-ಸಿಎಂಗಳ ಜೊತೆಗಿನ ವಿಡಿಯೋ ಕಾನ್ಫರೆನ್ಸ್ ಅಂತ್ಯ
ನವದೆಹಲಿ: ಸಿಎಂಗಳ ಜೊತೆಗಿನ ಪ್ರಧಾನಿಗಳ ವಿಡಿಯೋ ಕಾನ್ಫರೆನ್ಸ್ ಅಂತ್ಯವಾಗಿದ್ದು, ಕೊರೊನಾ ವಿರುದ್ಧದ ಯುದ್ಧದಲ್ಲಿ ಲಾಕ್‍ಡೌನ್ ಒಂದು ವೆಪನ್ ಅಷ್ಟೇ, ಅದನ್ನ ಜಾಸ್ತಿ ದಿನ ಬಳಸಲು ಆಗಲ್ಲ ಎಂಬ ಮಾತನ್ನು ಪ್ರಧಾನಿಗಳು ಹೇಳಿದ್ದಾರೆ.
ಮಾನ್ಯ ಪ್ರಧಾನ ಮಂತ್ರಿ ಶ್ರೀ @narendramodi ಅವರು ನಡೆಸಿದ ವಿಡಿಯೋ ಕಾನ್ಫರೆನ್ಸ್ ನಲ್ಲಿ ಮಾನ್ಯ ಮುಖ್ಯಮಂತ್ರಿ ಶ್ರೀ @BSYBJP ಅವರು ಮಂಡಿಸಿದ ಅಂಶಗಳು.#KarnatakaFightsCorona #IndiaFightsCorona pic.twitter.com/iLacdBN98y
— CM of Karnataka (@CMofKarnataka) May 11, 2020
Advertisement
ಈಗಾಗಲೇ ಸಾಮಾಜಿಕ ಅಂತರವನ್ನು ಹೇಳಿಕೊಟ್ಟಿದ್ದೇವೆ. ಮುಂದಿನ ದಿನಗಳಲ್ಲಿ ಹೊಸ ತಂತ್ರಜ್ಞಾನದ ಮೊರೆ ಹೋಗಬೇಕಾಗುತ್ತದೆ. ಮೊದಲ ಮಹಾಯುದ್ಧ, ಎರಡನೇ ಮಹಾಯುದ್ಧದ ಬಳಿಕ ಸಾಕಷ್ಟು ತಂತ್ರಜ್ಞಾನ ಬಂತು. ಕೊರೊನಾದಿಂದ ತಂತ್ರಜ್ಞಾನ ಬೇರೆ ರೀತಿ ಅಭಿವೃದ್ಧಿ ಆಗುತ್ತೆ. ಹಾಗಾಗಿ ಹೊಸ ಹೊಸ ಟೆಕ್ನಿಕ್ ಬಳಸಬೇಕು ಎಂದು ರಾಜ್ಯದ ಸಿಎಂಗಳಿಗೆ ಪ್ರಧಾನಿಗಳು ಕರೆ ನೀಡಿದ್ದಾರೆ.
Advertisement
ಮುಖ್ಯಮಂತ್ರಿ ಶ್ರೀ @BSYBJP ಅವರು, ರಾಜ್ಯದಲ್ಲಿ ಕೋವಿಡ್ 19 ನಿಯಂತ್ರಣ ಹಾಗೂ ಸದ್ಯದ ಸ್ಥಿತಿಗತಿಗೆ ಸಂಬಂಧಿಸಿದಂತೆ ಮಾನ್ಯ ಪ್ರಧಾನ ಮಂತ್ರಿ ಶ್ರೀ @narendramodi ಅವರು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳ ಜತೆ ನಡೆಸಿದ ವಿಡಿಯೋ ಸಂವಾದದ ಕುರಿತು ಮಾಹಿತಿ ಒದಗಿಸಿದರು.
1/2 pic.twitter.com/ZHhz5TYcxX
— CM of Karnataka (@CMofKarnataka) May 11, 2020
Advertisement
ರಾಜ್ಯದ ಸ್ಥಿತಿಗತಿ ಬಗ್ಗೆ ಈ ವಾರದೊಳಗೆ ವಲಯವಾರು ವರದಿಯನ್ನು ಲಿಖಿತ ರೂಪದಲ್ಲಿ ನೀಡಿ. ನಿಮ್ಮ ವರದಿಗಳ ಆಧಾರದ ಮೇಲೆ ಕೇಂದ್ರ ಪರಿಷ್ಕೃತ ಮಾರ್ಗಸೂಚಿ ಪ್ರಕಟ ಮಾಡುತ್ತೆ. ವಲಯವಾರು ವರದಿ ನೀಡುವಾಗ ಅಲ್ಲಿನ ಝೋನ್ ಡಿವೈಡ್ ಬಗ್ಗೆಯೂ ಮಾಹಿತಿಯನ್ನು ನೀಡಬೇಕು ಎಂದು ಪ್ರಧಾನಿಗಳು ಸೂಚಿಸಿದ್ದಾರೆ.
Advertisement
ಬೆಂಗಳೂರಿಗೆ ವಿಮಾನ ಹಾರಾಟ ಬೇಡ- ಪ್ರಧಾನಿ ಮೋದಿಗೆ ಸಿಎಂ ಬಿಎಸ್‍ವೈ ಸಲಹೆ!https://t.co/nSrDXvXxDm#CMYeddyurappa #PMModi #Lockdown #CoronaLockdown #COVID19
— PublicTV (@publictvnews) May 11, 2020
ರಾಜ್ಯ ಸರ್ಕಾರಗಳು ಖಾಸಗಿ ಆಸ್ಪತ್ರೆಗಳನ್ನ ತೆರೆಯಲು ಅವಕಾಶ ಕೊಡುವದ ಜೊತೆಗೆ ಮಳೆಗಾಲ ಆರಂಭವಾಗುತ್ತೆ ಅನ್ನೋದು ಎಲ್ಲರ ನೆನಪಿನಲ್ಲಿರಲಿ. ಟೆಲಿಮೆಡಿಶಿನ್ ಬಗ್ಗೆಯೂ ಅಗತ್ಯ ಕ್ರಮಕೈಗೊಳ್ಳಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.