– ದೆಹಲಿಯಲ್ಲಿ ಕುಳಿತವರ ನಿರ್ದೇಶನದಂತೆ ನಿತೀಶ್ ಕುಮಾರ್ ಕೆಲಸ ಮಾಡ್ತಾರೆ ಅಂತ ವಾಗ್ದಾಳಿ
ಪಾಟ್ನಾ: ಪ್ರಧಾನಿ ಮೋದಿ (PM Modi) ಅವರು ಯುವಜನತೆಗೆ ರೀಲ್ಸ್ ನಶೆ ಏರಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಯುವಕರು ರೀಲ್ಸ್ ಮಾಡಿಕೊಂಡು ಇರುವಂತೆ ಉತ್ತೇಜಿಸುತ್ತಿದ್ದಾರೆಂದು ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ (Rahul Gandhi) ವಾಗ್ದಾಳಿ ನಡೆಸಿದ್ದಾರೆ.
ಔರಂಗಾಬಾದ್‌ನಲ್ಲಿ ನಡೆದ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ಮೋದಿ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಸನವನ್ನು ಉತ್ತೇಜಿಸುತ್ತಿದ್ದಾರೆ ಎಂದು ಆರೋಪಿಸಿದರು. ಪ್ರಧಾನಿ ಮೋದಿ ನೀವು ರೀಲ್ಸ್ ಮಾಡುವ ಮೂಲಕ ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ವ್ಯಸನಿಯಾಗಬೇಕೆಂದು ಬಯಸುತ್ತಾರೆ. ಇದು 21ನೇ ಶತಮಾನದ ಹೊಸ ‘ನಶಾ’. ಯುವಕರು ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗದ ಸಮಸ್ಯೆಗಳಿಗೆ ತಮ್ಮ ಸರ್ಕಾರವನ್ನು ಹೊಣೆಗಾರರನ್ನಾಗಿ ಮಾಡದಿರುವಂತೆ ನೋಡಿಕೊಳ್ಳಲು ಈ ನಶೆ ಬಳಸಲಾಗುತ್ತಿದೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಲಾಲು, ರಾಹುಲ್ ಒಳನುಸುಳುಕೋರರನ್ನು ರಕ್ಷಿಸಲು ಬಯಸುತ್ತಾರೆ: ಅಮಿತ್ ಶಾ

ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ನವದೆಹಲಿಯಲ್ಲಿ ಕುಳಿತವರ ನಿರ್ದೇಶನದಂತೆ ಕೆಲಸ ಮಾಡುತ್ತಿದ್ದಾರೆ. ನಿತೀಶ್ ಕುಮಾರ್ ರಾಜ್ಯದ ಯುವಕರಿಗಿದ್ದ ಎಲ್ಲಾ ಉದ್ಯೋಗಾವಕಾಶಗಳನ್ನು ನಾಶಪಡಿಸಿದ್ದಾರೆ ಎಂದು ಆಕ್ರೋಶ ಹೊರಹಾಕಿದ್ದಾರೆ.
ಎನ್‌ಡಿಎ ವಿಧಾನಸಭಾ ಚುನಾವಣೆಯಲ್ಲಿ ಗೆಲ್ಲುವುದಿಲ್ಲ ಎಂದು ಪ್ರಧಾನಿ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ಅವರಿಗೆ ತಿಳಿದಿರುವುದರಿಂದ ಅವರು ‘ಮತ ಕಳ್ಳತನ’ದಲ್ಲಿ ತೊಡಗಿದ್ದಾರೆ. ಹಿಂದೆ ಹಲವು ರಾಜ್ಯಗಳಲ್ಲಿ ಇದನ್ನೇ ಮಾಡಿದ್ದಾರೆ. ಆದರೆ, ಅದನ್ನು ಬಿಹಾರದಲ್ಲಿ ಮಾಡಲು ಸಾಧ್ಯವಿಲ್ಲ. ಬಿಹಾರದಲ್ಲಿ ಇಂಡಿಯಾ ಒಕ್ಕೂಟ ಅಧಿಕಾರಕ್ಕೆ ಬಂದರೆ, ಅತ್ಯಂತ ಹಿಂದುಳಿದ, ಸಾಮಾಜಿಕವಾಗಿ ಅಂಚಿನಲ್ಲಿರುವ ದಲಿತರ ಸರ್ಕಾರವಾಗುತ್ತದೆ ಎಂಬುದು ಅವರಿಗೆ ಬೇಸರದ ಸಂಗತಿ ಎಂದು ಕುಟುಕಿದ್ದಾರೆ. ಇದನ್ನೂ ಓದಿ: ಮಹಾಘಟಬಂಧನ್ ಅಧಿಕಾರಕ್ಕೆ ಬಂದ್ರೆ ಸಂಕ್ರಾಂತಿಯಂದು ಮಹಿಳೆಯರಿಗೆ 30,000 ರೂ. ಗಿಫ್ಟ್ – ತೇಜಸ್ವಿ ಯಾದವ್

