ಅಹಮದಾಬಾದ್: 2 ದಿನಗಳ ಕಾಲ ಭಾರತದ ಪ್ರವಾಸಕ್ಕೆ ಆಗಮಿಸಿದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಭವ್ಯವಾದ ಸ್ವಾಗತ ನೀಡಲಾಯಿತು.
ಬೆಳಗ್ಗೆ 11.36ಕ್ಕೆ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆದ ಏರ್ ಫೋರ್ಸ್ ವಿಮಾನದಿಂದ ಆರಂಭದಲ್ಲಿ ಪುತ್ರಿ ಇವಾಂಕ ಟ್ರಂಪ್ ಕೆಳಗಡೆ ಇಳಿದರು.
Advertisement
ಇವಾಂಕ ಇಳಿದ ಬಳಿಕ ವಿಮಾನ ನಿಲ್ದಾಣಕ್ಕೆ ಕಾರಿನಲ್ಲಿ ಪ್ರಧಾನಿ ಮೋದಿ ಆಗಮಿಸಿದರು. ಮೋದಿ ಬಂದ ನಂತರ ವಿಮಾನದಿಂದ ಡೊನಾಲ್ಡ್ ಟ್ರಂಪ್, ಪತ್ನಿ ಮೆಲಾನಿಯಾರೊಂದಿಗೆ ಕೆಳಗಡೆ ಇಳಿದರು.
Advertisement
#WATCH Prime Minister Narendra Modi hugs US President Donald Trump as he receives him at Ahmedabad Airport. pic.twitter.com/rcrklU0Jz8
— ANI (@ANI) February 24, 2020
Advertisement
ಭಾರತದ ನೆಲಕ್ಕೆ ಕಾಲಿಟ್ಟ ಕೂಡಲೇ ಪ್ರಧಾನಿ ಮೋದಿ ಟ್ರಂಪ್ ಅವರನ್ನು ಅಪ್ಪಿಕೊಂಡು ಬರಮಾಡಿಕೊಂಡರು. ನಂತರ ಮೋದಿ ಅಧಿಕಾರಿ ವರ್ಗದ ಸದಸ್ಯರನ್ನು ಗುಜರಾತ್ ಮುಖ್ಯಮಂತ್ರಿ ವಿಜಯ್ ರೂಪಾನಿ ಅವರನ್ನು ಟ್ರಂಪ್ ಅವರಿಗೆ ಪರಿಚಯಿಸಿದರು.
Advertisement
ನಡೆದುಕೊಂಡು ಬರುತ್ತಿದ್ದಂತೆ ಸೇನೆಯಿದ ಟ್ರಂಪ್ ಅವರಿಗೆ ಗೌರವ ವಂದನೆ ನೀಡಲಾಯಿತು. ಈ ಸಂದರ್ಭದಲ್ಲಿ ಗುಜರಾತಿನ ಸಾಂಸ್ಕತಿಕ ಕಲಾ ತಂಡದ ಸದಸ್ಯರು ನೃತ್ಯದ ಮೂಲಕ ಟ್ರಂಪ್ ಅವರನ್ನು ಸ್ವಾಗತಿಸಿದರು.
हम भारत आने के लिए तत्पर हैं । हम रास्ते में हैँ, कुछ ही घंटों में हम सबसे मिलेंगे!
— Donald J. Trump (@realDonaldTrump) February 24, 2020