ಭಾರತಕ್ಕೆ ಚೀತಾಗಳ ಉಡುಗೊರೆ ನೀಡಿದ್ದಕ್ಕೆ ಧನ್ಯವಾದ: ನಮೀಬಿಯಾಗೆ ಮೋದಿ ಕೃತಜ್ಞತೆ

Public TV
1 Min Read
PM Modi In Namibia

ವಿಂಡ್‌ಹೋಕ್: ಭಾರತಕ್ಕೆ ಚೀತಾಗಳನ್ನು ಉಡುಗೊರೆಯಾಗಿ ನೀಡಿದ ನಮೀಬಿಯಾಗೆ ಪ್ರಧಾನಿ ಮೋದಿ ಕೃತಜ್ಞತೆ ಸಲ್ಲಿಸಿದ್ದಾರೆ. ಇದು ಎರಡೂ ರಾಷ್ಟ್ರಗಳ ನಡುವಿನ ಸಹಕಾರ, ಸಂರಕ್ಷಣೆ ಮತ್ತು ಸಹಾನುಭೂತಿಯ ಕಥೆ ಎಂದು ಮೋದಿ ಬಣ್ಣಿಸಿದ್ದಾರೆ.

ನಮೀಬಿಯಾ ಗಣರಾಜ್ಯದ ಸಂಸತ್ತಿನ ಜಂಟಿ ಅಧಿವೇಶನವನ್ನುದ್ದೇಶಿಸಿ ಮಾತನಾಡಿದ ನರೇಂದ್ರ ಮೋದಿ, ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಚೀತಾಗಳನ್ನು ವೈಯಕ್ತಿಕವಾಗಿ ಕೊಡುಗೆ ನೀಡಿದ ನಮೀಬಿಯಾ ಔದಾರ್ಯವನ್ನು ಸ್ಮರಿಸಿದ್ದಾರೆ.

Namibian Cheetah

ನಮ್ಮ ದೇಶದಲ್ಲಿ ಚೀತಾಗಳ ಸಂತತಿಯನ್ನು ಪುನಃ ಪರಿಚಯಿಸುವಲ್ಲಿ ನೀವು ನಮಗೆ ಸಹಾಯ ಮಾಡಿದ್ದೀರಿ. ಭಾರತ ಮತ್ತು ನಮೀಬಿಯಾ ಸಹಕಾರ, ಸಂರಕ್ಷಣೆ ಮತ್ತು ಸಹಾನುಭೂತಿಯ ಪ್ರಬಲ ಕಥೆಯನ್ನು ಹೊಂದಿವೆ. ನಿಮ್ಮ ಉಡುಗೊರೆಗೆ ನಾವು ತುಂಬಾ ಕೃತಜ್ಞರಾಗಿರುತ್ತೇವೆ ಎಂದು ತಿಳಿಸಿದ್ದಾರೆ.

ಚೀತಾಗಳು ಹೊಸ ಮನೆಯಲ್ಲಿ ಚೆನ್ನಾಗಿ ಹೊಂದಿಕೊಂಡಿವೆ. ಅವುಗಳ ಸಂಖ್ಯೆಯೂ ಹೆಚ್ಚಾಗಿದೆ. ಭಾರತದಲ್ಲಿ ತಮ್ಮ ಸುಂದರ ಕ್ಷಣಗಳನ್ನು ಆನಂದಿಸುತ್ತಿವೆ ಎಂದು ಚೀತಾಗಳ ಬಗ್ಗೆ ಮೋದಿ ಹೇಳಿದ್ದಾರೆ.

ಅತಿಯಾದ ಬೇಟೆಯಾಡುವಿಕೆಯಿಂದಾಗಿ ಭಾರತದಲ್ಲಿ ಅಳಿವಿನಂಚಿನಲ್ಲಿರುವ ಚೀತಾಗಳ ಸಂತತಿಯನ್ನು ಭಾರತದಲ್ಲಿ ಮತ್ತೆ ಹೆಚ್ಚಿಸಲು ಎಂಟು ಚೀತಾಗಳನ್ನು ನಮೀಬಿಯಾದಿಂದ ತರಲಾಗಿತ್ತು. ಐದು ಹೆಣ್ಣು ಮತ್ತು ಮೂರು ಗಂಡು ಚೀತಾಗಳನ್ನು 2022ರಲ್ಲಿ ವಿಮಾನದಲ್ಲಿ ಕುನೊದ ಕ್ವಾರಂಟೈನ್ ಆವರಣದಲ್ಲಿ ತಂದು ಬಿಡಲಾಗಿತ್ತು.

Share This Article