ಪ್ರಧಾನಿ ಮೋದಿ ಭೇಟಿಯಾದ ಯುಎಸ್‌ ಗುಪ್ತಚರ ಮುಖ್ಯಸ್ಥೆ ತುಳಸಿ ಗಬ್ಬಾರ್ಡ್‌

Public TV
Public TV - Digital Head
1 Min Read

– ಗಬ್ಬಾರ್ಡ್‌ಗೆ ಮಹಾಕುಂಭದ ಗಂಗಾ ನೀರಿನ ಹೂದಾನಿ ಗಿಫ್ಟ್‌ ಕೊಟ್ಟ ಮೋದಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (PM Modi) ಅವರು ಸೋಮವಾರ ಸಂಜೆ ದೆಹಲಿಯಲ್ಲಿ ಅಮೆರಿಕದ ರಾಷ್ಟ್ರೀಯ ಗುಪ್ತಚರ ಮುಖ್ಯಸ್ಥೆ ತುಳಸಿ ಗಬ್ಬಾರ್ಡ್ (Tulsi Gabbard) ಅವರನ್ನು ಭೇಟಿಯಾದರು.

ಭೇಟಿಯ ಸಮಯದಲ್ಲಿ ಪರಸ್ಪರರು ಉಡುಗೊರೆಗಳನ್ನು ವಿನಿಮಯ ಮಾಡಿಕೊಂಡರು. ಮೋದಿ ಅವರು ಅಮೆರಿಕದ ಗುಪ್ತಚರ ಮುಖ್ಯಸ್ಥರಿಗೆ ಮಹಾಕುಂಭವನ್ನು ಆಯೋಜಿಸಿದ್ದ ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಿಂದ ತಂದ ಗಂಗಾ ನೀರಿನ ಹೂದಾನಿಯನ್ನು ಉಡುಗೊರೆಯಾಗಿ ನೀಡಿದರು. ಭಯೋತ್ಪಾದನೆ ಮತ್ತು ಸೈಬರ್ ಅಪರಾಧಗಳನ್ನು ನಿಭಾಯಿಸಲು ಸಹಕಾರವನ್ನು ಹೆಚ್ಚಿಸುವ ಮಾರ್ಗಗಳ ಬಗ್ಗೆ ಚರ್ಚೆ ನಡೆಸಿದರು. ಇದನ್ನೂ ಓದಿ: ಸುಪ್ರೀಂ ಕೋರ್ಟ್ ಜಡ್ಜ್ ಆಗಿ ಬಾಗ್ಚಿ ಅಧಿಕಾರ ಸ್ವೀಕಾರ – 2031ರಲ್ಲಿ ಸಿಜೆಐ ಅಗಲಿದ್ದಾರೆ ಬಾಗ್ಚಿ

ಇದಕ್ಕೂ ಮುನ್ನ ತುಳಸಿ ಗಬ್ಬಾರ್ಡ್‌ ಅವರು ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿಯಾಗಿದ್ದರು. ಖಲಿಸ್ತಾನಿ ಭಯೋತ್ಪಾದಕ ಗುಂಪು ಸಿಖ್ಸ್ ಫಾರ್ ಜಸ್ಟೀಸ್ ಸಂಘಟನೆ ಮತ್ತು ಅದರ ಸಂಸ್ಥಾಪಕ ಗುರುಪತ್ವಂತ್ ಪನ್ನುನ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಅಮೆರಿಕ ಸರ್ಕಾರಕ್ಕೆ ಸಿಂಗ್‌ ಮನವಿ ಮಾಡಿದ್ದರು.

ಎರಡು ತಿಂಗಳಲ್ಲಿ ಗಬ್ಬಾರ್ಡ್ ಅವರು ಪ್ರಧಾನ ಮಂತ್ರಿಯೊಂದಿಗಿನ ಎರಡನೇ ಭೇಟಿ ಇದಾಗಿದೆ. ಫೆಬ್ರವರಿಯಲ್ಲಿ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ದ್ವಿಪಕ್ಷೀಯ ಮಾತುಕತೆಗಾಗಿ ವಾಷಿಂಗ್ಟನ್ ಡಿ.ಸಿ.ಯಲ್ಲಿದ್ದಾಗ ಇಬ್ಬರೂ ಭೇಟಿಯಾಗಿದ್ದರು. ಇದನ್ನೂ ಓದಿ: ಏಪ್ರಿಲ್ 1 ರಿಂದ ಮಾರುತಿ ಸುಝುಕಿ ಕಂಪನಿ ಕಾರುಗಳು ದುಬಾರಿ

Share This Article