– ಆರ್‌ಎಸ್‌ಎಸ್ ಮುಖ್ಯಸ್ಥ ಭಾಗವತ್ ಜೊತೆ ವೇದಿಕೆ ಹಂಚಿಕೊಳ್ಳಲಿರುವ ಮೋದಿ
ಮುಂಬೈ: ಭಾನುವಾರ ನಾಗ್ಪುರದ (Nagpur) ರೇಶಿಂಬಾಗ್‌ನಲ್ಲಿರುವ ಆರ್‌ಎಸ್‌ಎಸ್ (RSS) ಪ್ರಧಾನ ಕಚೇರಿ ಹೆಡ್ಗೆವಾರ್ ಸ್ಮೃತಿ ಭವನಕ್ಕೆ ಭೇಟಿ ನೀಡಲಿರುವ ಪ್ರಧಾನಿ ನರೇಂದ್ರ ಮೋದಿ (Narendra Modi), ದೀಕ್ಷಭೂಮಿಗೂ ಭೇಟಿ ನೀಡಲಿದ್ದಾರೆ.
ಮಾ. 30ರಂದು ಮೋದಿ ಅವರು ನಾಗ್ಪುರಕ್ಕೆ ತೆರಳಲಿದ್ದು, ಹಿಂದೂ ಹೊಸ ವರ್ಷದ ಆರಂಭವನ್ನು ಗುರುತಿಸುವ ಆರ್‌ಎಸ್‌ಎಸ್ `ಪ್ರತಿಪದ’ ಕಾರ್ಯಕ್ರಮ ಮತ್ತು ಮರಾಠಿ ಹೊಸ ವರ್ಷವಾದ ಗುಡಿ ಪಾಡ್ವದಲ್ಲಿ ಭಾಗಿಯಾಗಲಿದ್ದಾರೆ. ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ (Mohan Bhagwat) ಜೊತೆ ಪ್ರಧಾನಿಯವರು ವೇದಿಕೆ ಹಂಚಿಕೊಳ್ಳಲಿದ್ದಾರೆ. ಪ್ರಧಾನಿ ಅವರು ಸ್ಮೃತಿ ಮಂದಿರದಲ್ಲಿ ದರ್ಶನ ಪಡೆದು, ಆರ್‌ಎಸ್‌ಎಸ್‌ನ ಪಿತಾಮಹರಿಗೆ ಗೌರವ ಸಲ್ಲಿಸಲಿದ್ದಾರೆ. ಬಳಿಕ ದೀಕ್ಷಭೂಮಿಗೂ ಭೇಟಿ ನೀಡಿ ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಗೌರವ ಸಲ್ಲಿಸಲಿದ್ದಾರೆ. ಇದನ್ನೂ ಓದಿ: ಮಲ್ಪೆ ಸರ್ವಋತು ಮೀನುಗಾರಿಕಾ ಬಂದರು – ಸಿಸಿಟಿವಿ, ಸರಿಯಾದ ಸೆಕ್ಯೂರಿಟಿ ಇಲ್ಲ
ಮಾಧವ ನೇತ್ರಾಲಯ ಕಣ್ಣಿನ ಸಂಸ್ಥೆ ಮತ್ತು ಸಂಶೋಧನಾ ಕೇಂದ್ರದ ನೂತನ ಕಟ್ಟಡವಾದ ಮಾಧವ ನೇತ್ರಾಲಯ ಪ್ರೀಮಿಯಂ ಕೇಂದ್ರಕ್ಕೆ ಪ್ರಧಾನಿ ಅಡಿಪಾಯವನ್ನು ಹಾಕಲಿದ್ದಾರೆ. 2014ರಲ್ಲಿ ಸ್ಥಾಪನೆಯಾದ ಇದು ನಾಗ್ಪುರದಲ್ಲಿ ಪ್ರಮುಖ ಸೂಪರ್ ಸ್ಪೆಷಾಲಿಟಿ ನೇತ್ರ ಚಿಕಿತ್ಸಾಲಯವಾಗಿದೆ. ಇದನ್ನೂ ಓದಿ: ಸಿಎಸ್‌ಕೆ ವಿರುದ್ಧ ಆರ್‌ಸಿಬಿ ಗೆದ್ದ ಬಳಿಕ ಕೊಹ್ಲಿ ಟ್ರೋಲ್ ಮಾಡಿದವರಿಗೆ ಚಳಿ ಬಿಡಿಸಿದ ನಟಿ
ನಾಗ್ಪುರದಲ್ಲಿರುವ ಸೋಲಾರ್ ಡಿಫೆನ್ಸ್ ಮತ್ತು ಏರೋಸ್ಪೇಸ್ ಲಿಮಿಟೆಡ್‌ನ ಯುದ್ಧ ಸಾಮಗ್ರಿ ಕೇಂದ್ರಕ್ಕೆ ಭೇಟಿ ನೀಡಲಿದ್ದಾರೆ. ಯುಎವಿಗಳಿಗಾಗಿ ಹೊಸದಾಗಿ ನಿರ್ಮಿಸಲಾದ 1,250 ಮೀಟರ್ ಉದ್ದ ಮತ್ತು 25 ಮೀಟರ್ ಅಗಲದ ವಾಯುನೆಲೆ ಮತ್ತು ಯುದ್ಧಸಾಮಗ್ರಿ ಪರೀಕ್ಷಾ ಕೇಂದ್ರವನ್ನು ಸಹ ಅವರು ಉದ್ಘಾಟಿಸಲಿದ್ದಾರೆ. ಇದನ್ನೂ ಓದಿ: ಪತಿ, ಕೈತುಂಬ ಸಂಬಳ ಸಿಗುತ್ತಿದ್ದ ಕೆಲಸ ಬಿಟ್ಟ ಬಳಿಕ ಬರೋಬ್ಬರಿ 45 ಕೆಜಿ ತೂಕ ಇಳಿಸಿಕೊಂಡ ಮಹಿಳೆ