ಟೋಕಿಯೊ: ತಂತ್ರಜ್ಞಾನ ಮತ್ತು ಪ್ರತಿಭೆ ಕೇಂದ್ರಿತ ಭವಿಷ್ಯದ ಬಗ್ಗೆ ಭಾರತವು ಹೆಚ್ಚು ಆಶಾವಾದಿಯಾಗಿದೆ. ಜಪಾನ್ ಯುವಕರು ಒಮ್ಮೆಯಾದರೂ ಭಾರತಕ್ಕೆ ಭೇಟಿ ನೀಡಬೇಕು ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಆಹ್ವಾನ ನೀಡಿದರು.
ಭಾರತೀಯ ಸಮುದಾಯದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಮೋದಿ ಅವರು, ಸ್ವಾಮಿ ವಿವೇಕಾನಂದರು ಜಪಾನ್‌ನಿಂದ ಪ್ರಭಾವಿತರಾಗಿದ್ದರು. ಭಾರತದ ಯುವಕರು ತಮ್ಮ ಜೀವನದಲ್ಲಿ ಒಮ್ಮೆಯಾದರೂ ಜಪಾನ್‌ಗೆ ಭೇಟಿ ನೀಡಬೇಕು ಎಂದು ಆಶಯ ವ್ಯಕ್ತಪಡಿಸಿದ್ದರು ಎಂದು ಸ್ಮರಿಸಿದರು. ಇದನ್ನೂ ಓದಿ: ಭಾರತದ ಸ್ಮಾರ್ಟ್ ಸಿಟಿ, 5ಜಿ ಯೋಜನೆಗೆ ಕೊಡುಗೆ ನೀಡಲು ಮುಂದಾದ ಜಪಾನ್
Advertisement
Advertisement
ಈ ಸದ್ಭಾವನೆಯನ್ನು ಮುಂದುವರಿಸೋಣ. ಅದಕ್ಕಾಗಿ ಜಪಾನ್ ಯುವಕರು ತಮ್ಮ ಜೀವನದಲ್ಲಿ ಒಮ್ಮೆಯಾದರೂ ಭಾರತಕ್ಕೆ ಬರಬೇಕು ಎಂದು ನಾನು ಈ ಮೂಲಕ ಆಸೆ ವ್ಯಕ್ತಪಡಿಸಿದ್ದೇನೆ ಎಂದು ತಿಳಿಸಿದರು.
Advertisement
ಜಪಾನ್‌ನಲ್ಲಿರುವ ಭಾರತೀಯರು ಕಾರ್ಯಕ್ರಮದ ಬಗ್ಗೆ ಉತ್ಸುಕತೆ ಹೊಂದಿದ್ದರು. ಪ್ರಧಾನಿ ಮೋದಿ ತಮ್ಮ ಭಾಷಣ ಆರಂಭಿಸುತ್ತಿದ್ದಂತೆ ʼಮೋದಿ ಮೋದಿ, ಜೈ ಶ್ರೀರಾಮ್ʼ ಎಂದು ಘೋಷಣೆಗಳನ್ನು ಕೂಗಿದರು. ಇದನ್ನೂ ಓದಿ: ಉಕ್ರೇನ್ ನಾಗರಿಕನನ್ನು ಕೊಂದ ರಷ್ಯಾ ಸೈನಿಕನಿಗೆ ಜೀವಾವಧಿ ಶಿಕ್ಷೆ
Advertisement
ಕಾರ್ಯಕ್ರಮಕ್ಕಾಗಿ ಭಾರತೀಯ ವಲಸಿಗರಲ್ಲಿ ಅಪಾರ ಉತ್ಸಾಹವಿತ್ತು ಮತ್ತು ಅವರು ತಮ್ಮ ಭಾಷಣವನ್ನು ಪ್ರಾರಂಭಿಸುತ್ತಿದ್ದಂತೆ ‘ಮೋದಿ ಮೋದಿ ಮತ್ತು ಜೈ ಶ್ರೀ ರಾಮ್’ ಘೋಷಣೆಗಳು ಸಭಾಂಗಣದಲ್ಲಿ ಪ್ರತಿಧ್ವನಿಸಿತು.
ನಂತರ ಮಾತು ಮುಂದುವರಿಸಿದ ಪ್ರಧಾನಿ ಮೋದಿ, ಜಪಾನಿಗೆ ಬಂದಾಗಲೆಲ್ಲ ಇಲ್ಲಿನ ಜನರಿಂದ ವಿಪರೀತ ಪ್ರೀತಿ ಸಿಗುತ್ತದೆ. ನಿಮ್ಮಲ್ಲಿ ಕೆಲವರು ವರ್ಷಗಳಿಂದ ಜಪಾನ್‌ನಲ್ಲಿ ನೆಲೆಸಿದ್ದೀರಿ. ಈ ದೇಶದ ಸಂಸ್ಕೃತಿಯನ್ನು ಅಳವಡಿಸಿಕೊಂಡಿದ್ದೀರಿ. ಆದರೂ ಭಾರತೀಯ ಸಂಸ್ಕೃತಿ ಮತ್ತು ಭಾಷೆಯ ಬಗೆಗಿನ ಪ್ರೀತಿ ಸದಾಕಾಲ ಹಾಗೆಯೇ ಇದೆ ಎಂದು ಸಂತಸ ವ್ಯಕ್ತಪಡಿಸಿದರು.