ಬೆಂಗಳೂರು: ಕಳೆದ ಶನಿವಾರ ಮಂಗಳೂರಿನಲ್ಲಿ ಬಿಜೆಪಿ ಆಯೋಜಿಸಿದ್ದ ಸಂಕಲ್ಪ ರ‍್ಯಾಲಿಯಲ್ಲಿ ಭಾಗವಹಿಸಿದ್ದ ಜನಸ್ತೋಮ ಪ್ರಧಾನಿ ಮೋದಿ ಅವರಿಗೆ ಆಶ್ಚರ್ಯ ತಂದಿದೆ.
ಡಿಡಿ ನ್ಯೂಸ್‍ಗೆ ನೀಡಿದ ಸಂದರ್ಶನದಲ್ಲಿ ಪ್ರಧಾನಿ ಮೋದಿ, ನಾನು ಹಲವು ರ‍್ಯಾಲಿಯಲ್ಲಿ ಈಗ ಭಾಗವಹಿಸುತ್ತಿದ್ದೇನೆ. ಈ ವೇಳೆ ಭಾರೀ ಸಂಖ್ಯೆಯಲ್ಲಿ ಜನ ಪಾಲ್ಗೊಳ್ಳುತ್ತಿರುವುದು ನನ್ನ ಗಮನಕ್ಕೆ ಬಂದಿದೆ. 2014ರಲ್ಲಿ ನಾನು ಮಂಗಳೂರಿಗೆ ಹೋದಾಗ ಇಷ್ಟು ಜನ ಸೇರಿರಲಿಲ್ಲ. ಈ ಬಾರಿ ನೆರೆದ ಜನ ನೋಡಿ ನಾನು ಆಶ್ಚರ್ಯಗೊಂಡೆ ಎಂದು ತಿಳಿಸಿದರು. ಇದನ್ನೂ ಓದಿ:ವಂಶೋದಯ ಅಲ್ಲ ನಮ್ಮದು ಅಂತ್ಯೋದಯ್ – ನಿಮ್ಮ ಒಂದು ವೋಟಿನಿಂದ ದೇಶ ಬದಲಾಗಿದೆ: ಮೋದಿ
Advertisement
Advertisement
ಮಂಗಳೂರಿನಲ್ಲಿ ನನ್ನ ರೋಡ್ ಶೋ ನಿಗದಿಯಾಗಿರಲಿಲ್ಲ. ನಾನು ಕಾರಿನಲ್ಲಿದ್ದಾಗ ರಸ್ತೆ ಬದಿಯಲ್ಲಿ ಭಾರೀ ಸಂಖ್ಯೆಯಲ್ಲಿದ್ದ ಜನರನ್ನು ನೋಡಿದೆ. ಹೀಗಾಗಿ ಅವರಿಗೆ ವಂದನೆ ಸಲ್ಲಿಸಲು ನಾನು ಕಾರಿನಿಂದ ತಲೆ ಹೊರಗಡೆ ಹಾಕಿ ಕೈ ಬೀಸಿದೆ. ಈ ದೃಶ್ಯವನ್ನು ಮೇಲಿನಿಂದ ಯಾರೋ ವಿಡಿಯೋ ಮಾಡಿದ್ದು, ಆ ವಿಡಿಯೋ ಸಮುದ್ರದ ಅಲೆಯಂತೆ ಕಂಡಿದೆ ಎಂದು ಹೇಳಿದರು.
Advertisement
Thank you @narendramodiji for the love and affection. #Mangaluru pic.twitter.com/ZUYnGzSX2G
— Nalinkumar Kateel (@nalinkateel) April 15, 2019
Advertisement
ಈ ವಿಡಿಯೋವನ್ನು ದಕ್ಷಿಣ ಕನ್ನಡ ಸಂಸದ, ಹಾಲಿ ಬಿಜೆಪಿ ಅಭ್ಯರ್ಥಿ ನಳಿನ್ ಕುಮಾರ್ ಕಟೀಲ್ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿ ಪ್ರಧಾನಿಗಳಿಗೆ ಧನ್ಯವಾದ ತಿಳಿಸಿದ್ದಾರೆ.