ಗಾಂಧೀನಗರ: ಗುಜರಾತ್‍ನ (Gujarat) ಜಾಮ್‍ನಗರಕ್ಕೆ (Jamnagar) ತೆರಳುತ್ತಿದ್ದ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ರಸ್ತೆ ಮಧ್ಯೆ ಕಾರಿನಿಂದ ಇಳಿದು ಅಭಿಮಾನಿಯಿಂದ ತಮ್ಮ ತಾಯಿಯ ಭಾವಚಿತ್ರವನ್ನು ಸ್ವೀಕರಿಸಿದ್ದಾರೆ.
Advertisement
ಫೋಟೋದಲ್ಲಿ ನರೇಂದ್ರ ಮೋದಿ ಮತ್ತು ಅವರ ತಾಯಿ ಇರುವುದನ್ನು ಕಾಣಬಹುದಾಗಿದೆ. ಜನಸಮೂಹದ ಮಧ್ಯೆ ವ್ಯಕ್ತಿಯೊಬ್ಬರು ಮೋದಿ ಈ ಗಿಫ್ಟ್ ಅನ್ನು ನೀಡಿದ್ದು, ಮೋದಿ ಅವರು ತಮ್ಮ ತಾಯಿಯಿಂದ ಆಶೀರ್ವಾದ ಪಡೆಯುತ್ತಿರುವುದನ್ನು ನೋಡಬಹುದಾಗಿದೆ. ಇದನ್ನೂ ಓದಿ: ಕೌಟುಂಬಿಕ ಸಮಸ್ಯೆಗೆ – ಆನ್‍ಲೈನ್ ಜ್ಯೋತಿಷಿ ನಂಬಿ ಲಕ್ಷಗಟ್ಟಲೆ ಹಣ ಕಳ್ಕೊಂಡ ಮಹಿಳೆ
Advertisement
#WATCH | PM Narendra Modi got down from his car to accept people’s greetings in Jamnagar, Gujarat earlier this evening. pic.twitter.com/t7iLTOs3eK
— ANI (@ANI) October 10, 2022
Advertisement
ಇದೇ ವೇಳೆ ಅಭಿಮಾನಿ ಇದೇ ರೀತಿಯ ಮತ್ತೊಂದು ಚಿಕ್ಕ ಫೋಟೋವನ್ನು ತೆಗೆದುಕೊಂಡು ಬಂದು ಮೋದಿ ಅವರಿಂದ ಆಟೋಗ್ರಾಫ್ ಹಾಕಿಸಿಕೊಂಡರು. ನಂತರ ಪ್ರಧಾನಿ ಅವರ ಆಶೀರ್ವಾದ ಪಡೆದರು. ಮೋದಿ ಅಕ್ಟೋಬರ್ 9 ರಿಂದ 11 ರವರೆಗೆ ಮೂರು ದಿನಗಳ ಕಾಲ ಗುಜರಾತ್ (Gujrat) ಪ್ರವಾಸ ಕೈಗೊಂಡಿದ್ದಾರೆ. ಮೊದಲನೇಯ ದಿನದಂದು ಮೋದಿ ಅವರು ಮೊಧೇರಾಕ್ಕೆ (Modhera) ಭೇಟಿ ನೀಡಿದರು. ಇದನ್ನು ಭಾರತದ ಮೊದಲ ಸೌರಶಕ್ತಿ ಚಾಲಿತ (Net Renewable Energy Generator) (ನೆಟ್ ರಿನ್ಯೂವೇಬಲ್) ಗ್ರಾಮ ಎಂದೇ ಕರೆಯಲಾಗುತ್ತದೆ.
Advertisement
ಅಕ್ಟೋಬರ್ 10 ರಂದು ಭರೂಚ್, ಅಹಮದಾಬಾದ್ ಮತ್ತು ಜಾಮ್‍ನಗರಕ್ಕೆ ಭೇಟಿ ನೀಡಿದ ಮೋದಿ ಅವರು, ಅಕ್ಟೋಬರ್ 11 ರಂದು ಅಹಮದಾಬಾದ್ ಸಿವಿಲ್ ಆಸ್ಪತ್ರೆಗೆ ಬೇಟಿ ನೀಡಿ ಹೊಸ ಯೋಜನೆಗಳಿಗೆ ಅಡಿಪಾಯ ಹಾಕಲಿದ್ದಾರೆ. ಇದನ್ನೂ ಓದಿ: ಓಲಾ, ಉಬರ್, ರ್‍ಯಾಪಿಡೋ ಸುಲಿಗೆ- ಪ್ರಯಾಣಿಕರಿಗೂ ಬ್ಲೇಡ್, ಚಾಲಕರಿಗೂ ಕತ್ತರಿ