ಲಕ್ನೋ: ವಾರಣಾಸಿಯಲ್ಲಿ (Varanas) ಎರಡು ದಿನಗಳ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರಿಂದು ವಿಶ್ವದ ಅತಿದೊಡ್ಡ ಧ್ಯಾನ ಕೇಂದ್ರವಾದ ʻಸ್ವರವೇದ ಮಹಾಮಂದಿರʼ (Swarved Mahamandir) ಉದ್ಘಾಟಿಸಿದರು. ಬಳಿಕ ಕೆಲ ಕಾಲ ಬಿಡುವು ಮಾಡಿಕೊಂಡು ಶಾಲಾ ಮಕ್ಕಳೊಂದಿಗೆ ಕಾಲ ಕಳೆದ ಪ್ರಸಂಗ ಕಂಡುಬಂದಿತು.
वाराणसी में स्कूली बच्चों के साथ संवाद ने नई ऊर्जा से भर दिया। इन प्यारे-प्यारे बच्चों ने बताया कि स्कूल में सुविधाएं बढ़ने से कैसे अब पढ़ाई में भी उनका मन खूब लग रहा है। pic.twitter.com/H7cGgIxU10
— Narendra Modi (@narendramodi) December 18, 2023
ಸಿಎಂ ಯೋಗಿ ಆದಿತ್ಯನಾಥ್ ಅವರೊಂದಿಗೆ ವಾರಣಾಸಿಯ ಶಾಲೆಯೊಂದಕ್ಕೆ (Varanasi School) ಭೇಟಿ ನೀಡಿದ ಮೋದಿ, ಪುಟ್ಟ ಮಕ್ಕಳೊಂದಿಗೆ ಸಂವಾದ ನಡೆಸುತ್ತಾ? ತಾವೂ ಮಕ್ಕಳಾಗಿಯೇ ಕಾಲ ಕಳೆದರು. ಈ ವೀಡಿಯೋವನ್ನು ತಮ್ಮ ಎಕ್ಸ್ ಖಾತೆಯಲ್ಲೂ ಹಂಚಿಕೊಂಡಿದ್ದಾರೆ. ಇದನ್ನೂ ಓದಿ: ವಾರಣಾಸಿಯಲ್ಲಿ ವಿಶ್ವದ ಅತಿದೊಡ್ಡ ಧ್ಯಾನ ಕೇಂದ್ರ ಉದ್ಘಾಟಿಸಿದ ಪಿಎಂ ಮೋದಿ- ವಿಶೇಷತೆ ಏನು?
ಮೋದಿ ಶಾಲೆಯೊಳಗೆ ಬರುತ್ತಿದ್ದಂತೆ ವಿಶೇಷ ಗೀತೆಯೊಂದನ್ನು ಹಾಡಿದ ಮಕ್ಕಳು ಗೌರವದಿಂದ ತಲೆಭಾಗಿ ನಮಸ್ಕರಿಸಿದರು. ಬಳಿಕ ಅಲ್ಲಿಯೇ ಮೋದಿ ಮಕ್ಕಳ ಸಾಮರ್ಥ್ಯ ಪರೀಕ್ಷಿಸುವ ಸಣ್ಣ ಪ್ರಯತ್ನ ಮಾಡಿದರು. ಮಕ್ಕಳಿಗೆ ಏನು ಇಷ್ಟ? ಇಂತಹ ಸುಂದರ ಶಾಲೆಯಲ್ಲಿ ಹೇಗೆ ಕಲಿಯುತ್ತಿದ್ದೀರಿ? ಎಂದು ಪ್ರಶ್ನಿಸಿದರು. ಅದಕ್ಕೆ ಮಕ್ಕಳು ಹಾಡಿನ ಮೂಲಕವೇ ಉತ್ತರ ಕೊಟ್ಟು ಪ್ರಧಾನಿಗಳನ್ನು ಸಂತಸಪಡಿಸಿದರು.
ಈ ವೇಳೆ ಪುಟ್ಟ ಬಾಲಕಿಯೊಬ್ಬಳು ʻನಿಮಗಿಷ್ಟವಾದ ಒಂದು ಕವಿತೆಯೊಂದನ್ನು ಬರೆದಿದ್ದೇನೆ ನಿಮಗೆ ಹೇಗನ್ನಿಸುತ್ತದೆ ಹೇಳಿ? ಎಂದು ಕೇಳಿದಳು, ಅದಕ್ಕೆ ಮೋದಿ ಹೌದಾ.. ಹಾಡು ನೋಡೋಣ ಎಂದು ನಯವಾಗಿಯೇ ಹೇಳಿದರು. ಆಗ ಬಾಲಕಿ ʻಜನಮನ ನಾಯಕ ಶ್ರೇಷ್ಠ ವಿಧಾಯಕ, ವಿಶ್ವ ಚೇತನಕೆ ಅಧಿನಾಯಕ, ಜೈ ಮೋದಿ ಜೈ ಹಿಂದೂಸ್ತಾನ್ʼ ಎಂದು ಕವಿತೆ ಹಾಡಿದಳು. ಇದಕ್ಕೆ ಮೋದಿ ವ್ಹಾ ವ್ಹಾ ಎಂದು ಚಪ್ಪಾಳೆ ಬಾರಿಸಿ, ಬೆನ್ನುತಟ್ಟಿದರು.
ಬಳಿಕ ಮತ್ತೊಂದು ಕೊಠಡಿಯಲ್ಲಿದ್ದ ಮಕ್ಕಳನ್ನು ಭೇಟಿಯಾಗಿ ಸ್ಮಾರ್ಟ್ ಕ್ಲಾಸ್ ನಿಮಗೆ ಹೇಗೆ ಅನ್ನಿಸುತ್ತಿದೆ? ನೀರಿನ ಸೌಲಭ್ಯ ಚೆನ್ನಾಗಿದೆಯೇ ಎಂದೆಲ್ಲಾ ಪ್ರಶ್ನಿಸಿದರು. ಮಕ್ಕಳು ಅದಕ್ಕೆಲ್ಲ ಸುಲಲಿತವಾಗಿಯೇ ಉತ್ತರ ಕೊಟ್ಟರು. ಇದನ್ನೂ ಓದಿ: ಐಸಿಸ್ ಉಗ್ರರ ನಂಟು ಪ್ರಕರಣ – ಬೆಂಗ್ಳೂರು ಸೇರಿದಂತೆ 4 ರಾಜ್ಯಗಳ 19 ಕಡೆ NIA ದಾಳಿ