ನವದೆಹಲಿ: ಮೇಕ್ ಇನ್ ಇಂಡಿಯಾ ಯೋಜನೆ ಅಡಿಯಲ್ಲಿ ನಿರ್ಮಾಣಗೊಂಡಿದ್ದ ಮಹಾಮನ ಎಕ್ಸ್ ಪ್ರೆಸ್ ರೈಲು ಇಂದಿನಿಂದ ಸಂಚರಿಸಲಿದೆ. ಪ್ರಧಾನಿ ನರೇಂದ್ರ ಮೋದಿ ವೀಡಿಯೊ ಮೂಲಕ ಇಂದು ಮಧ್ಯಾಹ್ನ 3.30ಕ್ಕೆ ಹಸಿರು ನಿಶಾನೆ ತೋರಿಸಲಿದ್ದಾರೆ.
ಸಂಚಾರ ಮಾರ್ಗ: ವಾರಕ್ಕೊಮ್ಮೆ ಮಹಾಮನ ಎಕ್ಸ್ ಪ್ರೆಸ್ ರೈಲು ಸಂಚಾರ ನಡೆಸಲಿದ್ದು ಪ್ರತೀ ಶುಕ್ರವಾರ ಉತ್ತರಪ್ರದೇಶದ ವಾರಣಾಸಿಯಿಂದ ಹೊರಟರೆ, ಬುಧವಾರ ವಡೋದರದಿಂದ ಹೊರಡಲಿದೆ.
Advertisement
ಗುಜರಾತ್‍ನ ಭರೂಚ್, ಸೂರತ್ ಮಹಾರಾಷ್ಟ್ರದ ಅಮಲ್ನರ್ ಮತ್ತು ಭುಸವಲ್, ಮಧ್ಯಪ್ರದೇಶದ ಇಟರ್ಸಿ, ಜಬ್ಬಲ್ಪುರ್, ಕಟ್ನಿ ಮತ್ತು ಸಾಟ್ನ ಹಾಗೂ ಉತ್ತರ ಪ್ರದೇಶದ ಚೋಕಿಕಿ ಮಾರ್ಗವಾಗಿ ವಾರಣಾಸಿ ತಲುಪಲಿದೆ.
Advertisement
Advertisement
ವಡೋದರ ಮತ್ತು ವಾರಣಸಿ ಸುಮಾರು 1,531 ಕಿ.ಮೀ ದೂರವಿದ್ದು, ಒಟ್ಟು 27 ಗಂಟೆ 30 ನಿಮಿಷ ಕ್ರಮಿಸಿ ಕೊನೆಯ ನಿಲ್ದಾಣ ತಲುಪಲಿದೆ. ಗಂಟೆಗೆ 55.7 ವೇಗದಲ್ಲಿ ಸಂಚರಿಸುವ ಈ ರೈಲಿನಲ್ಲಿ ಸಾಮಾನ್ಯ ರೈಲಿಗಿಂತ ಹೈಫೈ ಸೌಲಭ್ಯಗಳು ಇದ್ದು ಎಲ್ಲವೂ ಸ್ವಯಂ ಚಾಲಿತವಾಗಿ ಕಾರ್ಯನಿರ್ವಹಿಸಲಿವೆ.
Advertisement
ರೈಲಿನಲ್ಲಿರೋ ವಿಶೇಷತೆ ಏನು?
ಸ್ನ್ಯಾಕ್ ಟೇಬಲ್, ವಿದ್ಯುತ್ ಸ್ವಯಂ ಚಾಲಿತ ಡೋರ್‍ಗಳು ಹಾಗೂ ಕಿಟಕಿಗಳು, ಹೈಟೆಕ್ ಶೌಚಾಲಯಗಳು, ಎಲ್‍ಇಡಿ ಬಲ್ಬ್ ಗಳು ಬೋಗಿಗಳಲ್ಲಿ ಇರಲಿದೆ. ಈ ಎಲ್ಲಾ ಸೌಲಭ್ಯಗಳಿಂದ ವಿದೇಶಿ ರೈಲುಗಳಿಗೆ ಸೆಡ್ಡು ಹೊಡೆಯುವ ರೀತಿಯಲ್ಲಿ ಮಹಾಮನ ಎಕ್ಸ್ ಪ್ರೆಸ್ ರೈಲಿನ ಬೋಗಿಗಳು ತಯಾರಾಗಿವೆ.
ಮೇಕ್ ಇನ್ ಇಂಡಿಯಾ: ಮಾಜಿ ಹಿಂದೂ ಮಹಾಸಭಾ ಅಧ್ಯಕ್ಷ ಮದನ್ ಮೋಹನ ಮಾಳವಿಯಾ ಅವರನ್ನು ಮಹಾಮನ ಎಂದು ಗೌರವದಿಂದ ಕರೆಯಲಾಗುತಿತ್ತು. ಈ ಕಾರಣಕ್ಕೆ ಈ ರೈಲಿಗೆ ಮಹಾಮನ ಎಂದು ಹೆಸರನ್ನು ಇಡಲಾಗಿದೆ. 2016ರಲ್ಲಿ ಮೇಕ್ ಇನ್ ಇಂಡಿಯಾ ಯೋಜನೆ ಮೂಲಕ ಈ ರೈಲಿನ ತಯಾರಿ ಕಾರ್ಯ ಪ್ರಾರಂಭಗೊಂಡಿತ್ತು. ಗ್ಲಾಸ್ ಡಿಸೈನ್ ಮತ್ತು ಅಳವಡಿಕೆಯನ್ನು ವಡೋದರದ ಹಿಂದೂಸ್ಥಾನ್ ಫೈಬರ್ ಗ್ಲಾಸ್ ಕಂಪನಿ ವಹಿಸಿತ್ತು. ಈಗಾಗಲೇ 10- 12 ವರ್ಷಗಳಿಂದ ಭಾರತೀಯ ರೈಲ್ವೇ ನವೀಕರಿಸಲಾದ 7 ಮಾದರಿಯ ಕೋಚ್ ಗಳನ್ನು ಬಳಸುತ್ತಿದೆ.
ರೈಲಿನಲ್ಲಿ ಒಟ್ಟು 7 ಮಾದರಿಯ ಹೊಸ 18 ಕೋಚ್‍ಗಳಿದ್ದು, ಒಂದು ಎಸಿ 1ನೇ ಕ್ಲಾಸ್, ಎರಡು ಎಸಿ 2ನೇ ಕ್ಲಾಸ್, ಎಂಟು ಸ್ಲೀಪರ್ ಕೋಚ್, ನಾಲ್ಕು ಜನರಲ್ ಕೋಚ್ ಇದೆ. ಸದ್ಯ ಇರುವ ಎಕ್ಸ್ ಪ್ರೆಸ್ ರೈಲುಗಳಿಗಿಂತ ಫುಲ್ ಹೈಟೆಕ್ ರೀತಿಯಲ್ಲಿ ಮಹಾಮನ ರೈಲನ್ನು ವಿನ್ಯಾಸಗೊಳಿಸಲಾಗಿದೆ.
https://www.youtube.com/watch?v=kg_bzTm4yYw