ನಟಿ, ಸಂಸದೆ ಸುಮಲತಾ ಅಂಬರೀಶ್ ಪುತ್ರ ಅಭಿಷೇಕ್ ಅಂಬರೀಶ್ (Abhishek Ambarish) ಅವರ ಮದುವೆಗೆ ಶುಭಾಶಯ ಕೋರಿದ್ದಾರೆ ಪ್ರಧಾನಿ ನರೇಂದ್ರ ಮೋದಿ (Narendra Modi). ಶುಭಾಶಯ ಕೋರಿ ಕಳುಹಿಸಿದ ಪತ್ರವನ್ನು ಸುಮಲತಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಹಿಂದೆ ಮದುವೆಗೆ (Marriage) ನರೇಂದ್ರ ಮೋದಿ ಅವರನ್ನು ಖುದ್ದಾಗಿ ಭೇಟಿ ಮಾಡಿ ಆಹ್ವಾನ ನೀಡಿದ್ದರು ಸುಮಲತಾ ಮತ್ತು ಪುತ್ರ ಅಭಿಷೇಕ್.
ಶುಭಾಶಯ (Greetings) ಕೋರಿ ಬರೆದ ಪತ್ರಕ್ಕೆ ಪ್ರತಿಕ್ರಿಯೆ ನೀಡಿರುವ ಸುಮಲತಾ (Sumalatha), ‘ಅಭಿಷೇಕ ಅಂಬರೀಶ್–ಅವಿವಾ ಬಿಡಪ್ಪ (Aviva) ಅವರ ಮದುವೆಗೆ ಶುಭಾಶಯಗಳನ್ನು ತಿಳಿಸಿ, ನವ ಜೋಡಿಯ ಹೊಸ ಜೀವನ ಸುಖಕರವಾಗಿರಲಿ ಎಂದು ಹಾರೈಸಿದ ಮಾನ್ಯ ಪ್ರಧಾನ ಮಂತ್ರಿಗಳಾದ ಶ್ರೀ ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು. ನಿಮ್ಮ ಹಾರೈಕೆ, ಆಶೀರ್ವಾದ ಸದಾ ನಮ್ಮ ಕುಟುಂಬದ ಮೇಲಿರಲಿ ಎಂದು ಮತ್ತೊಮ್ಮೆ ಧನ್ಯವಾದಗಳನ್ನು ತಿಳಿಸುವೆ’ ಎಂದು ಬರೆದುಕೊಂಡಿದ್ದಾರೆ.
Advertisement
Advertisement
ಮದುವೆ, ಆರತಕ್ಷತೆ ಹಾಗೂ ಸಂಗೀತ ಕಾರ್ಯಕ್ರಮಗಳನ್ನು ಮುಗಿಸಿಕೊಂಡಿರುವ ನಟ ಅಭಿಷೇಕ್, ಮಾಡೆಲ್ ಅವಿವಾ ಜೂನ್ 16 ರಂದು ಮಂಡ್ಯದ ಜನತೆಗೆ ಬೀಗರೂಟ ಮಾಡಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಮದುವೆ ಮತ್ತು ಆರತಕ್ಷತೆ ಬೆಂಗಳೂರಿನಲ್ಲಿ ನಡೆದಿರುವ ಕಾರಣದಿಂದಾಗಿ ಬೀಗರೂಟವನ್ನು ಮಂಡ್ಯದಲ್ಲಿ ಏರ್ಪಡಿಸಲಾಗಿದೆ. ಇದನ್ನೂ ಓದಿ:ಚಿಟ್ಟೆಯಂತೆ ಮಿಂಚಿದ ಸಂತೂರ್ ಮಮ್ಮಿ ಪ್ರಣಿತಾ ಸುಭಾಷ್
Advertisement
Advertisement
ಈ ಹಿಂದೆ ಮಂಡ್ಯಕ್ಕೆ ಪ್ರಧಾನಿ ನರೇಂದ್ರ ಮೋದಿ ಬಂದಾಗ, ಯಾವ ಜಾಗದಲ್ಲಿ ಅವರಿಗೆ ಕಾರ್ಯಕ್ರಮ ಮಾಡಲು ತಯಾರಿ ಮಾಡಿಕೊಳ್ಳಲಾಗಿತ್ತೋ, ಅದೇ ಜಾಗದಲ್ಲೇ ಬೀಗರೂಟವನ್ನು ಹಮ್ಮಿಕೊಳ್ಳಲಾಗಿದೆ. ಮಂಡ್ಯ ಜಿಲ್ಲೆ ಮದ್ದೂರು ತಾಲೂಕು ಗೆಜ್ಜಲಗೆರೆ ಕಾಲೋನಿ ಬಳಿ 15 ಎಕರೆ ಪ್ರದೇಶದಲ್ಲಿ ಜರ್ಮನ್ ಟೆಂಟ್ ಹಾಕಲಾಗುತ್ತಿದೆ. ಅಲ್ಲಿಯೇ ಬೀಗರೂಟ ನಡೆಯಲಿದೆ.
ಬೀಗರೂಟಕ್ಕೆ ಕನಿಷ್ಠ 50 ಸಾವಿರಕ್ಕೂ ಹೆಚ್ಚು ಜನರು ಆಗಮಿಸುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಈಗಾಗಲೇ ಟೆಂಟ್ ಹಾಕುವಂತಹ ಕಾರ್ಯ ನಡೆದಿದ್ದು, ಸುಮಲತಾ ಅಂಬರೀಶ್ ಇಂದು ಅದರ ಪರಿಶೀಲನೆ ಕೂಡ ಮಾಡಿದ್ದಾರೆ. ಬೀಗರೂಟಕ್ಕೆ ಭರ್ಜರಿ ಬಾಡೂಟವೇ ಇರಲಿದ್ದು, ಪಕ್ಕಾ ಮಂಡ್ಯ ಶೈಲಿಯಲ್ಲಿ ಆಹಾರವನ್ನು ಸಿದ್ಧ ಪಡಿಸಲಾಗುತ್ತದೆಯಂತೆ. ಮುದ್ದೆಯೊಂದಿಗೆ ಭರ್ಜರಿ ಮಾಂಸದೂಟ ಕೂಡ ಜೊತೆಯಾಗಲಿದೆ.