ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಅಮೆರಿಕ ಪ್ರವಾಸ ಕೈಗೊಂಡಿದ್ದು, ಟೆಸ್ಲಾ ಸಿಇಒ ಟ್ವಿಟ್ಟರ್ ಮಾಲೀಕ ಎಲೋನ್ ಮಸ್ಕ್ (Elon Musk) ಅವರನ್ನು ಭೇಟಿಯಾಗಲಿದ್ದಾರೆ.
ಎಲೋನ್ ಮಸ್ಕ್ ಟ್ವಿಟ್ಟರ್ ಮಾಲೀಕರಾದ ಬಳಿಕ ಅವರನ್ನು ಮೊದಲ ಬಾರಿಗೆ ಮೋದಿ ಅವರು ಭೇಟಿಯಾಗುತ್ತಿದ್ದಾರೆ. ಈ ಹಿಂದೆ 2015 ರಲ್ಲಿ ಕ್ಯಾಲಿಫೋರ್ನಿಯಾದ ಟೆಸ್ಲಾ ಮೋಟಾರ್ಸ್ ಕಾರ್ಖಾನೆಯಲ್ಲಿ ಮಸ್ಕ್ ಅವರನ್ನು ಭೇಟಿಯಾಗಿದ್ದರು. ಇದನ್ನೂ ಓದಿ: ಟೈಟಾನಿಕ್ ಅವಶೇಷ ನೋಡಲು ಪ್ರವಾಸಿಗರನ್ನು ಕರೆದೊಯ್ಯುತ್ತಿದ್ದ ಜಲಾಂತರ್ಗಾಮಿ ನಾಪತ್ತೆ
Advertisement
Advertisement
ಟೆಸ್ಲಾ ಕಂಪನಿ ಇಂಡಿಯಾ ಫ್ಯಾಕ್ಟರಿಗಾಗಿ ಸ್ಥಳವನ್ನು ಹುಡುಕುತ್ತಿರುವ ಸಂದರ್ಭದಲ್ಲೇ ಮಸ್ಕ್‌ರನ್ನ ಪ್ರಧಾನಿಗಳು ಭೇಟಿಯಾಗುತ್ತಿದ್ದಾರೆ. ದಿ ವಾಲ್ ಸ್ಟ್ರೀಟ್ ಜರ್ನಲ್‌ನ ಸಂದರ್ಶನದಲ್ಲಿ, ವಾಹನ ತಯಾರಕರು ಭಾರತೀಯ ಮಾರುಕಟ್ಟೆಯಲ್ಲಿ ಆಸಕ್ತಿ ಹೊಂದಿದ್ದಾರೆಯೇ ಎಂದು ಮಸ್ಕ್‌ಗೆ ಕೇಳಲಾಯಿತು. ಖಂಡಿತವಾಗಿ ಎಂದು ಅವರು ಉತ್ತರಿಸಿದ್ದರು. ಈ ವರ್ಷದ ಅಂತ್ಯದ ವೇಳೆಗೆ ಟೆಸ್ಲಾ ತನ್ನ ಇಂಡಿಯಾ ಫ್ಯಾಕ್ಟರಿ ಸ್ಥಾಪಿಸಲು ಸ್ಥಳವನ್ನು ಅಂತಿಮಗೊಳಿಸುವ ಸಾಧ್ಯತೆಯಿದೆ ಎಂದು ಮಸ್ಕ್ ತಿಳಿಸಿದ್ದರು.
Advertisement
ಪ್ರಧಾನಿ ಮೋದಿ ಅವರು ನ್ಯೂಯಾರ್ಕ್‌ಗೆ ಬಂದಿಳಿದ ನಂತರ ಅನೇಕ ನಾಯಕರನ್ನು ಭೇಟಿಯಾಗಲಿದ್ದಾರೆ. ನೊಬೆಲ್ ಪ್ರಶಸ್ತಿ ವಿಜೇತರು, ಅರ್ಥಶಾಸ್ತ್ರಜ್ಞರು, ಕಲಾವಿದರು, ವಿಜ್ಞಾನಿಗಳು, ವಿದ್ವಾಂಸರು, ವಾಣಿಜ್ಯೋದ್ಯಮಿಗಳು, ಶಿಕ್ಷಣ ತಜ್ಞರು ಮತ್ತು ಆರೋಗ್ಯ ಕ್ಷೇತ್ರದ ತಜ್ಞರನ್ನು ಮೋದಿ ಭೇಟಿ ಮಾಡುತ್ತಾರೆ. ಇದನ್ನೂ ಓದಿ: ಏರ್‌ಬಸ್ ಜೊತೆ ಬರೋಬ್ಬರಿ 500 ವಿಮಾನ ಖರೀದಿಗೆ ಡೀಲ್ – ವಿಶ್ವದಾಖಲೆ ಬರೆದ ಇಂಡಿಗೋ
Advertisement
ಪ್ರಧಾನಿ ಮೋದಿ ಅವರಿಗೆ ಅಮೆರಿಕ ಪ್ರವಾಸದ ವೇಳೆ ಭವ್ಯ ಸ್ವಾಗತ ನೀಡಲು ಅಲ್ಲಿರುವ ಭಾರತ ಮೂಲದ ಸಮುದಾಯ ಸಜ್ಜಾಗಿದೆ.