ಬೆಂಗಳೂರು: ಪಂಚರಾಜ್ಯ ಚುನಾವಣಾ ಫಲಿತಾಂಶಕ್ಕೆ ಸಂಬಂಧಪಟ್ಟಂತೆ ಉತ್ತರಪ್ರದೇಶ ಹಾಗೂ ಉತ್ತರಾಖಂಡ್ ರಾಜ್ಯಗಳಲ್ಲಿ ಮೋದಿಯವರ ಒನ್ ಮ್ಯಾನ್ ಶೋ ಕೆಲಸ ಮಾಡಿದೆ ಅಂತಾ ಮಾಜಿ ಪ್ರಧಾನಿ ಎಚ್ ಡಿ ದೇವೇ ಗೌಡ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೋದಿಯವರು ರೈತರ ಸಾಲ ಮನ್ನಾ ಮಾಡೋದಾಗಿ ಭರವಸೆ ನೀಡಿದ್ರು. 2014 ರಲ್ಲಿ ಹಿಂದೆ ಕೊಟ್ಟ ಭರವಸೆ ಹಾಗೂ ರೈತರ ಸಾಲ ಮನ್ನಾ ಮಾಡುವ ಭರವಸೆ ಸಹ ಈ ಗೆಲುವಿಗೆ ಕಾರಣ ಅಂತಾ ವ್ಯಂಗ್ಯವಾಡಿದ್ರು.
Advertisement
ರೈತರಪರ ಹೋರಾಟ: 80 ಜನ ಸಂಸದರಿದ್ದಾರೆ ಹಾಗಾಗಿ ಈ ಗೆಲುವು ಸಾಧ್ಯವಾಗಿದೆ. ಉತ್ತರ ಪ್ರದೇಶದ ಗೆಲುವು ಇಲ್ಲಿನ ಬಿಜೆಪಿ ನಾಯಕರಿಗೆ ಉತ್ಸಾಹ ಹೆಚ್ಚಿಸಿರೋದ್ರಲ್ಲಿ ಅನುಮಾನವಿಲ್ಲ. ಸಿಎಂ ಸಿದ್ಧರಾಮಯ್ಯ ಬಜೆಟ್‍ನಲ್ಲಿ ಭರವಸೆ ಕೊಡ್ತಾರೆ. ನಾವು ಏನು ಭರವಸೆ ನೀಡೋಕೆ ಸಾಧ್ಯ?. ನಾವು ಕೇವಲ ಪ್ರವಾಸ ಮಾಡಬಹುದಷ್ಟೆ. ರೈತರ ಪರವಾಗಿ ಹೋರಾಟ ಮಾಡುತ್ತೆವೆ ಅಂತಾ ಹೇಳಿದ್ರು.
Advertisement
ರೈತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ: ತೆಂಗು ಬೆಳೆಗಾರರಿಗೆ ನಷ್ಟ ಹಿನ್ನೆಲೆಯಲ್ಲಿ ನಾನೇ ಖುದ್ದಾಗಿ ಪ್ರಧಾನ ಮಂತ್ರಿಯವರನ್ನು ಭೇಟಿ ಮಾಡಿದ್ದೆ. ಈ ವೇಳೆ ತೆಂಗು ಬೆಳೆಗಾರರ ಸ್ಥಿತಿಗತಿಗಳ ಬಗ್ಗೆ ಪ್ರಧಾನಿಗೆ ತಿಳಿಸಿದ್ದೇನೆ. ಆದ್ರೆ ಇದುವರೆಗೂ ಯಾವುದೇ ಉತ್ತರ ಸಿಕ್ಕಿಲ್ಲ. ರೈತರ ಸಾಲ ಮನ್ನ ಮಾಡೋದಾಗಿ ತಿಳಿಸಿದ್ದಾರೆ. ಈಗಾಲಾದ್ರು ಅವರ ಮಾತು ಉಳಿಸಿಕೊಂಡ್ರೆ 2019ಕ್ಕೆ ಪ್ರಧಾನಿ ಸ್ಥಾನಲ್ಲಿದ್ದುಕೊಂಡು ರೋಡ್ ಶೋ ಮಾಡುವ ಅವಶ್ಯಕತೆ ಬರೋದಿಲ್ಲ ಅಂತಾ ಪ್ರಧಾನಿ ವಿರುದ್ಧ ಮಾಜಿ ಪ್ರಧಾನಿ ಹೇಳಿದರು.
Advertisement
ರಾಜ್ಯದ ಚುನಾವಣೆ ಮೇಲೆ ಪರಿಣಾಮ ಬೀರಲ್ಲ: ಪ್ರಾದೇಶಿಕ ಪಕ್ಷಗಳು ಎಲ್ಲೂ ಹೋಗೋದಿಲ್ಲ, ಅಲ್ಲಿ ಅಲ್ಲೆ ಇರುತ್ತವೆ. ಯಾವತ್ತಿಗೂ ಪ್ರಾದೇಶಿಕ ಪಕ್ಷಗಳನ್ನು ಅಳಿಸಿ ಹಾಕೋದಕ್ಕೆ ಸಾಧ್ಯವಿಲ್ಲ. ನಮ್ಮ ಪಕ್ಷವನ್ನು ತುಳಿಯೋದಕ್ಕೆ ಪ್ರಯತ್ನಿಸಿದ್ರು ನಾವು ಇಲ್ಲೇ ಇದ್ದೇವಲ್ಲ. ಮತದಾನದಲ್ಲಿ ಗೋಲ್ ಮಾಲ್ ಬಗ್ಗೆ ನಾನು ಮಾತನಾಡೋದಿಲ್ಲ. ಈ ಸಮಯದಲ್ಲಿ ತೀರ್ಪು ಒಪ್ಪಬೇಕಷ್ಟೆ. ಈ ಚುನಾವಣೆ ನಮ್ಮ ರಾಜ್ಯದ ಚುನಾವಣೆ ಮೇಲೆ ಯಾವುದೇ ಪರಿಣಾಮ ಬೀರೋದಿಲ್ಲ. 20 ತಿಂಗಳಲ್ಲೇ ಕುಮಾರಸ್ವಾಮಿ ಅತ್ಯುತ್ತಮ ಕೆಲಸ ಮಾಡಿದ್ರು. ಅದ್ಯಾವುದನ್ನು ಅಳಿಸಲು ಸಾಧ್ಯವಿಲ್ಲ. ಕುಮಾರಸ್ವಾಮಿ ಚರಿಷ್ಮಾ ಮಾಸುವಂತೆ ಮಾಡೋಕೆ ಯಾರಿಂದ್ಲೂ ಸಾಧ್ಯವಾಗಲಿಲ್ಲ ಅಂತಾ ಅವರು ಹೇಳಿದ್ರು.
Advertisement
ಉಪಚುನಾವಣೆಗೆ ಶೀಘ್ರವೇ ಅಭ್ಯರ್ಥಿ ಡಿಸೈಡ್: ಇದೇ ತಿಂಗಳ 15 ರಂದು ಪಕ್ಷದ ಶಾಸಕಾಂಗ ಸಭೆಯಲ್ಲಿ ಚರ್ಚಿಸಿ ಉಪ ಚುನಾವಣೆ ಅಭ್ಯರ್ಥಿ ಫೈನಲ್ ಮಾಡುತ್ತೇವೆ. ಎಲ್ಲ ಶಾಸಕರು ಹಾಗೂ ಮೈಸೂರು ಚಾಮರಾಜ ನಗರ ಜಿಲ್ಲೆಯವರ ಅಭಿಪ್ರಾಯ ಪಡೆದು ಅಭ್ಯರ್ಥಿ ಡಿಸೈಡ್ ಮಾಡ್ತೇವೆ. ರಾಜಕೀಯಾ ಹರಿಯುವ ನೀರು. ಇಲ್ಲಿ ಯಾರು ಯಾರನ್ನು ವಾಶ್ ಔಟ್ ಮಾಡೋಕೆ ಸಾಧ್ಯವಿಲ್ಲ ಅಂತಾ ಮಾಜಿ ಪ್ರಧಾನಿ ಖಡಕ್ಕಾಗಿಯೇ ನುಡಿದರು.