ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರ ಮನೆಗೆ ಹೊಸ ಅತಿಥಿಯ ಆಗಮನವಾಗಿದೆ. ಕರು (Calf) ಜೊತೆ ಮೋದಿ ಕಳೆದ ಕ್ಷಣಗಳ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಪ್ರಧಾನಿ ಮೋದಿ ಅವರ ಲೋಕ ಕಲ್ಯಾಣ್ ಮಾರ್ಗ್ ನಿವಾಸಕ್ಕೆ ಹೊಸ ಅತಿಥಿ ‘ದೀಪಜ್ಯೋತಿ’ (Deepjyoti) ಹೆಸರಿನ ಕರು ಆಗಮಿಸಿದೆ. ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಪ್ರಧಾನಿ, ನಿವಾಸದಲ್ಲಿ ಗೋಮಾತೆ ಕರುವಿಗೆ ಜನ್ಮ ನೀಡಿದ್ದಾಳೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಕರ್ನಾಟಕದಲ್ಲಿ ಗಣೇಶನನ್ನು ಕಾಂಗ್ರೆಸ್ ಸರ್ಕಾರ ಪೊಲೀಸ್ ವ್ಯಾನ್ ಕಂಬಿ ಹಿಂದೆ ಹಾಕಿದೆ: ಮೋದಿ ವಾಗ್ದಾಳಿ
A new member at 7, Lok Kalyan Marg!
Deepjyoti is truly adorable. pic.twitter.com/vBqPYCbbw4
— Narendra Modi (@narendramodi) September 14, 2024
ತಮ್ಮ ನಿವಾಸದಲ್ಲಿ ಕರುವಿನ ಜೊತೆ ಕಾಲ ಕಳೆಯುತ್ತಿರುವ ವೀಡಿಯೋವನ್ನೂ ಹಂಚಿಕೊಂಡಿದ್ದಾರೆ. ಪ್ರೀತಿಯ ತಾಯಿ ಹಸು ಹೊಸ ಕರುವಿಗೆ ಜನ್ಮ ನೀಡಿದೆ. ಅದರ ಹಣೆಯ ಮೇಲೆ ಬೆಳಕಿನ ಗುರುತು ಇದೆ. ಆದ್ದರಿಂದ, ನಾನು ಅದಕ್ಕೆ ‘ದೀಪಜ್ಯೋತಿ’ ಎಂದು ಹೆಸರಿಸಿದ್ದೇನೆ ಎಂದು ಪ್ರಧಾನಿ ಪೋಸ್ಟ್‌ನಲ್ಲಿ ಬರೆದುಕೊಂಡಿದ್ದಾರೆ.
ಪ್ರಧಾನ ಮಂತ್ರಿಯು ತಮ್ಮ ನಿವಾಸಕ್ಕೆ ಕರುವನ್ನು ಹೊತ್ತುಕೊಂಡು ಹೋಗುತ್ತಿರುವುದು, ಪೂಜೆ ವೇಳೆ ಕರುವಿಗೆ ಹೂವಿನ ಹಾರ ಹಾಕುವುದು, ಅದನ್ನು ಎತ್ತಿ ಮುದ್ದಾಡುತ್ತಿರುವುದು, ತೋಟಕ್ಕೆ ತೆಗೆದುಕೊಂಡು ಹೋಗುತ್ತಿರುವ ದೃಶ್ಯದ ಫೋಟೊಗಳನ್ನು ಸಹ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ಜ್ಞಾನವಾಪಿಯೇ ಸಾಕ್ಷಾತ್ ವಿಶ್ವನಾಥ, ಅದನ್ನು ಮಸೀದಿ ಎನ್ನುವುದು ವಿಷಾದನೀಯ: ಯೋಗಿ ಆದಿತ್ಯನಾಥ್