ನವದೆಹಲಿ: ಬಿಲ್ಕಿಸ್ ಬಾನು (Bilkish Bano) ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಗುಜರಾತ್ ಸರ್ಕಾರ (Gujarat Government) ಸುಪ್ರೀಂ ಕೋರ್ಟ್‌ಗೆ (Supreme Court) ಅರ್ಜಿ ಸಲ್ಲಿಸಿದ ವಿಚಾರಕ್ಕೆ ಕಾಂಗ್ರೆಸ್ (Congress) ನಾಯಕ ರಾಹುಲ್ ಗಾಂಧಿ (Rahul Gandhi), ಪ್ರಧಾನಿ ಮೋದಿ ವಿರುದ್ಧ ಕೆಂಡಾಮಂಡಲವಾಗಿದ್ದಾರೆ.
ಅಪರಾಧಿಗಳ ಕ್ಷಮಾಪಣೆಗೆ ತನಿಖಾ ಸಂಸ್ಥೆಯು ಕೇಂದ್ರದಿಂದ ಸೂಕ್ತ ಆದೇಶಗಳನ್ನು ಪಡೆದುಕೊಂಡಿದೆ. 11 ಅಪರಾಧಿಗಳ ಬಿಡುಗಡೆಗೆ ಕೇಂದ್ರವು ಅನುಮೋದನೆ ನೀಡಿದೆ ಎಂದು ಗುಜರಾತ್ ಸರ್ಕಾರ ಅಫಿಡವಿಟ್‌ನಲ್ಲಿ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಟ್ವೀಟ್ ಮೂಲಕ ಪ್ರಧಾನಿ (PrimeMinister) ವಿರುದ್ಧ ವ್ಯಾಗ್ದಾಳಿ ನಡೆಸಿದ್ದಾರೆ.
Advertisement
लाल किले से महिला सम्मान की बात लेकिन असलियत में 'बलात्कारियों' का साथ।
प्रधानमंत्री के वादे और इरादे में अंतर साफ है, PM ने महिलाओं के साथ सिर्फ छल किया है।
— Rahul Gandhi (@RahulGandhi) October 18, 2022
Advertisement
ಪ್ರಧಾನಿಯವರು ಮಿತವ್ಯಯದ ಭರವಸೆಗಳನ್ನ ನೀಡುತ್ತಿದ್ದಾರೆ. ಮಹಿಳೆಯರ ಸುರಕ್ಷತೆಗೆ ಸಂಬಂಧಿಸಿದಂತೆ ಅವರ ಮಾತುಗಳು ಮತ್ತು ಉದ್ದೇಶಗಳ ನಡುವೆ ವ್ಯತ್ಯಾಸ ತುಂಬಾ ಸ್ಪಷ್ಟವಾಗಿ ಗೊತ್ತಾಗುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ನನ್ನನ್ನು ಪ್ಯಾಕೇಜ್ ಸ್ಟಾರ್ ಅನ್ನೋರಿಗೆ ಚಪ್ಪಲೀಲಿ ಹೊಡೀತೀನಿ: ಪವನ್ ಕಲ್ಯಾಣ್ ಆನ್ ಫೈಯರ್
Advertisement
Advertisement
ಕೆಂಪುಕೋಟೆಯಲ್ಲಿ ಮಹಿಳೆಯರ ಬಗ್ಗೆ ಗೌರವದ ಮಾತುಗಳನ್ನಾಡುತ್ತಾರೆ. ಆದರೆ ವಾಸ್ತವದಲ್ಲಿ ಅತ್ಯಾಚಾರಿಗಳಿಗೆ ಬೆಂಬಲವಾಗಿ ನಿಲ್ಲುತ್ತಾರೆ. ಪ್ರಧಾನಿಯವರ ಈ ಭರವಸೆ ಹಾಗೂ ಉದ್ದೇಶಗಳ ನಡುವೆ ವ್ಯತ್ಯಾಸ ಇರುವುದು ಸ್ಪಷ್ಟವಾಗಿದೆ. ಪ್ರಧಾನಿ ಮೋದಿ (Narendra Modi) ಅವರು ಮಹಿಳೆಯರಿಗೆ (Women) ಮೋಸ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಮುರುಘಾಶ್ರೀ ವಿರುದ್ಧ 2ನೇ ಫೋಕ್ಸೋ ಪ್ರಕರಣ- ಸಂತ್ರಸ್ತ ಬಾಲಕಿ, ತಾಯಿ ಹೇಳಿಕೆಯಲ್ಲಿ ಗೊಂದಲ
ಬಿಲ್ಕಿಸ್ ಬಾನು ಪ್ರಕರಣದಲ್ಲಿ ಈಗಾಗಲೇ 14 ವರ್ಷಗಳಿಗಿಂತ ಹೆಚ್ಚು ಕಾಲ ಜೈಲುವಾಸ ಅನುಭವಿಸಿದ 11 ಅಪರಾಧಿಗಳಿಗೆ ಶಿಕ್ಷೆಯಿಂದ ವಿನಾಯಿತಿ ನೀಡಲಾಗಿದೆ. ಆದಾಗ್ಯೂ 11 ಅಪರಾಧಿಗಳ ಬಿಡುಗಡೆ ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ನವೆಂಬರ್ 29 ರಂದು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸಲಿದೆ.