ನವದೆಹಲಿ: ಆಡಮ್ಸ್ ಬ್ರಿಡ್ಜ್ ಎಂದೂ ಕರೆಯಲ್ಪಡುವ ರಾಮಸೇತುವನ್ನು ರಾಷ್ಟ್ರೀಯ ಸ್ಮಾರಕ ಎಂದು ಘೋಷಿಸುವಂತೆ ಕೋರಿ ಮಾಜಿ ರಾಜ್ಯಸಭಾ ಸದಸ್ಯ ಡಾ. ಸುಬ್ರಮಣಿಯನ್ ಸ್ವಾಮಿ ಅವರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ಇದರ ಬೆನ್ನಲ್ಲೇ ಟ್ವೀಟ್ ಮಾಡಿದ ಸುಬ್ರಮಣಿಯನ್ ಸ್ವಾಮಿ, ರಾಮ ಸೇತುವನ್ನು ಪ್ರಾಚೀನ ಪರಂಪರೆಯ ಸ್ಮಾರಕವನ್ನಾಗಿ ಘೋಷಣೆ ಮಾಡಲು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ. ಈ ನಿರ್ಧಾರದ ಬಗ್ಗೆ ಅಫಿಡವಿಟ್ ಸಲ್ಲಿಸಲು ನ್ಯಾಯಾಲಯ ಸರ್ಕಾರಕ್ಕೆ ಸೂಚಿಸಿದೆ. ಒಂದು ವೇಳೆ ರಾಮಸೇತು ರಾಷ್ಟ್ರೀಯ ಸ್ಮಾರಕವೆಂದು ಘೋಷಣೆಯಾದರೆ ಅದು ನನ್ನ ಗೆಲುವು. ಇಲ್ಲದೇ ಹೋದರೆ, ಅದು 2024ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಸೋಲು ಎಂದು ಬರೆದಿದ್ದಾರೆ.
Advertisement
Today SC took the “Ram Setu as Ancient Heritage Monument” to near finality. The Court directed to Govt to file a yes no affidavit. If yes then my victory. If no, then it Modi‘s defeat in 2024. Satya Sabharwal was as usual a super researcher and drafter of petition for me.
— Subramanian Swamy (@Swamy39) August 22, 2022
Advertisement
ಪ್ರಾಚೀನ ಪುರಾಣದ ದಂತಕತೆಗಳನ್ನೊಳಗೊಂಡ ರಾಮಸೇತು ಸುಣ್ಣದ ಕಲ್ಲುಗಳಿಂದ ಮಾಡಲ್ಪಟ್ಟಿದೆ. ಇದು ತಮಿಳುನಾಡಿನ ಆಗ್ನೇಯ ಕರಾವಳಿಯ ರಾಮೇಶ್ವರದಿಂದ ಶ್ರೀಲಂಕಾದ ವಾಯುವ್ಯ ಕರಾವಳಿಯ ಮನ್ನಾರ್ ದ್ವೀಪಕ್ಕೆ ಸಂಪರ್ಕಿಸುತ್ತದೆ. ಹಿಂದೂ ಪುರಾಣ ಹಾಗೂ ರಾಮಾಯಣದಲ್ಲಿ ರಾಮನು ರಾವಣನ ವಿರುದ್ಧ ಹೋರಾಡಲು ಲಂಕೆಗೆ ಹೋಗುತ್ತಿದ್ದಾಗ ರಾಮನ ಸೈನ್ಯ ಈ ಸೇತುವೆ ನಿರ್ಮಾಣ ಮಾಡಿದೆ ಎಂದು ಉಲ್ಲೇಖವಿದೆ. ಇದನ್ನೂ ಓದಿ: ಸೆಪ್ಟೆಂಬರ್ 2ರಂದು ಪ್ರಧಾನಿ ಮೋದಿ ಮಂಗಳೂರಿಗೆ ಭೇಟಿ
Advertisement
Advertisement
ರಾಮಸೇತು 48 ಕಿ.ಮೀ ಉದ್ದವಿದೆ. ಕೆಲವೆಡೆ ಸೇತುವೆ ಶುಷ್ಕವಾಗಿದ್ದು, ಇನ್ನೂ ಕೆಲವೆಡೆ 1 ಮೀ. ವರೆಗೆ ಸಮುದ್ರದಲ್ಲಿ ಮುಳುಗಿ ಹೋಗಿದೆ. ಹೀಗಾಗಿ ಅದರಲ್ಲಿ ಸಂಚರಿಸುವುದು ಕಷ್ಟಕರವಾಗಿದೆ. ಇದನ್ನೂ ಓದಿ: ಸ್ಕಾಲರ್ಶಿಪ್‌ಗಾಗಿ ಜೆಎನ್‌ಯು ವಿದ್ಯಾರ್ಥಿಗಳು, ಸಿಬ್ಬಂದಿ ನಡುವೆ ಸಂಘರ್ಷ- 6 ವಿದ್ಯಾರ್ಥಿಗಳಿಗೆ ಗಾಯ