ಅಕೋಲಾ: ಮಹಾರಾಷ್ಟ್ರದಲ್ಲಿ ವಿಧಾನಸಭೆ ಚುನಾವಣೆ (Maharashtra Assembly Elections) ನಡೆದರೆ ತೆಲಂಗಾಣ ಮತ್ತು ಕರ್ನಾಟಕದಲ್ಲಿ ವಸೂಲಿ ಡಬಲ್ ಆಗಿದೆ. ಕಾಂಗ್ರೆಸ್ ಆಡಳಿತ ರಾಜ್ಯಗಳನ್ನು ಶಾಹಿ ಪರಿವಾರ ಎಟಿಎಂ ಮಾಡಿಕೊಂಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ವಾಗ್ದಾಳಿ ನಡೆಸಿದ್ದಾರೆ. ಅಕೋಲಾದಲ್ಲಿ ನಡೆದ ಚುನವಣಾ ರ‍್ಯಾಲಿ ನಡೆಸಿದ ಮೋದಿ ಮಹಾ ವಿಕಾಸ್ ಅಘಾಡಿ ನಾಯಕರನ್ನು ತರಾಟೆಗೆ ತೆಗೆದುಕೊಂಡರು.
Advertisement
ಮಹಾರಾಷ್ಟ್ರದಲ್ಲಿ ಚುನಾವಣೆ ಆರಂಭವಾಗುತ್ತಿದ್ದಂತೆ ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ (Congress Government) ಮದ್ಯದಂಗಡಿ ಮಾಲೀಕರಿಂದ 700 ಕೋಟಿ ರೂ. ಪಡೆದಿದೆ ಎನ್ನುವ ಆರೋಪ ಇದೆ. ಯೋಚನೆ ಮಾಡಿ ಚುನಾವಣೆ ಗೆದ್ದ ಮೇಲೆ ಇಲ್ಲಿ ಎಷ್ಟು ಭ್ರಷ್ಟಾಚಾರ ಮಾಡಿರಬಹುದು ಮಹಾರಾಷ್ಟ್ರವನ್ನು ಮಹಾ ಅಘಾಡಿಯ ಎಂಟಿಎಂ ಅಗಲು ಬಿಡುವುದಿಲ್ಲ ಎಂದರು. ಇದನ್ನೂ ಓದಿ: ಬೆಂಗ್ಳೂರಿಗೆ ಬರುತ್ತಿದ್ದ ಕೆಎಸ್‌ಆರ್‌ಟಿಸಿ ಐರಾವತ ಬಸ್ ಮೇಲೆ ತೆಲಂಗಾಣದಲ್ಲಿ ಪುಂಡರಿಂದ ಕಲ್ಲು ತೂರಾಟ
Advertisement
Advertisement
ದೇಶ ಬಲಹೀನವಾದಷ್ಟು ಕಾಂಗ್ರೆಸ್ ಬಲಿಷ್ಠವಾಗಲಿದೆ ಅಂತ ಅವರು ಅಂದುಕೊಂಡಿದ್ದಾರೆ. ಆದ್ರೆ ದೇಶ ಬಲಿಷ್ಠವಾದರೆ ಕಾಂಗ್ರೆಸ್ ಶಕ್ತಿಹೀನವಾಗಲಿದೆ. ಅದಕ್ಕಾಗಿ ಕಾಂಗ್ರೆಸ್ ದೇಶವನ್ನು ಬಲಿಷ್ಟವಾಗಲು ಬಿಡುವುದಿಲ್ಲ. ಹಿಂದುಳಿದ ವರ್ಗಗಳು, ಎಸ್ಸಿ, ಎಸ್ಟಿ ಆದಿವಾಸಿಗಳ ನಡುವೆ ಬಿರುಕು ಮೂಡಿಸಿ ಬೇರೆ ಬೇರೆ ಮಾಡಿದೆ, ಎಸ್ಸಿ ಸಮಾಜದ ಜನರು ಅವರೊಳಗೆ ಜಗಳವಾಡುತ್ತಿರಲಿ ಎಂದು ಕಾಂಗ್ರೆಸ್ ಬಯಸುತ್ತದೆ ಇದರಿಂದ ಅವರ ಧ್ವನಿ ಕುಂದುತ್ತದೆ, ಮತ್ತು ಮತ ಒಡೆದು ಹೋಗುತ್ತದೆ ಎಂದು ಕಾಂಗ್ರೆಸ್ ಭಾವಿಸಿರುವುದಾಗಿ ಆರೋಪಿಸಿದರು.
Advertisement
ಕಾಂಗ್ರೆಸ್ ಮತ್ತು ಅದರ ಮಿತ್ರ ಪಕ್ಷಗಳು ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಸಂವಿಧಾನ, ನ್ಯಾಯಾಲಯದ ಬಗ್ಗೆ ಅಥವಾ ದೇಶದ ಭಾವನೆಗಳ ಬಗ್ಗೆ ಕಾಳಜಿ ವಹಿಸುವುದಿಲ್ಲ. 2014 ರಿಂದ 2024ರ ವರೆಗಿನ 10 ವರ್ಷಗಳಲ್ಲಿ, ಮಹಾರಾಷ್ಟ್ರವು ನಿರಂತರವಾಗಿ ಬಿಜೆಪಿಯನ್ನು ಪೂರ್ಣ ಹೃದಯದಿಂದ ಆಶೀರ್ವದಿಸಿದೆ. ಇದಕ್ಕೆ ಕಾರಣ ಮಹಾರಾಷ್ಟ್ರದ ಜನರ ದೇಶಭಕ್ತಿ, ರಾಜಕೀಯ ತಿಳಿವಳಿಕೆ ಮತ್ತು ದೂರದೃಷ್ಟಿ. ಕೇಂದ್ರದಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಕೇವಲ 5 ತಿಂಗಳಾಗಿದೆ. ಈ 5 ತಿಂಗಳಲ್ಲಿ ಲಕ್ಷ ಕೋಟಿ ರೂ. ಯೋಜನೆಗಳನ್ನು ಆರಂಭಿಸಲಾಗಿದೆ ಎಂದು ತಿಳಿಸಿದರು. ಇದನ್ನೂ ಓದಿ: ಯುವತಿಯ ಖಾಸಗಿ ಕ್ಷಣ ವಿಡಿಯೋ ಮಾಡಿ ಬ್ಲ್ಯಾಕ್‌ಮೇಲ್ – ಪ್ರಿಯಕರ, ಅಪ್ರಾಪ್ತ ಸೇರಿದಂತೆ 6 ಮಂದಿಯಿಂದ ಗ್ಯಾಂಗ್ ರೇಪ್
ಮಹಾರಾಷ್ಟ್ರಕ್ಕೆ ಸಂಬಂಧಿಸಿದ ಹೆಚ್ಚಿನ ಸಂಖ್ಯೆಯ ಮೂಲಸೌಕರ್ಯ ಯೋಜನೆಗಳನ್ನು ಸಹ ಹೊಂದಿದೆ. ಕಳೆದ ಎರಡು ಅವಧಿಯಲ್ಲಿ ಮೋದಿ ಬಡವರಿಗಾಗಿ 4 ಕೋಟಿ ಪಕ್ಕಾ ಮನೆಗಳನ್ನು ನಿರ್ಮಿಸಿದ್ದಾರೆ. ಅಷ್ಟೇ ಅಲ್ಲ ಅಂದು ಹಾಕಿಕೊಂಡಿದ್ದ ಗುರಿಯೂ ತಪ್ಪಿತು. ಈಗ ನಾವು ಬಡವರಿಗಾಗಿ 3 ಕೋಟಿ ಹೊಸ ಮನೆಗಳನ್ನು ನಿರ್ಮಿಸಲು ಪ್ರಾರಂಭಿಸುತ್ತಿದ್ದೇವೆ. ಮರಾಠಿಗೆ ಗಣ್ಯ ಭಾಷೆಯ ಸ್ಥಾನಮಾನ ನೀಡುವ ಭಾಗ್ಯ ನಮ್ಮದಾಗಿದೆ. ಇಡೀ ಮಹಾರಾಷ್ಟ್ರದ ಹೆಮ್ಮೆಯ ಆ ಗೌರವ ಮರಾಠಿಗೆ ಸಿಕ್ಕಿದೆ ಎಂದರು. ಇದನ್ನೂ ಓದಿ: ಈ ಮೋದಿ ಇರೋವರೆಗೂ 370ನೇ ವಿಧಿ ಮರುಸ್ಥಾಪಿಸಲು ಸಾಧ್ಯವಿಲ್ಲ: ಗುಡುಗಿದ ಪ್ರಧಾನಿ