ರಾಜ್ಯೋತ್ಸವಕ್ಕೆ ಕನ್ನಡದಲ್ಲಿ ಶುಭಾಶಯ ತಿಳಿಸಿದ್ರು ಮೋದಿ

Public TV
2 Min Read
732036 file modi e1537344170686

-ನಾಡಿನ ಜನತೆಗೆ ಶುಭ ಕೋರಿದ ಹೆಚ್‍ಡಿಕೆ, ಸಿದ್ದರಾಮಯ್ಯ, ಬಿಎಸ್‍ವೈ

ಬೆಂಗಳೂರು: ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಇಂದು ಪ್ರಧಾನಿ ನರೇಂದ್ರ ಮೋದಿ ಕರ್ನಾಟಕದ ಜನತೆಗೆ ಟ್ವಿಟ್ಟರಿನಲ್ಲಿ ಕನ್ನಡ ಭಾಷೆಯಲ್ಲಿ ಟ್ವೀಟ್ ಮಾಡುವ ಮೂಲಕ ಶುಭಾಶಯ ತಿಳಿಸಿದ್ದಾರೆ.

ರಾಜ್ಯೋತ್ಸವದ ವಿಶೇಷ ಸಂದರ್ಭದಲ್ಲಿ ಕರ್ನಾಟಕದ ನನ್ನ ಸಹೋದರ ಸಹೋದರಿಯರಿಗೆ ಶುಭಾಶಯಗಳು. ಕರ್ನಾಟಕ ಶ್ರೀಮಂತ ಇತಿಹಾಸ ಹೊಂದಿದ್ದು, ವಿವಿಧ ಕ್ಷೇತ್ರಗಳಲ್ಲಿ ಗುರುತಿಸಿಕೊಂಡಿರುವ ಪ್ರತಿಭಾವಂತರಿಗೆ ನೆಲೆಯಾಗಿದೆ. ನಾನು ರಾಜ್ಯದ ಜನರ ಸಂತೋಷ ಹಾಗೂ ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತೇನೆ.

ಕರ್ನಾಟಕ ರಾಜ್ಯೋತ್ಸವದ ಈ ದಿನದಂದು, ಕರ್ನಾಟಕದ ಜನತೆಗೆ ಹಾರ್ಧಿಕ ಅಭಿನಂದನೆಗಳು ಹಾಗೂ ಶುಭಾಶಯಗಳು. ಮುಂಬರುವ ವರ್ಷಗಳಲ್ಲಿ, ಕರ್ನಾಟಕ ರಾಜ್ಯ ಹಾಗೂ ನಮ್ಮ ದೇಶವು ಇನ್ನೂ ಉನ್ನತ ಮಟ್ಟಕ್ಕೇರಲಿ ಎಂದು ರಾಷ್ಟ್ರಪತಿ ಕೊವಿಂದ್  ಟ್ವೀಟ್ ಮಾಡಿದ್ದಾರೆ.

ಸಿಎಂ ಕುಮಾರಸ್ವಾಮಿ ಅವರು ವಿಡಿಯೋ ಮೂಲಕ ಕರ್ನಾಟಕ ಜನತೆಗೆ ಕನ್ನಡ ರಾಜ್ಯೋತ್ಸವದ ಶುಭಾಶಯ ತಿಳಿಸಿದ್ದಾರೆ. ವಿಡಿಯೋದಲ್ಲಿ ನಾಡಿನ ಸಮಸ್ತ ನಾಗರಿಕ ಬಂಧುಗಳಿಗೆ 63ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ವಿವಿಧತೆಯಲ್ಲಿ ಏಕತೆಯ ಸಂಸ್ಕೃತಿ ಇರುವ ನಾಡು ನಮ್ಮದು. ಸರ್ವ ಜನಾಂಗದ ಶಾಂತಿಯ ತೋಟ ಎಂದು ರಾಷ್ಟ್ರಕವಿ ಕುವೆಂಪು ಅವರು ಬಣ್ಣಿಸಿದಂತೆ ಶಾಂತಿ, ಸಹ ಬಾಳ್ವೆ, ಸೌಹಾರ್ದದಿಂದ ನಳನಳಿಸುವ ನಾಡು ಇದು. ಬನ್ನಿ ನಾಡುನುಡಿಯನ್ನು ಗೌರವಿಸೋಣ, ಏಕೀಕರಣಕ್ಕಾಗಿ ದುಡಿದವರನ್ನು ಸ್ಮರಿಸೋಣ, ಸಮೃದ್ಧ ಕರ್ನಾಟಕವನ್ನು ಕಟ್ಟೋಣ. ತಾಯಿ ಭುವನೇಶ್ವರಿ ಕೃಪೆ ಸದಾ ನಮ್ಮ ಮೇಲೆ ಇರಲಿ ಎಂದು ಹಾರೈಸುತ್ತೇನೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

ಹರಿವ ನದಿಗಳಿಂದ ಹರಸೊ ರಸಋಷಿಗಳಿಂದ ಬರೆವ ಕವಿಗಳಿಂದ ಧನ್ಯ ನೀನು ಸವಿಯ ನುಡಿಯ ಆಡುವ ಅಮೃತ ಸವಿಯ ಸವಿಯುವ ಕನ್ನಡಿಗರು ನಾವು ಧನ್ಯ ಧನ್ಯ ಕನ್ನಡ ದಿನದ ಶುಭಾಶಯ ಎಂದು ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಟ್ವೀಟ್ ಮಾಡಿದ್ದಾರೆ.

ಕನ್ನಡ ಎಂದರೆ ಬರೀ ಭಾಷೆ ಅಲ್ಲ, ಅದು ಬದುಕು, ಅದು ಸಂಸ್ಕೃತಿ, ಅದು ಪರಂಪರೆ. ಕನ್ನಡವನ್ನು ಪ್ರೀತಿಸೋಣ. ನಾಡಬಾಂಧವರೆಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭ ಹಾರೈಕೆಗಳು. ಕನ್ನಡ ರಾಜ್ಯೋತ್ಸವ ಕೇವಲ ಉತ್ಸವ ಅಲ್ಲ, ವಿವಿಧ ಪ್ರಾಂತ್ಯಗಳಲ್ಲಿ ಹಂಚಿಹೋಗಿರುವ ಕನ್ನಡಿಗರು ಕನ್ನಡದ ಕರುಳಬಳ್ಳಿ ಹಿಡಿದು ಒಗ್ಗೂಡಿದ ಪವಿತ್ರ ದಿನ. ಈ ಕನ್ನಡದ ಕನಸು ಸಾಕಾರಗೊಳ್ಳಲು ಲಕ್ಷಾಂತರ ಕನ್ನಡಾಭಿಮಾನಿಗಳ ಶ್ರಮ, ತ್ಯಾಗ, ಬಲಿದಾನಗಳನ್ನು ಕೃತಜ್ಞತೆಯಿಂದ ಸ್ಮರಿಸೋಣ. ಕನ್ನಡಾಭಿಮಾನ ಕನ್ನಡ ರಾಜ್ಯೋತ್ಸವಕ್ಕೆ ಸೀಮಿತವಾಗಬಾರದು. ಅದು ಸದಾ ನಮ್ಮೆದೆಯೊಳಗೆ ಜೀವಂತವಾಗಿರಬೇಕು. ಭಾಷೆಯ ಜತೆ ನಾಡು ಸರ್ವಾಂಗೀಣವಾಗಿ ಬೆಳೆಯಬೇಕು. ಕನ್ನಡಿಗರು ಸಮರ್ಥರಾದರೆ ಕನ್ನಡ ಸಾಮಥ್ರ್ಯ ಪಡೆಯುತ್ತದೆ. ಈಗಿನ ಕರ್ನಾಟಕವನ್ನು ನಿಜವಾದ ಕನ್ನಡನಾಡಾಗಿ ಕಟ್ಟುವ ಸಂಕಲ್ಪ ಮಾಡೋಣ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *