LatestLeading NewsMain PostNational

ದೈನಂದಿನ ಜೀವನದ ಭಾಗವಾಗಲಿ ಯೋಗ – ಪ್ರಧಾನಿ ಮೋದಿ ಕರೆ

Advertisements

ನವದೆಹಲಿ: ಆಜಾದಿ ಕಾ ಅಮೃತ್ ಮಹೋತ್ಸವ ಹಾಗೂ ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಮೈಸೂರಿನಲ್ಲಿ ನಡೆಯಲಿರುವ ಬೃಹತ್ ಯೋಗ ಪ್ರದರ್ಶನ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸುತ್ತಿದ್ದು, ಅಂದು ಮೈಸೂರಿನ ಅಂಬಾವಿಲಾಸ ಅರಮನೆ ಆವರಣದಲ್ಲಿ ಸಾವಿರಾರು ಮಂದಿ ಯೋಗ ಮಾಡಲಿದ್ದಾರೆ.

ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಯೋಗ ದಿನಕ್ಕೆ ಸಂದೇಶ ನೀಡಿದ್ದು, ಯೋಗವನ್ನು ತಮ್ಮ ದೈನಂದಿನ ಜೀವನದ ಭಾಗವಾಗಿ ಅಳವಡಿಸಿಕೊಳ್ಳುವಂತೆ ಕರೆ ನೀಡಿದ್ದಾರೆ. ಇದನ್ನೂ ಓದಿ: ಮೇಕ್ ಇನ್ ಇಂಡಿಯಾಗೆ ಉತ್ತೇಜನ – 96 ಸುಧಾರಿತ ಯುದ್ಧ ವಿಮಾನ ತಯಾರಿಸಲು ಐಎಎಫ್ ಯೋಜನೆ

ಈ ಕುರಿತು ಟ್ವೀಟ್ ಮಾಡಿರುವ ಅವರು, ಮುಂಬರುವ ದಿನಗಳಲ್ಲಿ ವಿಶ್ವವೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಆಚರಿಸಲಿದೆ. ಈ ದಿನವನ್ನು ಆಚರಿಸುವ ಮೂಲಕ ಯೋಗ ನಿಮ್ಮ ದೈನಂದಿನ ಜೀವನದ ಭಾಗವಾಗಿ ಅಳವಡಿಸಿಕೊಳ್ಳಬೇಕು. ಏಕೆಂದರೆ ಇದರಲ್ಲಿ ಹಲವು ಪ್ರಯೋಜನಗಳಿವೆ ಎಂದೂ ಅವರು ಟ್ವೀಟ್ ಮೂಲಕ ತಿಳಿಸಿದ್ದಾರೆ.

ಇದರೊಂದಿಗೆ ಯೋಗ ಪ್ರದರ್ಶನ ಹಾಗೂ ಪ್ರಯೋಜನಗಳನ್ನು ತಿಳಿಸುವ ವೀಡಿಯೋ ಲಿಂಕ್ ಒಂದನ್ನು ಲಗತ್ತಿಸಿದ್ದಾರೆ. ಇದನ್ನೂ ಓದಿ: 2 ವಾರದಿಂದ ಸಿಕ್ಕಿಲ್ಲ ಸೈನಿಕರು – ಮುಂದುವರಿದ ಶೋಧಕಾರ್ಯ

Narendra modi

ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ನಡೆದ ತಮ್ಮ 89ನೇ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಅಂತಾರಾಷ್ಟ್ರೀಯ ಯೋಗ ದಿನದ ಕುರಿತು ಮಾತನಾಡಿದ್ದರು.

ಈ ಬಾರಿ ಪ್ರತಿಯೊಬ್ಬರೂ ಯೋಗ ದಿನವನ್ನು ಆಚರಿಸಬೇಕು. ಅದಕ್ಕಾಗಿ ನಿಮ್ಮ ನಗರ, ಪಟ್ಟಣ ಅಥವಾ ಹಳ್ಳಿಯಲ್ಲಿನ ಯಾವುದಾರೂ ವಿಶೇಷ ಸ್ಥಳವನ್ನು ಆಯ್ಕೆ ಮಾಡಿಕೊಳ್ಳಿ. ಅದು ಪುರಾತನ ದೇವಾಲಯವಾಗಿರಬಹುದು, ಪ್ರವಾಸಿ ಕೇಂದ್ರವಾಗಿರಬಹುದು ಅಥವಾ ಪ್ರಸಿದ್ಧ ನದಿಯ ತಪ್ಪಲಾಗಿರಬಹುದು. ಅಲ್ಲಿ ಯೋಗ ಪ್ರದರ್ಶನ ಮಾಡುವುದರಿಂದ ನಿಮ್ಮ ಪ್ರದೇಶವನ್ನೂ ಗುರುತಿಸಿದಂತಾಗುತ್ತದೆ. ಜೊತೆಗೆ ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಗುತ್ತದೆ ಎಂದು ಅವರು ಸಲಹೆ ನೀಡಿದ್ದರು.

Leave a Reply

Your email address will not be published.

Back to top button