ನವದೆಹಲಿ: ದೀಪಾವಳಿ ಸಂಭ್ರಮಾಚರಣೆಯನ್ನು ಭಾರತೀಯ ಸೇನಾ ತಂಡದೊಂದಿಗೆ ಮಾಡುತ್ತೇನೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ್ದಾರೆ.
ಇಸ್ರೇಲ್ ಪ್ರಧಾನ ಮಂತ್ರಿ ಬೆಂಜಮಿನ್ ನೇತನ್ಯಾಹು ಅವರ ಟ್ವಿಟ್ಟರ್ ಮೂಲಕ ದೀಪಾವಳಿ ಶುಭಾಶಯ ಕೋರಿದ್ದರು. ಅದಕ್ಕೆ ಪ್ರತಿಕ್ರಿಯಿಸಿದ ಮೋದಿ ಅವರು ಪ್ರತಿ ವರ್ಷ ನಮ್ಮ ಗಡಿ ಕಾಯುವ ಯೋಧರನ್ನು ಭೇಟಿ ಮಾಡುತ್ತೇವೆ. ಈ ಬಾರಿಯೂ ಕೂಡ ಅವರನ್ನು ಭೇಟಿ ಮಾಡಿ ಅವರೊಂದಿಗೆ ದೀಪಾವಳಿ ಸಂಭ್ರಮಾಚರಣೆಯನ್ನು ಮಾಡುತ್ತೇನೆ. ಅಷ್ಟೇ ಅಲ್ಲದೇ ಅವರೊಂದಿಗಿನ ಸಂಭ್ರಮಾಚರಣೆಯ ಫೋಟೋಗಳನ್ನು ಹಂಚಿಕೊಳ್ಳುವುದಾಗಿಯೂ ಹೇಳಿದ್ದಾರೆ. ದೀಪಾವಳಿ ಶುಭಾಶಯವನ್ನು ಕೋರಿದ ಶ್ರೀ ನೇತನ್ಯಾಹು ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.
Advertisement
Bibi, my friend, thank you so much for the Diwali wishes.
Every year, I visit our border areas and surprise our troops. This year too, will spend Diwali with our brave troops. Spending time with them is special.
I will share photos of the same tomorrow evening. 🙂 @netanyahu https://t.co/gnouOA3QGt
— Narendra Modi (@narendramodi) November 6, 2018
Advertisement
ಇಸ್ರೇಲ್ ಜನರ ಪರವಾಗಿ, ನನ್ನ ಪ್ರೀಯ ಸ್ನೇಹಿತ ನರೇಂದ್ರ ಮೋದಿ ಮತ್ತು ಭಾರತದ ಜನರು ಸಂತೋಷದ ದೀಪಾವಳಿಗಳನ್ನು ಬಯಸಬೇಕೆಂದು ನಾನು ಬಯಸುತ್ತೇನೆ. ಈ ಪ್ರಕಾಶಮಾನವಾದ ಹಬ್ಬದ ದೀಪಗಳು ನಿಮಗೆ ಸಂತೋಷ ಮತ್ತು ಸಮೃದ್ಧಿಯನ್ನು ತರುತ್ತವೆ ಎಂದು ಇಸ್ರೇಲ್ ಪ್ರಧಾನಮಂತ್ರಿ ಟ್ವೀಟ್ ಮಾಡಿದ್ದರು.
Advertisement
While interacting with Army and @ITBP_official Jawans in Harsil, spoke about the numerous steps being taken by the Government of India for the strengthening of the defence sector, welfare of ex-servicemen and highlighted how Indian forces are admired globally for the skills. pic.twitter.com/DFAuJfrQwy
— Narendra Modi (@narendramodi) November 7, 2018
Advertisement
2014 ರಲ್ಲಿ ಪ್ರಧಾನ ಮಂತ್ರಿಯಾಗಿದ್ದ ಮೋದಿ ಅವರು ದೀಪಾವಳಿಯನ್ನು ಸಿಯಾಚಿನ್‍ನ ಸೇನಾ ಯೋಧರೊಂದಿಗೆ ಕಳೆದಿದ್ದರು. 2015 ರಲ್ಲಿ ಅವರು ದೀಪಾವಳಿಯ ಹಬ್ಬದಂದು ಪಂಜಾಬ್ ಗಡಿಗೆ ಭೇಟಿ ನೀಡಿದ್ದರು. ಅವರ ಭೇಟಿಯು 1965 ರ ಇಂಡೋ-ಪಾಕ್ ಯುದ್ಧದ 50 ವರ್ಷಗಳ ಕಾಕತಾಳೀಯವಾಗಿತ್ತು.
Celebrated Diwali with our valorous Army and @ITBP_official personnel at Harsil in Uttarakhand.
India is immensely proud of all those who protect our nation, with utmost dedication and courage.
We salute them! pic.twitter.com/siW4Yz2UUd
— Narendra Modi (@narendramodi) November 7, 2018
2016 ರಲ್ಲಿ ಹಿಮಾಚಲ ಪ್ರದೇಶದ ಟಿಬೆಟಿಯನ್ ಬಾರ್ಡರ್ ಪೋಲಿಸ್ ಸಿಬ್ಬಂದಿಯೊಂದಿಗೆ ಕಳೆದಿದ್ದರು. ಕಳೆದ ವರ್ಷ ಜಮ್ಮು ಮತ್ತು ಕಾಶ್ಮೀರದ ಗುರೆಜ್‍ನ ಸೈನಿಕರೊಂದಿಗೆ ತಮ್ಮ ನಾಲ್ಕನೇ ದೀಪಾವಳಿಯನ್ನು ಪ್ರಧಾನಿಯಾಗಿ ಕಳೆದಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv