ಬೆಂಗಳೂರು: ಇಂದು ಪ್ರಧಾನಿ ನರೇಂದ್ರ ಇಡೀ ದೇಶವನ್ನುದ್ದೇಶಿಸಿ ಮನ್ ಕೀ ಬಾತ್ ನಲ್ಲಿ ಮಾತನಾಡಲಿದ್ದಾರೆ. ಕಳೆದ ತಿಂಗಳ ಮನ್ ಕೀ ಬಾತ್ ನಲ್ಲಿ ಲಾಕ್‍ಡೌನ್ ಹೇರಿಕೆ ಕ್ಷಮೆ ಕೇಳಿದ್ದ ಅವರು ಕೊರೊನಾ ಬಗ್ಗೆ ಕಳವಳ ವ್ಯಕ್ತಪಡಿಸಿದ್ದರು.
ಕಟ್ಟುನಿಟ್ಟಿನ ಲಾಕ್‍ಡೌನ್ ನಡುವೆಯೂ ಮಾರಕ ಕೊರೊನಾ ವೈರಸ್ ಆರ್ಭಟ ಭಾರತದಲ್ಲಿ ಮುಂದುವರಿದಿದೆ. ಕೊರೊನಾ ನಿಯಂತ್ರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಎರಡನೇ ಅವಧಿಗೆ ಮೇ 3ರವರೆಗೂ ಲಾಕ್‍ಡೌನ್ ವಿಸ್ತರಿಸಿದ್ದಾರೆ. ಕೊರೊನಾ ಬಿಕ್ಕಟ್ಟಿನ ನಡುವೆ ಆಗ್ಗಾಗ ಜನರನ್ನುದ್ದೇಶಿಸಿ ಪ್ರಧಾನಿ ನರೇಂದ್ರ ಮಾತಾಡುತ್ತಿದ್ದಾರೆ. ಜನತಾ ಕರ್ಪ್ಯೂ ಸಂದರ್ಭದಲ್ಲಿ ಸೇರಿದಂತೆ ಹಲವು ಬಾರಿ ದೇಶವನ್ನುದ್ದೇಶಿಸಿ ಪ್ರಧಾನಿ ಮಾತಾಡಿದ್ದಾರೆ. ಈ ಅದೇ ಮಾದರಿಯಲ್ಲೇ ಕೊರೊನಾ ವೈರಸ್ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಇಂದು ಮನ್ ಕಿ ಬಾತ್ ಮೂಲಕ ದೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಕೊರೊನಾ ಬಿಕ್ಕಟ್ಟು ಆರಂಭವಾದ ಬಳಿಕ ಎರಡನೇ ಬಾರಿ ಮನ್ ಕಿ ಬಾತ್ ಇದಾಗಿದ್ದು, ದೇಶದ ಜನರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.
Advertisement
Advertisement
ಪ್ರಧಾನಿ ನರೇಂದ್ರ ಮೋದಿ ಇಂದು ಬೆಳಗ್ಗೆ 11 ಗಂಟೆಗೆ ದೇಶ ಮತ್ತು ವಿದೇಶಗಳಲ್ಲಿರುವ ಭಾರತೀಯರನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ದೇಶದಲ್ಲಿ ಕೊರೊನಾ ಸೃಷ್ಟಿಸಿರುವ ಬಿಕ್ಕಟ್ಟಿನ ಕುರಿತು ಮಾತನಾಡಲಿದ್ದಾರೆ.
Advertisement
ಕೊರೊನಾ ನಿಯಂತ್ರಿಸುವ ಸಲುವಾಗಿ ದೇಶದಲ್ಲಿ ಎರಡು ಹಂತಗಳಲ್ಲಿ ಲಾಕ್‍ಡೌನ್ ಹೇರಲಾಗಿದ್ದು, ಒಟ್ಟು 34 ದಿನಗಳು ದೇಶ ಲಾಕ್‍ಡೌನ್ ನಲ್ಲಿದೆ. ಇಷ್ಟು ದಿನಗಳು ಜನರು ಪಟ್ಟಿರುವ ಕಷ್ಟದ ಬಗ್ಗೆ ಮೋದಿ ಬೆಳಕು ಚೆಲ್ಲಬಹುದು. ಕಳೆದ ಬಾರಿ ಅವರು ಲಾಕ್‍ಡೌನ್ ನಿರ್ಧಾರಕ್ಕೆ ದೇಶದ ಜನರನ್ನ ಕ್ಷಮೆ ಕೇಳಿದ್ದರು.
Advertisement
ಈ ನಡುವೆ ದೇಶದ ಜನರಿಗೆ ಲಾಕ್‍ಡೌನ್ ಭವಿಷ್ಯದ ಬಗ್ಗೆ ಚಿಂತೆ ಶುರುವಾಗಿದೆ. ಇನ್ನೊಂದು ಅವಧಿಗೆ ಲಾಕ್‍ಡೌನ್ ಮುಂದುವರಿದರೆ ಹೇಗಪ್ಪಾ ಬದುಕು ಎನ್ನುವ ಆತಂಕದಲ್ಲಿದ್ದಾರೆ. ಹೀಗಾಗೀ ಇಂದಿನ ಮನ್ ಕೀ ಬಾತ್ ನಲ್ಲಿ ಪ್ರಧಾನಿ ಮೋದಿ ಲಾಕ್‍ಡೌನ್ ಭವಿಷ್ಯದ ಬಗ್ಗೆ ಮೋದಿ ಮಾತನಾಡಬಹುದು ಎನ್ನಲಾಗುತ್ತಿದೆ. ಲಾಕ್‍ಡೌನ್ ಭವಿಷ್ಯದ ಬಗ್ಗೆ ಇಂದು ಯಾವುದೇ ನಿರ್ಧಾರ ಕೈಗೊಳ್ಳದೆ ಇದ್ರು , ನಾಳೆ ಎಲ್ಲ ಸಿಎಂಗಳ ಜೊತೆ ಪ್ರಧಾನಿ ಮಾತುಕತೆ ನಡೆಸಲಿದ್ದು ಬಳಿಕ ನಿರ್ಧಾರ ಹೊರಹಾಕಬಹುದು. ಈ ಬಗ್ಗೆ ಕೆಲವು ಸುಳಿವು ನೀಡುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ.
ಕೊರೊನಾ ವಾರಿಯರ್ಸ್ ವೈದ್ಯರು, ವೈದ್ಯಕೀಯ ಸಹಾಯಕರು, ಪೊಲೀಸರ ಕಷ್ಟಗಳ ಬಗ್ಗೆ ಜನರಿಗೆ ತಿಳುವಳಿಕೆ ನೀಡುವುದರ ಜೊತೆಗೆ ಅವರೊಂದಿಗೆ ಸಹಕರಿಸುಂತೆ ಮನವಿ ಮಾಡುವ ಸಾಧ್ಯತೆ ಇದೆ. ಕೊರೊನಾ ವಾರಿಯರ್ಸ್ ಅನುಭವದ ಜೊತೆಗೆ ಕೊರೊನಾ ಗೆದ್ದು ಬಂದವರ ಅನುಭವವನ್ನು ಮೋದಿ ಕೇಳಿ ಜನರೊಂದಿಗೆ ಹಂಚಿಕೊಳ್ಳಬಹುದು. ಒಟ್ಟಾರೆ ಇಂದಿನ ಮೋದಿ ಮನ್ ಕಿ ಬಾತ್ ಗೆ ದೇಶದ ಜನರು ಕಾತುರದಿಂದ ಕಾಯುತ್ತಿದ್ದು, ರಿಲೀಫ್ ಸಿಗಬಹದಾ ಎಂಬ ಆಸೆಯಲ್ಲಿರೊದಂತು ಸತ್ಯ