ನವದೆಹಲಿ: ಕೋವಿಡ್ ವ್ಯಾಕ್ಸಿನೇಷನ್ ಕವರೇಜ್ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ 40ಕ್ಕೂ ಹೆಚ್ಚು ಡಿಸಿಗಳ ಜೊತೆ ಸಭೆ ನೆಡೆಸಲಿದ್ದಾರೆ.
ಇಟಲಿ, ವ್ಯಾಟಿಕನ್ ಮತ್ತು ಯುನೈಟೆಡ್ ಕಿಂಗ್‍ಡಮ್‍ಗೆ ಐದು ದಿನಗಳ ಅಧಿಕೃತ ಭೇಟಿಯಿಂದ ಹಿಂದಿರುಗಿದ ಮೋದಿ ಅವರು ಕಡಿಮೆ ಲಸಿಕೆ ನೀಡಲಾಗಿರುವ ಜಿಲ್ಲೆಗಳ ಸಮಸ್ಯೆ ತಿಳಿದುಕೊಳ್ಳಲು ಪರಿಶೀಲನಾ ಸಭೆ ನಡೆಸಲಿದ್ದಾರೆ. ಇದನ್ನೂ ಓದಿ: ಸೋಲು ಗೆಲುವನ್ನು ಸಮವಾಗಿ ಸ್ವೀಕರಿಸುವ ದೃಷ್ಟಿಕೋನ ನಮ್ಮದು: ಬೊಮ್ಮಾಯಿ
ಪ್ರಧಾನಮಂತ್ರಿ ಕಾರ್ಯಾಲಯದ ಪ್ರಕಾರ, ಮೋದಿ ಅವರು ಜಾಖರ್ಂಡ್, ಮಣಿಪುರ, ನಾಗಾಲ್ಯಾಂಡ್, ಅರುಣಾಚಲ ಪ್ರದೇಶ, ಮಹಾರಾಷ್ಟ್ರ, ಮೇಘಾಲಯ ಮತ್ತು ಕಡಿಮೆ ಲಸಿಕೆ ವ್ಯಾಪ್ತಿಯನ್ನು ಹೊಂದಿರುವ ಜಿಲ್ಲೆಗಳ 40ಕ್ಕೂ ಹೆಚ್ಚು ಜಿಲ್ಲಾಧಿಕಾರಿಗಳೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಮಧ್ಯಾಹ್ನ ವೀಡಿಯೋ ಕಾನ್ಫರೆನ್ಸ್ ನಡೆಯಲಿದ್ದು, ಈ ವೇಳೆ 40ಕ್ಕೂ ಹೆಚ್ಚು ಜಿಲ್ಲಾಧಿಕಾರಿಗಳೊಂದಿಗೆ ಗೃಹ ಸಚಿವ ಅಮಿತ್ ಶಾ ಮತ್ತು ಆರೋಗ್ಯ ಸಚಿವಾಲಯದ ಅಧಿಕಾರಿಗಳು ಭಾಗವಹಿಸಲಿದ್ದಾರೆ.
ಮೊದಲ ಡೋಸ್‍ನ 50 ಪ್ರತಿಶತಕ್ಕಿಂತ ಕಡಿಮೆ ಲಸಿಕೆಯಾಗಿರುವ ಮತ್ತು ಎರಡನೇ ಡೋಸ್‍ನ ಕಡಿಮೆ ಲಸಿಕೆ ಹಾಕಿಸಿಕೊಂಡಿರುವ ಜಿಲ್ಲೆಗಳನ್ನು ಈ ಸಭೆಯು ಒಳಗೊಂಡಿರುತ್ತದೆ. ಇದನ್ನೂ ಓದಿ: ಅಪ್ಪು ಸಮಾಧಿ ಬಳಿ ನೃತ್ಯ ನಮನ ಸಲ್ಲಿಸಿದ ಪುಟಾಣಿಗಳು
ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಈ ಹಿಂದೆ ವ್ಯಾಕ್ಸಿನೇಷನ್‍ನ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ್ದು, ವ್ಯಾಕ್ಸಿನೇಷನ್‍ನ ವೇಗ ಮತ್ತು ವ್ಯಾಪ್ತಿಯನ್ನು ಹೆಚ್ಚಿಸುವ ಅಗತ್ಯವನ್ನು ಒತ್ತಿ ಹೇಳಿದ್ದರು. ಅದು ಅಲ್ಲದೇ ಅವರು ದೇಶದಲ್ಲಿ 10.34 ಕೋಟಿಗೂ ಹೆಚ್ಚು ಜನರು ನಿಗದಿತ ಮಧ್ಯಂತರದ ಅವಧಿ ಮುಗಿದ ನಂತರ ಲಸಿಕೆಯ ಎರಡನೇ ಡೋಸ್ ಅನ್ನು ಹಾಕಿಸಿಕೊಳ್ಳುತ್ತಾರೆ ಎಂದು ತಿಳಿಸಿದ್ದರು.