ಗಾಂಧಿನಗರ: ಭಾವನಗರದ (Bhavnagar) ರ‍್ಯಾಲಿಯಲ್ಲಿ ಪ್ರಧಾನಿ ಮೋದಿ (Narendra Modi) ಭಾಷಣ ಮಾಡುತ್ತಿದ್ದ ವೇಳೆ ಬಾಲಕನೋರ್ವ ತಾನು ಬಿಡಿಸಿದ ಚಿತ್ರವನ್ನು ಮೋದಿಗೆ ನೀಡಿ ಭಾವುಕನಾಗಿ ಕಣ್ಣೀರು ಹಾಕಿದ್ದಾನೆ.
📍Beautiful Moment 🥰
During a rally in Bhavnagar, PM Modi took a drawing from a child — the little one got so EMOTIONAL that he burst into tears ❤️ pic.twitter.com/rbh7RftOdm
— Megh Updates 🚨™ (@MeghUpdates) September 20, 2025
ಭಾಷಣದ ವೇಳೆ ಬಾಲಕ ತನ್ನ ಚಿತ್ರವನ್ನು ಹಿಡಿದುಕೊಂಡು ನಿಂತಿರುವುದನ್ನು ಗಮನಿಸಿದ ಮೋದಿ ಅದನ್ನು ತೆಗೆದುಕೊಂಡು ಬರುವಂತೆ ಸೂಚಿಸಿದರು. ತಾನು ಬಿಡಿಸಿದ ಚಿತ್ರವನ್ನು ಮೋದಿ ಸ್ವೀಕರಿಸಿದ ವೇಳೆ ಬಾಲಕ ಭಾವುಕನಾಗಿ ಕಣ್ಣೀರು ಹಾಕಿದ್ದಾನೆ. ಈ ವೇಳೆ ವೇದಿಕೆಯಿಂದಲೇ ಮಾತನಾಡಿದ ಮೋದಿ, ನೀನು ಬಿಡಿಸಿದ ಚಿತ್ರ ನನಗೆ ತಲುಪಿದೆ, ಅಳಬೇಡ ಎಂದು ಬಾಲಕನಿಗೆ ಸಮಾಧಾನ ಮಾಡಿದ್ದಾರೆ. ಇದನ್ನೂ ಓದಿ: 60 ದಿನ ಜಾತಿಗಣತಿ ಮುಂದೂಡಿ, 15 ದಿನ ಕಾಲಮಿತಿ ಹೆಚ್ಚಿಸಿ – ಒಕ್ಕಲಿಗ ಸಭೆಯಲ್ಲಿ ನಿರ್ಣಯ
ಅಲ್ಲದೇ ನಿನ್ನ ಮನೆಯ ಅಡ್ರೆಸ್ ಅದರಲ್ಲಿ ಬರೆದರೆ ಆದಷ್ಟು ಬೇಗ ನಿನಗೆ ಪತ್ರ ಬರೆಯುತ್ತೇನೆ ಎಂದು ಭರವಸೆ ನೀಡಿದರು. ಚಿಕ್ಕಚಿಕ್ಕ ಮಕ್ಕಳ ಪ್ರೀತಿಗಿಂತ ದೊಡ್ಡದು ಜೀವನದಲ್ಲಿ ಏನಿದೆ ಎಂದು ಮೋದಿ ಸಂತಸಪಟ್ಟರು. ಇದನ್ನೂ ಓದಿ: ತಿಮರೋಡಿ ಬಳಿಗೆ ನಮ್ಮನ್ನ ಕರೆದುಕೊಂಡು ಹೋಗಿದ್ದೇ ಸೌಜನ್ಯ ಮಾವ: ಚಿನ್ನಯ್ಯನ 2ನೇ ಪತ್ನಿ ಬಾಂಬ್

