ಮಂಗಳೂರು ಏರ್ಪೋರ್ಟ್‌ನಿಂದ ಗೋವಾಗೆ ಮೋದಿ
ಉಡುಪಿ ಕಾರ್ಯಕ್ರಮ ಮುಗಿಸಿ ಮೋದಿ ಅವರು ಮಂಗಳೂರು ಏರ್‌ಪೋರ್ಟ್‌ಗೆ ತೆರಳಿದರು. ಅಲ್ಲಿಂದ ಗೋವಾ ಹಾರಿದ್ದಾರೆ. ಗೋವಾ ಪರ್ತಗಾಳಿ ಮಠದ ಕಾರ್ಯಕ್ರಮದಲ್ಲಿ ಮೋದಿ ಭಾಗಿಯಾಗಲಿದ್ದಾರೆ.
ಕೃಷ್ಣಮಠದಿಂದ ಆದಿ ಉಡುಪಿ ಹೆಲಿಪ್ಯಾಡ್‌ಗೆ ಮೋದಿ
ಉಡುಪಿಯಲ್ಲಿ ಎರಡೂವರೆ ಗಂಟೆಗಳ ಮೋದಿ ಪ್ರವಾಸ ಪೂರ್ಣ
ನಿಗದಿತ ಸಮಯಕ್ಕಿಂತ ಅರ್ಧ ಗಂಟೆ ಹೆಚ್ಚು ಸಮಯ ಉಡುಪಿಯಲ್ಲಿ ಕಳೆದ ಮೋದಿ
ಮಂಗಳೂರಿಗೆ ತೆರಳಿ, ಗೋವಾಕ್ಕೆ ಹಾರಲಿರುವ ನಮೋ
ಗೋವಾ ಪರ್ತಗಾಳಿ ಮಠದ ಕಾರ್ಯಕ್ರಮಕ್ಕೆ ಮೋದಿ
ಪ್ರಧಾನಿ ನರೇಂದ್ರ ಮೋದಿಯನ್ನು ಬೀಳ್ಕೊಡಲು ಆದಿ ಉಡುಪಿ ಹೆಲಿಪ್ಯಾಡಿಗೆ ತೆರಳಿದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ

ಧರ್ಮೋ ರಕ್ಷತಿ ರಕ್ಷಿತಃ ಮಂತ್ರ ಪಠಿಸಿದ ಮೋದಿ
ಪಹಲ್ಗಾಮ್‌ನಲ್ಲಿ ಕನ್ನಡಿಗರು ಪ್ರಾಣ ತೆತ್ತರು.
ನವಭಾರತ ಯಾರ ಮುಂದೆಯೂ ತಲೆಬಾಗಲ್ಲ.
ನಮಗೆ ಶಾಂತಿ ಸ್ಥಾಪನೆಯೂ ಗೊತ್ತು, ರಕ್ಷಣೆಯೂ ಗೊತ್ತು.
ಮಹಿಳೆಯರು, ನಾಗರಿಕರ ರಕ್ಷಣೆ ನಮ್ಮ ಹೊಣೆ ಎಂದ ಮೋದಿ.
ಕನಕದಾಸರಿಗೆ ನಮಿಸುವ ಪುಣ್ಯ ನನಗೆ ಸಿಕ್ಕಿದೆ: ಮೋದಿ
ಮಧ್ವಾಚಾರ್ಯರರು ಭಕ್ತಿಯ ಮಾರ್ಗ ತೋರಿಸಿಕೊಟ್ಟಿದ್ದಾರೆ.
ಅವರ ಮಾರ್ಗದರ್ಶನದಿಂದ ಆರಂಭಗೊಂಡ ಈ ಅಷ್ಟ ಮಠಗಳು ಧರ್ಮಕಾರ್ಯದಲ್ಲಿ ತೊಡಗಿವೆ.
ಕನಕದಾಸರಿಗೆ ನಮಿಸುವ ಪುಣ್ಯ ನನಗೆ ಸಿಕ್ಕಿದೆ.
ನನ್ನಂತ ಎಲ್ಲಾ ಭಕ್ತರಿಗೂ ಕಿಂಡಿಯ ಮೂಲಕ ಕೃಷ್ಣ ದರ್ಶನ ಆಗುವಂತೆ ಮಾಡಿದ್ದು ಕನಕದಾಸರು.
ಭಗವಾನ್ ಕೃಷ್ಣನ ಪ್ರೇರಣೆಯಿಂದಲೇ ಕೆಲವೊಂದು ಯೋಜನೆಗಳನ್ನ ಮಾಡಲಾಗಿದೆ ಎಂದು ಮೋದಿ ಹೇಳಿದರು.
ಉಡುಪಿ ಕ್ಷೇತ್ರ ಭಕ್ತಿ ಹಾಗೂ ಸೇವೆಯ ಸಂಗಮ ಕ್ಷೇತ್ರ
ಮೂರು ದಿನದ ಹಿಂದೆ ನಾನು ಅಯೋಧ್ಯೆಯಲ್ಲಿ ಇದ್ದೆ.
ಅಯೋಧ್ಯೆಯ ರಾಮ ಜನ್ಮಭೂಮಿಯಲ್ಲಿ ಧರ್ಮಧ್ವಜ ಸ್ಥಾಪನೆ ಆಗಿದೆ.
ಅಯೋಧ್ಯೆಯಿಂದ ಉಡುಪಿಯವರೆಗೂ ರಾಮ ಭಕ್ತರು ಸಾಕ್ಷಿಯಾಗಿದ್ದಾರೆ ಎಂದು ಮೋದಿ ಬಣ್ಣನೆ.
ಮೋದಿ ಪ್ರಣಾಮ
ಜನಸಂಖ್ಯೆಯಲ್ಲಿ ನಮ್ಮ ವಿ.ಎಸ್.ಆಚಾರ್ಯರನ್ನ ಆಯ್ಕೆ ಮಾಡಿ ಕೊಟ್ಟಿದ್ದು ಉಡುಪಿಯ ಜನ
ಲಕ್ಷ ಕಂಠದ ಮೂಲಕ ಗೀತಾ ಪಠಣ ಒಂದೇ ಸ್ಥಳದಲ್ಲಿ ಆಗಿರೋದು ಹೊಸ ಶಕ್ತಿ ನೀಡಿದೆ.
ಈ ಕೆಲಸ ಮಾಡಿರೋ ಸುಗುಣೇಂದ್ರ ಸ್ವಾಮೀಜಿಗೆ ಇವತ್ತಿನ ದಿನ ನಾನು ಪ್ರಣಾಮ ಸಲ್ಲಿಸುತ್ತೇನೆ ಎಂದು ಮೋದಿ ಭಾಷಣ.
ಮೋದಿ ಭಾಷಣ

ಪ್ರಧಾನಿ ಮೋದಿ ಮಾತು
ನನ್ನ ಜನ್ಮ ಗುಜರಾತ್‌ನಲ್ಲಿ ಆಗಿದೆ. ಗುಜರಾತ್ ಹಾಗೂ ಉಡುಪಿಗೆ ಅವಿನಾಭಾವ ಸಂಬಂಧ ಇದೆ. ಉಡುಪಿ ಕೃಷ್ಣನ ದರ್ಶನ ಪಡೆದಿದ್ದು ಆತ್ಮೀಯ, ಆಧ್ಯಾತ್ಮಿಕ ಖುಷಿ ನೀಡಿದೆ. ಉಡುಪಿ ಜನ ಸಂಘ ಹಾಗೂ ಬಿಜೆಪಿಯ ಕರ್ಮಭೂಮಿ. ಲಕ್ಷ ಕಂಠದ ಮೂಲಕ ಗೀತಾದ ಪಠಣ ಒಂದೇ ಸ್ಥಳದಲ್ಲಿ ಒಂದೇ ವೇಳೆ ಆಗಿರೋದು ಹೊಸ ಶಕ್ತಿ ನೀಡಿದೆ.
ಮೋದಿ ಪಠಿಸಿದ ಪುರುಷೋತ್ತಮ ಯೋಗ ಸೂಕ್ತದ ಸಾರಾಂಶ
ʼನಿನ್ನ ಕರ್ಮವನ್ನು ನೀನು ಮಾಡು ಫಲಾಫಲದ ಚಿಂತೆ ಬಿಡು’. ಶ್ರೀ ಕೃಷ್ಣ ಅರ್ಜುನನಿಗೆ ಹೇಳಿದ ಕಿವಿಮಾತು. ಜಗತ್ತು ಆತ್ಮ ಪರಮಾತ್ಮನ ಕುರಿತಾದ ಗೂಡತತ್ವ. ಜ್ಞಾನವನ್ನು ಗ್ರಹಿಸುವ ಮೂಲಕ ಅಂತಿಮ ಸತ್ಯ ದರ್ಶನ. 15ನೇ ಅಧ್ಯಾಯವನ್ನು ಅರ್ಥ ಮಾಡಿಕೊಂಡವನು ಪರಿಪೂರ್ಣತೆಯನ್ನು ಕಾಣುತ್ತಾನೆ.
ಎಲ್ಲರಿಗೂ ನಮಸ್ಕಾರ; ಕನ್ನಡದಲ್ಲೇ ಮೋದಿ ಭಾಷಣ ಆರಂಭ
ಜೈ ಶ್ರೀಕೃಷ್ಣ ಎಂದು ಮೂರು ಬಾರಿ ಮೋದಿ ಘೋಷಣೆ
ಸಭೆಯಲ್ಲಿ ಮೋದಿ ಭಾವಚಿತ್ರ ಹಿಡಿದು ಕೂತಿದ್ದ ಬಾಲಕಿ
ಪೋಟೊ ತೆಗೆದುಕೊಂಡು ಬಾಲಕಿಯ ವಿಳಾಸ ಸಂಗ್ರಹಿಸಲು ಮೋದಿ ಸೂಚನೆ
ಪ್ರಧಾನಿ ಮೋದಿಗೆ ಬೆಳ್ಳಿಯ ಕಡೆಗೋಲು
ಮರದ ಬೆಳ್ಳಿ ಮುಚ್ಚಿಸಿದ ಮೊಸರು ಕಡೆಯುವ ಕಡೆಗೋಲು
ಉಡುಪಿ ಶ್ರೀ ಕೃಷ್ಣನ ಕೈಯಲ್ಲಿ ಇರುವುದು ಇದೇ ಕಡೆಗೋಲು
ಮೊಸರಿನಿಂದ ಬೆಣ್ಣೆಯನ್ನು ಬೇರ್ಪಡಿಸುವ ಕಡೆಗೋಲು
ಭಗವದ್ಗೀತೆಯ 15 ನೇ ಅಧ್ಯಾಯ ಪಠಣ ಮಾಡಿದ ಪ್ರಧಾನಿ ಮೋದಿ
ಮೋದಿ ಜೊತೆ ವೇದಿಕೆಯಲ್ಲಿದ್ದ ಗಣ್ಯರಿಂದ ಪಠಣ

ರಾಷ್ಟ್ರ ರಕ್ಷಣೆಗೆ ಕೈಗೆ ರಕ್ಷೆ ಕಟ್ಟುವುದರ ಮೂಲಕ ಸನ್ಮಾನ
ಭಾರತ ಭಾಗ್ಯ ವಿದಾತ ಬಿರುದು ನೀಡಿ ಸನ್ಮಾನ
ಸುಗುಣೇಂದ್ರ ತೀರ್ಥ ಸ್ವಾಮೀಜಿ ಸಂಸ್ಕೃತ ಮಾತು
ಶ್ರೀ ಕೃಷ್ಣನ ಬಳಿ ಪ್ರಧಾನಿ ಮೋದಿ ಅರ್ಜುನನಾಗಿ ಬಂದಿದ್ದಾರೆ
ಅಯೋಧ್ಯೆಯಲ್ಲಿ ರಾಮನನ್ನು ಸ್ಥಾಪಿಸಿ ಕೃಷ್ಣನ ಕ್ಷೇತ್ರಕ್ಕೆ ಮೋದಿ ಆಗಮಿಸಿದ್ದಾರೆ
14 ವರ್ಷದ ಮೇಲೆ ರಾಮ ಅಯೋಧ್ಯೆಗೆ ಮರಳಿದ್ದ
ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ 14 ವರ್ಷದ ಹಿಂದೆ ನರೇಂದ್ರ ಮೋದಿಯವರು ಉಡುಪಿ ಶ್ರೀ ಕೃಷ್ಣ ಮಠಕ್ಕೆ ಬಂದಿದ್ದರು ಆಗಲು ನಮ್ಮ ಪರ್ಯಾಯ ನಡೆಯುತ್ತಿತ್ತು
ನಮ್ಮದು ಇಂದ್ರ ಪರ್ಯಾಯ ನಾನು ಸುಗುಣೇಂದ್ರ ಅವರು ನರೇಂದ್ರ ಎಂದು ಶ್ರೀಗಳು ಮಾತನಾಡಿದರು.

ಪ್ರಧಾನಿ ಮೋದಿಗೆ ಅಂಗಾರಕ ಅಕ್ಷತೆ
ನರೇಂದ್ರ ಮೋದಿಗೆ ಮಾಧ್ವ ಸಂಪ್ರದಾಯದ ತಿಲಕ
ಮೋದಿ ಹಣೆಗೆ ವಿಶೇಷ ಮಾಧ್ವ ತಿಲಕ
ಅಂಗಾರಕ ಅಕ್ಷತೆ ಇರಿಸಿದ ಪುತ್ತಿಗೆ ಶ್ರೀ
ಹೋಮದ ಮಸಿಯಲ್ಲಿ ತಯಾರಿಸಿರುವ ವಿಶೇಷ ತಿಲಕ
ವೇದಿಕೆಯಲ್ಲಿ ಮೋದಿಗೆ ಪುತ್ತಿಗೆ ಸುಗುಣೇಂದ್ರ ತೀರ್ಥ ಸ್ವಾಮೀಜಿಯಿಂದ ಹಾರಾರ್ಪಣೆ
ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರಿಂದ ಸ್ವಾಗತ ಭಾಷಣ
ಪುತ್ತಿಗೆ ಶ್ರೀ ಸುಗುಣೇಂದ್ರ ಸ್ವಾಮೀಜಿಯವರಿಂದ ಪ್ರಸ್ತಾವಿಕ ಧರ್ಮ ಸಂದೇಶ

ಮೋದಿಗೆ ತಿಲಕವಿಟ್ಟು ತುಳಸಿಮಣಿ ನೀಡಿದ ಸ್ವಾಮೀಜಿ
ಕನಕದಾಸರ ವಿಗ್ರಹಕ್ಕೆ ಹೂಮಾಲೆ ಹಾಕಿದ ಪ್ರಧಾನಿ ಮೋದಿ
ಕನಕನ ಕಿಂಡಿಯ ಮೇಲಿರುವ ಶ್ರೀ ಕೃಷ್ಣನ ಮೂರ್ತಿಗೆ ಮೋದಿ ನಮಸ್ಕಾರ
ಹಣೆಗೆ ತಿಲಕವಿಟ್ಟು ಪ್ರಸಾದ ನೀಡಿದ ಪುತ್ತಿಗೆ ಸುಗುಣೇಂದ್ರ ತೀರ್ಥ ಸ್ವಾಮೀಜಿ
ತೀರ್ಥದ ಜೊತೆ ತುಳಸಿ ಮಣಿಯನ್ನು ನೀಡಿದ ಸುಗುಣೇಂದ್ರ ತೀರ್ಥ ಸ್ವಾಮೀಜಿ
ಪರ್ಯಾಯ ಪುತ್ತಿಗೆ ಸುಗುಣೇಂದ್ರ ತೀರ್ಥ ಸ್ವಾಮೀಜಿ ವೇದಿಕೆಗೆ ಆಗಮನ
ಪುತ್ತಿಗೆ ಸುಶೀಂದ್ರ ತೀರ್ಥ ಸ್ವಾಮೀಜಿ
ವಿಶ್ವ ಗೀತಾ ಪರಾಯಣದ ವೇದಿಕೆಗೆ ಆಗಮಿಸಿದ ಪ್ರಧಾನಿ ಮೋದಿ
ವೇದಿಕೆಯಲ್ಲಿ ಮೋದಿಗೆ ಅದ್ದೂರಿ ಸ್ವಾಗತ
ಸಾವಿರಾರು ಮೋದಿ ಅಭಿಮಾನಿಗಳಿಂದ ಜಯಘೋಷ
ಲಕ್ಷ ಗೀತಾ ಕಂಠ ಪಾರಾಯಣದ ಅಂತ್ಯ
ಭಗವದ್ಗೀತೆಯ 18 ಅಧ್ಯಾಯಗಳ ಪಾರಾಯಣ ಅಂತ್ಯ
ಕೃಷ್ಣಮಠದಲ್ಲಿ ಮೋದಿ ಐವರು ಸ್ವಾಮೀಜಿಗಳ ಜೊತೆ ಮಾತುಕತೆ
ಪುತ್ತಿಗೆ ಸುಗುಣೇಂದ್ರ ತೀರ್ಥ ಸ್ವಾಮೀಜಿ
ಪೇಜಾವರ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ
ಪುತ್ತಿಗೆ ಸುಶ್ರೀಂದ್ರ ತೀರ್ಥ ಸ್ವಾಮೀಜಿ
ಶಿರೂರು ವೇದವರ್ಧನ ತೀರ್ಥ ಸ್ವಾಮೀಜಿ
ಕುಕ್ಕೆ ಸುಬ್ರಹ್ಮಣ್ಯ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಉಪಸ್ಥಿತಿ
ಕೃಷ್ಣ ಮಠದಿಂದ ಗೀತಾ ಮಂದಿರ ತೆರಳಿದ ಮೋದಿ
ವಿವಿಧ ವಾದ್ಯಗಳನ್ನು ಪ್ರದರ್ಶನ ಮಾಡಿದ ಕಲಾವಿದರು
ಗೀತಾ ಮಂದಿರದಲ್ಲಿ ನೂತನ ಅನಂತಪದ್ಮನಾಭ ದೇವರ ಪ್ರತಿಮೆ ಅನಾವರಣ
ಧ್ಯಾನ ಮಂದಿರದ ಗೋಡೆಯ ಶಿಲೆಯಲ್ಲಿ ಭಗವದ್ಗೀತೆ ಬರಹ
ಧ್ಯಾನ ಮಂದಿರ ವೀಕ್ಷಣೆ ಮಾಡಿದ ಮೋದಿ

ಕನಕನ ಕಿಂಡಿ ಮೂಲಕ ʼನಮೋʼ ಶ್ರೀಕೃಷ್ಣ ದರ್ಶನ

ಪ್ರಧಾನಿ ಆದ ಬಳಿಕ ಕೃಷ್ಣ ಮಠಕ್ಕೆ ಮೋದಿ ಮೊದಲ ಭೇಟಿ
17 ವರ್ಷಗಳ ಹಿಂದ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ್ದ ಮೋದಿ
ಅಂದು ಗುಜರಾತ್ ಮುಖ್ಯಮಂತ್ರಿ ಆಗಿದ್ದ ಸಂದರ್ಭ ಉಡುಪಿ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿದ್ದ ನರೇಂದ್ರ ಮೋದಿ
ಕನಕ ನವಗ್ರಹ ಕಿಂಡಿಯ ಮೂಲಕ ಕೃಷ್ಣ ದರ್ಶನ ಮಾಡಿದ ಮೋದಿ
ಸ್ವರ್ಣಲೇಪಿತ ತೀರ್ಥ ಮಂಟಪ ಉದ್ಘಾಟನೆ
ಪುತ್ತಿಗೆ ಸ್ವಾಮೀಜಿಯವರ ಸನ್ಯಾಸ ಜೀವನದ 50ನೇ ವರ್ಷ ಪೂರ್ಣ
ಎರಡು ಕೋಟಿ ವೆಚ್ಚದಲ್ಲಿ ತೀರ್ಥ ಮಂಟಪಕ್ಕೆ ಸ್ವರ್ಣ ಲೇಪನ
ದೀಪ ಬೆಳಗುವ ಮೂಲಕ ಉದ್ಘಾಟನೆ ಮಠಾಧೀಶರು ಗಣ್ಯರ ಉಪಸ್ಥಿತಿ
ಮೋದಿಯಿಂದ ಮುಖ್ಯಪ್ರಾಣ ದೇವರ ಗರುಡ ದೇವರ ದರ್ಶನ
ಮಧ್ವ ಸರೋವರ ವೀಕ್ಷಿಸಿದ ಮೋದಿ
ಶ್ರೀ ಕೃಷ್ಣ ಮಠದ ಮಹಾದ್ವಾರದಲ್ಲಿ ಮೋದಿಗೆ ಪೂರ್ಣ ಕುಂಭ ಸ್ವಾಗತ
ಮಠದ ಪ್ರಮುಖರಿಂದ ಜನಪ್ರತಿನಿಧಿಗಳಿಂದ ಸ್ವಾಗತ
ಮಧ್ವ ಸರೋವರಕ್ಕೆ ತೆರಳಿದ ಪ್ರಧಾನಿ
ತೀರ್ಥ ಪ್ರೋಕ್ಷಣೆ ಮಾಡಿಕೊಂಡು ಮಠದೊಳಗೆ ತೆರಳಿದ ನಮೋ
ರಥಬೀದಿ ತಲುಪಿದ ಪ್ರಧಾನಿ ಮೋದಿ
ಅಷ್ಟಮಠಗಳನ್ನು ವೀಕ್ಷಿಸುತ್ತಾ ಸಾಗಿದ ನಮೋ
ಕನಕ ಗೋಪುರದ ಮುಂದೆ ಇಳಿದ ಮೋದಿ
ಕನಕದಾಸರ ಪುತ್ತಳಿಗೆ ಪುಷ್ಪಾರ್ಚನೆ ಸಲ್ಲಿಕೆ
ಕನಕನ ಕಿಂಡಿಯ ಮೂಲಕ ಶ್ರೀ ಕೃಷ್ಣನ ದರ್ಶನ
ಸ್ವರ್ಣಲೇಪಿತ ಕನಕನ ಕಿಂಡಿ ಉದ್ಘಾಟನೆ ಮಾಡಿದ ಮೋದಿ
ಕೃಷ್ಣ ಮಠದತ್ತ ಬಂದ ಮೋದಿ
ರೋಡ್ ಶೋ ಮುಗಿಸಿ ದೇವಸ್ಥಾನ ಬಳಿ ಬಂದ ಪ್ರಧಾನಿ ನರೇಂದ್ರ ಮೋದಿ

ಉಡುಪಿಯ ಕಲ್ಸಂಕ ಜಂಕ್ಷನ್ ತಲುಪಿದ ಮೋದಿ ರೋಡ್ ಶೋ
ಕೆಲವೇ ಕ್ಷಣದಲ್ಲಿ ಕೃಷ್ಣಮಠದ ಪಾರ್ಕಿಂಗ್ ಏರಿಯಾ ಮೂಲಕ ಮಠಕ್ಕೆ ಮೋದಿ
ಮೋದಿ.. ಮೋದಿ.. ಜಯಘೋಷ
ಉಡುಪಿಯ ಸಿಟಿ ಬಸ್ ನಿಲ್ದಾಣ ರಸ್ತೆಗೆ ಆಗಮಿಸಿದ ಪ್ರಧಾನಿ ಮೋದಿ
ಪ್ರಧಾನಿಗೆ ಪುಷ್ಪಮಳೆ ಸುರಿಸಿದ ಬಿಜೆಪಿ ಕಾರ್ಯಕರ್ತರು
ರಸ್ತೆ ಎರಡು ಬದಿಗಳಲ್ಲಿ ಸೇರಿರುವ ಜನಸಾಗರ
ತಮ್ಮ ನೆಚ್ಚಿನ ನಾಯಕನನ್ನು ಕಣ್ತುಂಬಿಕೊಂಡು ಜೈಕಾರ ಹಾಕಿದ ಸಾವಿರಾರು ಮಂದಿ
ಹುಲಿ ವೇಷ ಕುಣಿತದ ಮೂಲಕ ಸ್ವಾಗತ ಕೋರಿದ ಸಾಂಸ್ಕೃತಿಕ ತಂಡ
ಜನರತ್ತ ಕೈ ಬೀಸಿದ ಮೋದಿ
ಕಾರಿನಲ್ಲಿ ನಿಂತು ಜನರತ್ತ ಪುಷ್ಪ ಹಾಕಿದ ನಮೋ
ಉಡುಪಿಯಲ್ಲಿ ಮೋದಿ ರೋಡ್‌ಶೋ

ಮಂಗಳೂರು ವಿಮಾನ ನಿಲ್ದಾಣದಲ್ಲಿ ಪ್ರಧಾನಿಗೆ ದಿನೇಶ್ ಗುಂಡೂರಾವ್ ಸ್ವಾಗತ

ಸೇನಾ ಹೆಲಿಕಾಪ್ಟರ್‌ನಲ್ಲಿ ಉಡುಪಿಗೆ ಮೋದಿ ಆಗಮನ

ಮೋದಿ ನೋಡಲು ಜನರ ಜಮಾವಣೆ

ಉಡುಪಿಗೆ ಮೋದಿ ಆಗಮನಕ್ಕೆ ಕ್ಷಣಗಣನೆ
ಉಡುಪಿಯ ಎರಡು ರಸ್ತೆಗಳಲ್ಲಿ ನಿಂತಿರುವ ಸಾವಿರಾರು ಮಂದಿ
ಮೋದಿಯವರ ಮುಖವಾಡ, ಕೇಸರಿ ಟೋಪಿ, ಕೇಸರಿ ಶಾಲು ಹಾಕಿಕೊಂಡು ನಿಂತಿರುವ ಸಾವಿರಾರು ಮಂದಿ
ಉಡುಪಿಯ ಸಿಟಿ ಬಸ್ ನಿಲ್ದಾಣ ರಸ್ತೆಯಲ್ಲಿ ಸಾಗಲಿರುವ ಪ್ರಧಾನಮಂತ್ರಿ ನರೇಂದ್ರಮೋದಿ ರೋಡ್ ಶೋ

ಮಂಗಳೂರು ವಿಮಾನ ನಿಲ್ದಾಣಕ್ಕೆ ಬಂದ ಪ್ರಧಾನಿ ಮೋದಿ
ಮಂಗಳೂರಿನ ಬಜಪೆಯಲ್ಲಿರುವ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ
ಸೇನಾ ವಿಮಾನದ ಮೂಲಕ ಆಗಮಿಸಿದ ಪ್ರಧಾನಿ
ವಿಮಾನ ನಿಲ್ದಾಣದಿಂದ ಸೇನಾ ಹೆಲಿಕಾಪ್ಟರ್ ಮೂಲಕ ಉಡುಪಿಗೆ ತೆರಳಲಿರೋ ಮೋದಿ
ಮೋದಿ ಕಾರ್ಯಕ್ರಮ ಏನೇನು?
ಬೆ.11:05ಕ್ಕೆ – ಮಂಗಳೂರು ಏರ್‌ಪೋರ್ಟ್ಗೆ ಮೋದಿ ಆಗಮನ
ಬೆ.11:35 – ಸೇನಾ ಹೆಲಿಕಾಪ್ಟರ್‌ನಲ್ಲಿ ಉಡುಪಿಗೆ ಹೆಲಿಪ್ಯಾಡ್‌ಗೆ ಆಗಮನ
ಉಡುಪಿಯ ರಥಬೀದಿಯಲ್ಲಿ ಮೋದಿ 2 ಕಿ.ಮೀ ರೋಡ್ ಶೋ
ಚಿನ್ನದ ಕವಚ ಅಳವಡಿಸಿರುವ ಕನಕನ ಕಿಂಡಿ ಲೋಕಾರ್ಪಣೆ
ಸ್ವರ್ಣ ಖಚಿತ ಕನಕನ ಕಿಂಡಿಯ ಮೂಲಕ ಶ್ರೀಕೃಷ್ಣದೇವರ ದರ್ಶನ
ಅಷ್ಟಮಠಾಧೀಶರೊಂದಿಗೆ ಪ್ರಧಾನಿ ಮೋದಿ ಮಾತುಕತೆ
ಮಠದಲ್ಲಿ ವೈದಿಕರಿಂದ ಉಪನಿಷತ್ತು, ವೇದ, ಗೀತೆ ಪಠಣ
ಗೀತಾ ಮಂದಿರಕ್ಕೆ ಭೇಟಿ ನೀಡಲಿರುವ ಪ್ರಧಾನಿ ಮೋದಿ
ಗೀತಾ ಮಂದಿರದಲ್ಲಿ ನೂತನ ಅನಂತಪದ್ಮನಾಭ ದೇವರ ಪ್ರತಿಮೆ ಅನಾವರಣ
ಧ್ಯಾನ ಮಂದಿರದಲ್ಲಿ ಧ್ಯಾನ ಮಾಡಲಿರುವ ಪ್ರಧಾನಿ ಮೋದಿ
ಗೀತಾ ಮಂದಿರದಲ್ಲೇ ಲಘು ಉಪಹಾರ ಸ್ವೀಕಾರ
ಮೋದಿಗಾಗಿ ತುಳುನಾಡಿನ ತಿಂಡಿಗಳ ಸಿದ್ಧತೆ
ಲಕ್ಷ ಕಂಠ ಭಗವದ್ಗೀತಾ ಸಮಾವೇಶದಲ್ಲಿ ಪ್ರಧಾನಿ ಭಾಗಿ
ನೆಲದ ಮೇಲೆ ಅಸೀನರಾಗಲಿರುವ ಪ್ರಧಾನಿ ಮೋದಿ
ಭಗವದ್ಗೀತೆಯ 10 ಶ್ಲೋಕಗಳ ಪಠಣ ಮಾಡಲಿರುವ ಮೋದಿ
ಉಡುಪಿ ಕೃಷ್ಣ ಮಠದಲ್ಲಿ ಲಕ್ಷ ಕಂಠ ಭಗವದ್ಗೀತೆ ಪಠಣ
ಕೃಷ್ಣ ಮಠದ ಆವರಣದಲ್ಲಿ ಪಾರಾಯಣ ಪ್ರಕ್ರಿಯೆ ಆರಂಭ
ಭಗವದ್ಗೀತೆಯ 18 ಅಧ್ಯಾಯಗಳನ್ನು ಪಠಿಸಲಿರುವ ಭಕ್ತರು
ಮಧ್ಯಾಹ್ನ 12 .15ರ ಸುಮಾರಿಗೆ ಸಭಾಂಗಣಕ್ಕೆ ಆಗಮಿಸಲಿರುವ ನರೇಂದ್ರ ಮೋದಿ
15ನೇ ಅಧ್ಯಾಯ ಪುರುಷೋತ್ತಮ ಸೂಕ್ತ ಪಠಿಸಲಿರುವ ಮೋದಿ
ಸುಮಾರು 18 ಸಾವಿರ ಜನ ಭಗವದ್ಗೀತೆ ಸಮಾವೇಶದಲ್ಲಿ ಭಾಗಿ

ಪರ್ಯಾಯ ಪುತ್ತಿಗೆಮಠ ಹಾಗೂ ಶ್ರೀಕೃಷ್ಣಮಠದ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಪ್ರಧಾನಿ ನರೇಂದ್ರ ಮೋದಿ ಇಂದು ಉಡುಪಿಗೆ ಆಗಮಿಸಲಿದ್ದಾರೆ. ಪ್ರಧಾನಿ ಭೇಟಿ ಹಿನ್ನೆಲೆ ಪೊಲೀಸ್ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ.

