ಗಾಂಧಿನಗರ: ಮೋರ್ಬಿ ತೂಗುಸೇತುವೆ ದುರಂತ (Morbi Bridge Collapse) ಸಂಬಂಧ ರಕ್ಷಣಾ ಕಾರ್ಯಾಚರಣೆ ಬಹುತೇಕ ಅಂತ್ಯಗೊಂಡಿದೆ. ಸರ್ಕಾರದ ಅಧಿಕೃತ ಮಾಹಿತಿ ಪ್ರಕಾರ ದುರಂತದಲ್ಲಿ 135 ಮಂದಿ ಮೃತಪಟ್ಟಿದ್ದು, ಇಬ್ಬರು ನಾಪತ್ತೆಯಾಗಿದ್ದಾರೆ.
Went to Morbi, which witnessed the horrific bridge mishap. Met the bereaved families and extended condolences. I visited the site of the tragedy and went to the hospital where the injured are recovering. Also met those involved in rescue ops and chaired a review meeting. pic.twitter.com/hAZnJFIHh8
— Narendra Modi (@narendramodi) November 1, 2022
Advertisement
ಮೃತರ ಕುಟುಂಬಗಳಿಗೆ ಗುಜರಾತ್ ಸರ್ಕಾರ (Gujarat Government) 5.40 ಕೋಟಿ ಪರಿಹಾರ ವಿತರಿಸಿದೆ. ನಾಳೆ ಗುಜರಾತ್‌ನಲ್ಲಿ ಶೋಕಾಚರಣೆಗೆ ಸರ್ಕಾರ ನಿರ್ಧರಿಸಿದೆ. ಈ ಮಧ್ಯೆ, ಇವತ್ತು ಮೋರ್ಬಿಗೆ ಪ್ರಧಾನಿ ಮೋದಿ (Narendra Modi) ಭೇಟಿ ನೀಡಿದ್ದು, ಗಾಯಾಳುಗಳ ಆರೋಗ್ಯ ವಿಚಾರಿಸಿ, ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಇದನ್ನೂ ಓದಿ: ನಮಗೆ ಪ್ರಧಾನಿ ಬೇಕು, ಜೋಕರ್ ಅಲ್ಲ – `ಗೋ-ಬ್ಯಾಕ್ ಮೋದಿ’ ಅಭಿಯಾನ
Advertisement
Advertisement
ಎಸ್‌ಪಿ ಕಚೇರಿಯಲ್ಲಿ ಸಿಎಂ (Chief Minister) ಜೊತೆ ಮಹತ್ವದ ಸಭೆ ನಡೆಸಿದ್ದಾರೆ. ಮೋದಿ ಆಗಮನ ಕಾರಣ ನಿನ್ನೆ ರಾತ್ರಿ ತರಾತುರಿಯಲ್ಲಿ ಮೋರ್ಬಿ ಸರ್ಕಾರಿ ಆಸ್ಪತ್ರೆಗೆ (Hospital) ಸುಣ್ಣ-ಬಣ್ಣ ಬಳಿದಿದ್ದು, ವಿಪಕ್ಷಗಳಿಗೆ ಆಹಾರವಾಗಿದೆ. ದುರಂತಕ್ಕೆ ಕಾರಣರಾದವರ ವಿರುದ್ಧ ಈವರೆಗೂ ಯಾವುದೇ ಕ್ರಮ ಇಲ್ಲ. ಆದ್ರೆ ಫೋಟೋಶೂಟ್‌ಗಾಗಿ ಹೇಗೆಲ್ಲಾ ಮಾಡ್ತಿದ್ದಾರೆ ಎಂದು ಎಎಪಿ (AAP) ಕಿಡಿಕಾರಿದೆ. ಇದನ್ನೂ ಓದಿ: ಮೋದಿ ಬರ್ತಾರೆ ಅಂತ ರಾತ್ರೋರಾತ್ರಿ ಆಸ್ಪತ್ರೆ ಕ್ಲೀನ್
Advertisement
ಭಾರೀ ಭ್ರಷ್ಟಾಚಾರದ ಕಾರಣ ಈ ದುರಂತ ಸಂಭವಿಸಿದೆ. ಇದು ಸರ್ಕಾರವೇ ನಡೆಸಿದ ಸರ್ಕಾರಿ ಕೊಲೆ ಎಂದು ಸಿಎಂ ಕೇಜ್ರಿವಾಲ್ (Arvind Kejriwal) ಆಪಾದಿಸಿದ್ದಾರೆ. ಆದರೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಇದನ್ನ ನಾನು ರಾಜಕೀಯಗೊಳಿಸಲು ಬಯಸಲ್ಲ ಎಂದು ಮೃದುಸ್ವಭಾವ ತೋರಿಸಿದ್ದಾರೆ.
ಈ ಮಧ್ಯೆ ಮೋರ್ಬಿ ದುರಂತದ ಬಗ್ಗೆ ಸುಪ್ರೀಂಕೋರ್ಟ್ (Supreme Court) ನಿವೃತ್ತ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ಉನ್ನತಮಟ್ಟದ ತನಿಖೆಗೆ ಕೋರಿ ವಕೀಲರೊಬ್ಬರು ಪಿಐಎಲ್ (ಸಾರ್ವಜನಿಕ ಹಿತಾಸಕ್ತಿ ಅರ್ಜಿ) ಸಲ್ಲಿಸಿದ್ದು, ಈ ಅರ್ಜಿಯ ವಿಚಾರಣೆಗೆ ಸಮ್ಮತಿ ಸೂಚಿಸಿದೆ. ನವೆಂಬರ್ 14ರಂದು ಸುಪ್ರೀಂಕೋರ್ಟ್ ಈ ಅರ್ಜಿ ವಿಚಾರಣೆ ನಡೆಸಲಿದೆ.