ನವದೆಹಲಿ: ನವರಾತ್ರಿಯಿಂದಲೇ (ಸೆ.22) ಹೊಸ ಜಿಎಸ್‌ಟಿ ಸ್ಲ್ಯಾಬ್ (GST Rate Cut) ಅನುಷ್ಠಾನಗೊಳ್ಳಲಿದ್ದು, ದೇಶದ ಜನತೆಯನ್ನುದ್ದೇಶಿಸಿ ಇಂದು (ಭಾನುವಾರ) ಸಂಜೆ ಪ್ರಧಾನಿ ಮೋದಿ (PM Modi) ಅವರು ಭಾಷಣ ಮಾಡಲಿದ್ದಾರೆ.
ಹೊಸ ಜಿಎಸ್‌ಟಿ ಜಾರಿಗೂ ಮೊದಲು ದೇಶವನ್ನುದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಲಿದ್ದಾರೆ. ಈ ಹಿಂದೆ ತೆರಿಗೆ ಭಾರ ಇಳಿಸುವ ಭರವಸೆ ನೀಡಿದ್ದರು. ಅಂತೆಯೇ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದಲ್ಲಿ ನಡೆದ ಜಿಎಸ್‌ಟಿ ಸಭೆಯಲ್ಲಿ ಸ್ಲ್ಯಾನ್ ಪರಿಷ್ಕರಣೆ ಮಾಡಲಾಗಿದೆ. ಇದನ್ನೂ ಓದಿ: GST Revision | ದೇಶದ ಜನತೆಗೆ ದಸರಾ ಗಿಫ್ಟ್ – ನಾವು ದಿನನಿತ್ಯ ಬಳಸುವ ಯಾವ ವಸ್ತುಗಳ ಬೆಲೆ ಎಷ್ಟು ಇಳಿಕೆ?
ನಾಳೆಯಿಂದ ಹೊಸ ನಿಯಮ ಜಾರಿ ಹಿನ್ನೆಲೆ ಇಂದು ಮೋದಿ ದೇಶದ ಜನರಿಗೆ ಮಾಹಿತಿ ನೀಡುವ ಸಾಧ್ಯತೆ ಇದೆ. ಹೊಸ ಜಿಎಸ್‌ಟಿ ದರ ಹಿನ್ನೆಲೆ ಹಲವಾರು ಗ್ರಾಹಕ ಉತ್ಪನ್ನಗಳ ಬೆಲೆಗಳು ಕಡಿಮೆಯಾಗಲಿವೆ.
ದಸರಾ ಹಬ್ಬಕ್ಕೆ ಕ್ಷಣಗಣನೆ ಶುರುವಾಗಿದೆ. ಹಬ್ಬದ ಉತ್ಸಾಹದಲ್ಲಿರುವ ಸಾಮಾನ್ಯ ಮತ್ತು ಮಧ್ಯಮ ವರ್ಗದ ಜನರಿಗೆ ಕೇಂದ್ರ ಸರ್ಕಾರ ‘ದಸರಾ ಗಿಫ್ಟ್’ ಕೊಟ್ಟಿದೆ. ಸೆಪ್ಟೆಂಬರ್ 22ರಿಂದಲೇ ಹೊಸ ಜಿಎಸ್‌ಟಿ ದರ (GST Rate) ಜಾರಿಗೆ ಬರಲಿದೆ. ಇದರಿಂದ ಅದೆಷ್ಟೋ ದಿನಬಳಕೆ ವಸ್ತುಗಳ ಬೆಲೆ ಕೈಗೆಟುಕುವ ದರದಲ್ಲಿ ಸಿಗಲಿದೆ. ನಾವು ದಿನನಿತ್ಯ ಬಳಸುವ ಬಹುತೇಕ ವಸ್ತುಗಳ ಬೆಲೆಗೆ ಅಗ್ಗದಲ್ಲಿ ಸಿಗಲಿದೆ. ಇದನ್ನೂ ಓದಿ: ನವರಾತ್ರಿಯಿಂದಲೇ ಹೊಸ GST ದರ ಜಾರಿ; ಯಾವ ವಸ್ತುಗಳು ಅಗ್ಗ, ಯಾವುದು ದುಬಾರಿ? – ಇಲ್ಲಿದೆ ಪೂರ್ಣ ಪಟ್ಟಿ
 


 
		 
		 
		 
		 
		
 
		 
		 
		 
		