ಪ್ರಧಾನಿ ಮೋದಿಗೆ 74ರ ಸಂಭ್ರಮ – ಪಿಎಂ ಆವಾಸ್‌ ಯೋಜನೆಯ 26 ಲಕ್ಷ ಮನೆಗಳ ಉದ್ಘಾಟನೆ ಇಂದು

Public TV
1 Min Read
Narendra Modi

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು (Narendra Modi) 74ರ ಸಂಭ್ರಮದಲ್ಲಿದ್ದಾರೆ. ಜನ್ಮದಿನದ ಅಂಗವಾಗಿ ಮಂಗಳವಾರ ಹಲವಾರು ಕಾರ್ಯಕ್ರಮಗಳಿಗೆ ಮೋದಿ ಚಾಲನೆ ನೀಡಲಿದ್ದಾರೆ.

ಭುವನೇಶ್ವರದ ಗಡಕಾನಾದಲ್ಲಿ 26 ಲಕ್ಷ ಪ್ರಧಾನ ಮಂತ್ರಿ ಆವಾಸ್ ಯೋಜನೆ ಮನೆಗಳನ್ನು ಅನಾವರಣಗೊಳಿಸಲಿದ್ದಾರೆ. ಭುವನೇಶ್ವರಕ್ಕೆ ಆಗಮಿಸಿದ ನಂತರ, ಮೋದಿ ಅವರು ಗಡಕಾನಾ ಕೊಳಚೆ ಪ್ರದೇಶಕ್ಕೆ ತೆರಳಲಿದ್ದಾರೆ. ಅಲ್ಲಿ ಅವರು ವಸತಿ ಯೋಜನೆಯ ಫಲಾನುಭವಿಗಳೊಂದಿಗೆ ಸಂವಾದ ನಡೆಸಲಿದ್ದಾರೆ. ಸಾರ್ವಜನಿಕ ಕಲ್ಯಾಣಕ್ಕಾಗಿ ಸರ್ಕಾರದ ಬದ್ಧತೆಯನ್ನು ಪುನರುಚ್ಚರಿಸಲಿದ್ದಾರೆ. ಇದನ್ನೂ ಓದಿ: ಇಂದು ಮಧ್ಯಾಹ್ನ ದೆಹಲಿಗೆ ನೂತನ ಮುಖ್ಯಮಂತ್ರಿ ಘೋಷಣೆ

PM Narendra Modi Independence Day speech

ಇದರ ಬೆನ್ನಲ್ಲೇ ಜನತಾ ಮೈದಾನದಲ್ಲಿ ಪ್ರಧಾನಮಂತ್ರಿ ಸುಭದ್ರಾ ಯೋಜನೆಗೆ ಅಧಿಕೃತವಾಗಿ ಚಾಲನೆ ನೀಡಲಿದ್ದಾರೆ. ಈ ಯೋಜನೆಯಡಿ ಐದು ವರ್ಷಗಳ ಕಾಲ 1 ಕೋಟಿಗೂ ಅಧಿಕ ಬಡ ಮಹಿಳೆಯರಿಗೆ ಎರಡು ಸಮಾನ ಕಂತುಗಳಲ್ಲಿ ವಾರ್ಷಿಕ 10,000 ರೂ. ನೀಡಲಾಗುವುದು.

ಈ ಕಲ್ಯಾಣ ಯೋಜನೆಗಳ ಜೊತೆಗೆ, ಮೋದಿ ಹಲವಾರು ಮೂಲಸೌಕರ್ಯ ಯೋಜನೆಗಳನ್ನು ಅನಾವರಣಗೊಳಿಸಲಿದ್ದಾರೆ. 2,871 ಕೋಟಿ ರೂ. ಮೌಲ್ಯದ ರೈಲ್ವೆ ಮತ್ತು 1,000 ಕೋಟಿ ರೂ. ಮೌಲ್ಯದ ಹೆದ್ದಾರಿ ಯೋಜನೆಗಳನ್ನು ಉದ್ಘಾಟಿಸಲಿದ್ದಾರೆ. ಇದು ಪ್ರದೇಶದ ಸಂಪರ್ಕ ಮತ್ತು ಅಭಿವೃದ್ಧಿಯನ್ನು ಮತ್ತಷ್ಟು ಹೆಚ್ಚಿಸಲಿದೆ. ಇದನ್ನೂ ಓದಿ: ಡಿ.ಕೆ.ಶಿವಕುಮಾರ್‌ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಕೇಸ್‌- ಇಂದು ಸುಪ್ರೀಂನಲ್ಲಿ ವಿಚಾರಣೆ

ಹುಟ್ಟುಹಬ್ಬದ ಸಂಭ್ರಮದಲ್ಲಿರುವ ಪ್ರಧಾನಿ ಮೋದಿಗೆ ಭಾರತದಾದ್ಯಂತದ ರಾಜಕೀಯ ನಾಯಕರು ಶುಭಾಶಯ ತಿಳಿಸಿದ್ದಾರೆ. ತ್ರಿಪುರಾ ಮುಖ್ಯಮಂತ್ರಿ ಮಾಣಿಕ್ ಸಹಾ ಮತ್ತು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಅವರು ಭಾರತದ ಬೆಳವಣಿಗೆಗೆ ಮೋದಿ ಅವರ ದೂರದೃಷ್ಟಿ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

Share This Article