ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಅವರ ಪತ್ನಿ ಜಶೋದಾ ಬೆನ್ ಅವರು ಇಂದು ಜಿಲ್ಲೆಯ ಹೊಸನಗರ ತಾಲೂಕಿನ ರಾಮಚಂದ್ರಪುರ ಮಠಕ್ಕೆ ಭೇಟಿ ನೀಡಿ, ಮಠದಲ್ಲಿ ನಡೆಯುತ್ತಿದ್ದ ಕೃಷ್ಣಾರ್ಪಣಂ ಧಾರ್ಮಿಕ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
Advertisement
ಮೊದಲು ಇಲ್ಲಿನ ಗೋವರ್ಧನ ಗಿರಿ ಶ್ರೀ ಗೋಪಾಲಕೃಷ್ಣ ದೇವಾಲಯಕ್ಕೆ ಜಶೋದಾ ಬೆನ್ ಅವರು ಭೇಟಿ ನೀಡಿ ಪೂಜೆ ನೆರವೇರಿಸಿದರು. ಆ ಬಳಿಕ ರಾಘವೇಶ್ವರ ಭಾರತೀ ಶ್ರೀಗಳನ್ನು ಭೇಟಿ ಮಾಡಿ ಆಶೀರ್ವಾದ ಪಡೆದರು. ಈ ವೇಳೆ ಮಠದ ಆವರಣದಲ್ಲಿ ನಡೆಸಲಾದ ಶ್ರೀ ರಾಘವೇಶ್ವರ ಭಾರತೀ ಸ್ವಾಮೀಜಿ ಸಾನಿಧ್ಯ ವಹಿಸಿದ್ದ ಕೃಷ್ಣಾರ್ಪಣಂ ಕಾರ್ಯಕ್ರಮದಲ್ಲಿ ಪಾಲ್ಗೊಂಡು ವೇದಿಕೆ ಹಂಚಿಕೊಂಡರು.
Advertisement
Advertisement
ವಿಷ್ಣು ಸಹಸ್ರನಾಮ ಪಠಣದ ವೇಳೆ ಪ್ರಾರ್ಥನಾ ಗೀತೆ ಹಾಡಿದ ಜಶೋದಾ ಅವರು ಕಾರ್ಯಕ್ರಮದಲ್ಲಿ ನೆರೆದಿದ್ದ ಭಕ್ತರನ್ನುದ್ದೇಶಿಸಿ ಮಾತನಾಡಿದರು.
Advertisement
ಚಿತ್ರದುರ್ಗದ ನೀಲಕಂಠೇಶ್ವರನಿಗೆ ಪೂಜೆ:
ಮೋದಿ ಅವರ ಪತ್ನಿ ರಾಮಚಂದ್ರಾಪುರ ಮಠಕ್ಕೆ ಬರುವ ಮಾರ್ಗ ಮಧ್ಯೆ ಚಿತ್ರದುರ್ಗದಲ್ಲಿ ಕೆಲಕಾಲ ವಿಶ್ರಾಂತಿ ಪಡೆದರು. ಜಶೋದಾ ಅವರು ನಿತ್ಯ ಬೆಳಿಗ್ಗೆ ಶಿವನ ದರ್ಶನ ಪಡೆಯದೇ ನೀರು ಸಹ ಕುಡಿಯುವುದಿಲ್ಲ. ಹೀಗಾಗಿ ಶಿವನ ದೇಗುಲ ಹುಡುಕಿಕೊಂಡು ಅವರು ನೀಲಕಂಠೇಶ್ವರಸ್ವಾಮಿ ದೇಗುಲಕ್ಕೆ ಬಂದಿದ್ದರು. ಸ್ವಾಮಿಯ ದರ್ಶನ ಪಡೆದು ಪೂಜೆ ಸಲ್ಲಿಸಿದ್ದರು. ಸುಮಾರು 20 ನಿಮಿಷ ದೇಗುಲದಲ್ಲಿದ್ದರು.
ಪ್ರವಾಸಿ ಮಂದಿರದಲ್ಲಿ ಅವರಿಗೆ ಬೆಳಗಿನ ಉಪಾಹಾರ ವ್ಯವಸ್ಥೆ ಮಾಡಲಾಗಿತ್ತು. ಉಪಾಹಾರ ಸೇವನೆಗೂ ಮುನ್ನ ಅಶ್ವತ್ಥಾ ವೃಕ್ಷಕ್ಕೆ ಪೂಜೆ ಸಲ್ಲಿಸುವ ಇಚ್ಛೆ ವ್ಯಕ್ತಪಡಿಸಿದ್ದರು. ಆದರೆ, ಅಶ್ವತ್ಥಾ ಮರದ ಕಟ್ಟೆ ಸಿಗದೇ, ಅತ್ತಿ ಮರ ಸುತ್ತಿ ಭಕ್ತಿ ಸಮರ್ಪಿಸಿದ ಬಳಿಕ ಆಹಾರ ಸೇವನೆ ಮಾಡಿದ್ದರು.