲಿಯ ತಮ್ಮ ನಿವಾಸದಲ್ಲಿ ಶಾಲಾ ಮಕ್ಕಳೊಂದಿಗೆ ರಕ್ಷಾ ಬಂಧನ ಆಚರಿಸಿದ್ದಾರೆ. ಈ ಕುರಿತ ಫೋಟೋ ಹಾಗೂ ವೀಡಿಯೋಗಳನ್ನು ತಮ್ಮ ಸೋಷಿಯಲ್ ಮೀಡಿಯಾ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಹಲವಾರು ಶಾಲಾ ಬಾಲಕಿಯರು ಪ್ರಧಾನಿ ಮೋದಿಯವರ ಮಣಿಕಟ್ಟಿಗೆ ರಾಖಿ ಕಟ್ಟುತ್ತಿರುವುದನ್ನು ಕಾಣಬಹುದು.
Advertisement
ಫೋಟೋಗಳೊಂದಿಗೆ ಸಂದೇಶವೊಂದನ್ನು ಬರೆದುಕೊಂಡಿರುವ ಮೋದಿ ʻನನ್ನ ಯುವ ಸ್ನೇಹಿತರೊಂದಿಗೆ ರಕ್ಷಾ ಬಂಧನ ಆಚರಿಸಿದ್ದಕ್ಕೆ ಸಂತೋಷವಾಗಿದೆʼ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೈಹಿಡಿಯದ ಅದೃಷ್ಟ- ಅಕ್ಷಯ್ ಕುಮಾರ್ ನಟನೆಯ ‘ಖೇಲ್ ಖೇಲ್ ಮೇ’ ಚಿತ್ರ ಹೀನಾಯ ಸೋಲು