ಮುಂಬೈ: ಕಳೆದ 4 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿರುವ ಭ್ರಷ್ಟಾಚಾರ ವಿರೋಧಿ ಹೋರಾಟಗಾರ ಅಣ್ಣಾ ಹಜಾರೆ ಅವರು, ತನ್ನ ಜೀವಕ್ಕೆ ಎನಾದರೂ ಹೆಚ್ಚು ಕಡಿಮೆಯಾದರೇ ಅದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರೇ ನೇರ ಹೊಣೆ ಎಂದು ಕಿಡಿಕಾರಿದ್ದಾರೆ.
ಅಣ್ಣಾ ಹಜಾರೆ ಅವರು “ಲೋಕಪಾಲ” ವನ್ನು ಕೇಂದ್ರದಲ್ಲಿ ಹಾಗೂ “ಲೋಕಾಯುಕ್ತ” ವನ್ನು ಎಲ್ಲಾ ರಾಜ್ಯಗಳಲ್ಲಿ ಜಾರಿಗೆ ತರಬೇಕು ಎಂದು ಒತ್ತಾಯಿಸಿ ಜನವರಿ 30ರಿಂದ `ಜನ್ ಆಂದೋಲನ್ ಸತ್ಯಾಗ್ರಹ’ ವನ್ನು ಮಹಾರಾಷ್ಟ್ರದ ರಾಲೇಗನ್ ಸಿದ್ಧಿ ಗ್ರಾಮದಲ್ಲಿ ನಡೆಸುತ್ತಿದ್ದಾರೆ. ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಕೇಂದ್ರದಲ್ಲಿ ನರೇಂದ್ರ ಮೋದಿ ಸರ್ಕಾರ ಭ್ರಷ್ಟಾಚಾರ ವಿರೋಧಿ ಇಲಾಖೆಯನ್ನು ಕಾರ್ಯರೋಪಕ್ಕೆ ತರುವಲ್ಲಿ ವಿಫಲವಾಗಿದೆ ಎಂದರು.
Advertisement
Advertisement
ಲೋಕಾಪಾಲ್ ಹಾಗೂ ಲೋಕಾಯುಕ್ತ ಕಾರ್ಯರೂಪಕ್ಕೆ ಬಂದರೆ ಮಂತ್ರಿಗಳು ಹಾಗೂ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದರೆ ಸಿಕ್ಕಿ ಹಾಕಿಕೊಳ್ಳುತ್ತಾರೆ. ಆದ್ದರಿಂದ ಲೋಕಾಪಾಲ್ ಹಾಗೂ ಲೋಕಾಯುಕ್ತವನ್ನು ಜಾರಿಗೆ ತರುತ್ತಿಲ್ಲ. ಇದರಲ್ಲಿ ಒಂದು ವೇಳೆ ಪ್ರಧಾನಿ ಭ್ರಷ್ಟಾಚಾರದಲ್ಲಿ ಶಾಮೀಲಾಗಿದ್ದರೇ ಅವರ ವಿರುದ್ಧವು ಸಾರ್ವಜನಿಕರು ಸಾಕ್ಷಿ ನೀಡಬಹುದು. ಆದರಿಂದ ಯಾವ ಪಕ್ಷವು ಈ ಮಸೂದೆಯನ್ನು ಕಾರ್ಯರೂಪಕ್ಕೆ ತರುತ್ತಿಲ್ಲ ಎಂದು ಆಕ್ರೋಶ ಹೊರಹಾಕಿದರು.
Advertisement
Advertisement
ದೇಶದಲ್ಲಿ ಯಾವ ರಾಜಕೀಯ ಪಕ್ಷಕ್ಕೂ ಲೋಕಪಾಲ ಜಾರಿಗೆ ಬರುವುದು ಇಷ್ಟವಿಲ್ಲ. 2013ರಲ್ಲೇ ಲೋಕಪಾಲ್ ಮಸೂದೆಯನ್ನು ಅಂಗೀಕರಿಸಲಾಗಿದೆ. ಆದ್ರೆ ಎನ್‍ಡಿಎ ಸರ್ಕಾರ ಮಾತ್ರ ಅದನ್ನ ಜಾರಿಗೆ ತರುತ್ತಿಲ್ಲ, ಭ್ರಷ್ಟಾಚಾರ ಮುಕ್ತ ದೇಶವನ್ನು ಕಟ್ಟಲು ಮುಂದಾಗುತ್ತಿಲ್ಲ ಎಂದು ಕೇಂದ್ರ ಸರ್ಕಾರದ ವಿರುದ್ಧ ಅಣ್ಣಾ ಹಜಾರೆ ಅವರು ಬೇಸರ ವ್ಯಕ್ತಪಡಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv