ನವದೆಹಲಿ: ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Modi) ಅವರು ಫೆ.19 ರಂದು ನವದೆಹಲಿಯ ಭಾರತ್ ಮಂಟಪದಲ್ಲಿ ಭಾರತ AI ಇಂಪ್ಯಾಕ್ಟ್ ಶೃಂಗಸಭೆ 2026 (India AI Impact Summit) ಅನ್ನು ಉದ್ಘಾಟಿಸಲಿದ್ದಾರೆ.
ಬೆಳಗ್ಗೆ 9:40 ರ ಸುಮಾರಿಗೆ ಭಾರತ AI ಶೃಂಗಸಭೆಯ ಉದ್ಘಾಟನಾ ಸಮಾರಂಭ ಪ್ರಾರಂಭವಾಗಲಿದೆ. ಬೆಳಗ್ಗೆ 10:25 ರ ಸುಮಾರಿಗೆ ಸಭೆಯನ್ನುದ್ದೇಶಿಸಿ ಮೋದಿ ಮಾತನಾಡಲಿದ್ದಾರೆ. ಇದನ್ನೂ ಓದಿ: AI ಸಹಯೋಗದ ಬಗ್ಗೆ ಸುಂದರ್ ಪಿಚೈ ಜೊತೆ ಮೋದಿ ಮಾತುಕತೆ
ಬೆಳಗ್ಗೆ 9:15 ಕ್ಕೆ ಜಾಗತಿಕ ನಾಯಕರ ಜೊತೆಗೆ ಗ್ರೂಪ್ ಫೋಟೊ ತೆಗೆಸಿಕೊಳ್ಳುವ ಕಾರ್ಯಕ್ರಮ ಇದೆ. ಉದ್ಘಾಟನಾ ಸಮಾರಂಭದಲ್ಲಿ ಫ್ರೆಂಚ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್, ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರೆಸ್ ಸೇರಿ ಹಲವು ಜಾಗತಿಕ ನಾಯಕರು ಭಾಷಣ ಮಾಡಲಿದ್ದಾರೆ.
ಬೆಳಗ್ಗೆ 11 ಗಂಟೆ ಸುಮಾರಿಗೆ ಇತರ ಜಾಗತಿಕ ನಾಯಕರೊಂದಿಗೆ ಇಂಡಿಯಾ AI ಇಂಪ್ಯಾಕ್ಟ್ ಎಕ್ಸ್‌ಪೋಗೆ ಮೋದಿ ಭೇಟಿ ನೀಡಲಿದ್ದಾರೆ. ಸಂಜೆ 5:30 ರಿಂದ ಪ್ರಧಾನಿ ಮೋದಿ ಅವರು ಸಿಇಒ ದುಂಡುಮೇಜಿನ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಇದನ್ನೂ ಓದಿ: ಚೀನಾ ನಿರ್ಮಿತ ರೋಬೋಟ್ ಡಾಗ್ ಖರೀದಿಸಿ AI ಶೃಂಗದಲ್ಲಿ ಪ್ರದರ್ಶನ – ಗಲ್ಗೋಟಿಯಾ ವಿವಿಗೆ ಗೇಟ್‌ಪಾಸ್
ಸಿಇಒಗಳು/ಸಿಎಕ್ಸ್‌ಒಗಳು ಸೇರಿದಂತೆ 500 ಕ್ಕೂ ಹೆಚ್ಚು ಜಾಗತಿಕ ಎಐ ನಾಯಕರು, ಸುಮಾರು 100 ಸಿಇಒಗಳು ಮತ್ತು ಸಂಸ್ಥಾಪಕರು, 150 ಶಿಕ್ಷಣ ತಜ್ಞರು ಮತ್ತು ಸಂಶೋಧಕರು ಮತ್ತು 400 ಸಿಟಿಒಗಳು ಶೃಂಗಸಭೆಯಲ್ಲಿ ಭಾಗಿಯಾಗಲಿದ್ದಾರೆ. ಇದು 20 ಕ್ಕೂ ಹೆಚ್ಚು ರಾಜ್ಯ ಮತ್ತು ಸರ್ಕಾರದ ಮುಖ್ಯಸ್ಥರು ಮತ್ತು ಸುಮಾರು 60 ಮಂತ್ರಿಗಳು, ಉಪಮಂತ್ರಿಗಳು ಸೇರಿದಂತೆ 100 ಕ್ಕೂ ಹೆಚ್ಚು ಸರ್ಕಾರಿ ಪ್ರತಿನಿಧಿಗಳು ಇರಲಿದ್ದಾರೆ.

