ನವದೆಹಲಿ: ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಮೈತ್ರಿ ದಿವಸ್ (ಸ್ನೇಹ ದಿನಾಚರಣೆ)ಯ ಸ್ಮರಣಾರ್ಥವಾಗಿ, ದ್ವಿಪಕ್ಷೀಯ ಸಂಬಂಧಗಳನ್ನು ಮತ್ತಷ್ಟು ವಿಸ್ತರಿಸಲು ಮತ್ತು ಗಟ್ಟಿಗೊಳಿಸಲು ಬಾಂಗ್ಲಾದೇಶದ ಸಹವರ್ತಿ ಶೇಖ್ ಹಸೀನಾ ಅವರೊಂದಿಗೆ ಕೆಲಸ ಮಾಡುವುದನ್ನು ಮುಂದುವರಿಸಲು ಎದುರು ನೋಡುತ್ತಿದ್ದೇನೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
Advertisement
1971ರ ಡಿಸೆಂಬರ್ 6ರಂದು ಹೊಸದಾಗಿ ರೂಪುಗೊಂಡ ಬಾಂಗ್ಲಾದೇಶವನ್ನು ಗುರುತಿಸುವ ಸಲುವಾಗಿ ಭಾರತವು ಮೈತ್ರಿ ದಿವಸ್ ಅನ್ನು ಆಚರಿಸುತ್ತದೆ. ಸದ್ಯ ಈ ಕುರಿತಂತೆ ನರೇಂದ್ರ ಮೋದಿ ಅವರು ಟ್ವೀಟ್ ಮಾಡಿದ್ದು, ಇಂದು ಭಾರತ ಮತ್ತು ಬಾಂಗ್ಲಾದೇಶ ನಡುವಿನ ಮೈತ್ರಿ ದಿವಸ್ (ಸ್ನೇಹ ದಿನಾಚರಣೆ) ಅನ್ನು ಸ್ಮರಿಸುತ್ತದೆ. ನಾವು ನಮ್ಮ 50 ವರ್ಷಗಳ ಸ್ನೇಹದ ಅಡಿಪಾಯವನ್ನು ಜಂಟಿಯಾಗಿ ನೆನಪಿಸಿಕೊಳ್ಳುತ್ತೇವೆ ಮತ್ತು ಆಚರಿಸುತ್ತೇವೆ. ನಮ್ಮ ಸಂಬಂಧವನ್ನು ಮತ್ತಷ್ಟು ವಿಸ್ತರಿಸಲು ಮತ್ತು ಗಾಢವಾಗಿಸಲು ಶೇಖ್ ಹಸೀನಾ ಅವರೊಂದಿಗೆ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ” ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ: 200 ಕೋಟಿ ರೂ. ವಂಚನೆ ಪ್ರಕರಣ – ದೇಶ ತೊರೆಯದಂತೆ ಜಾಕ್ವೆಲಿನ್ ಗೆ ತಡೆ
Advertisement
Today India and Bangladesh commemorate Maitri Diwas. We jointly recall and celebrate the foundations of our 50 years of friendship. I look forward to continue working with H.E. PM Sheikh Hasina to further expand and deepen our ties. #मैत्री_दिवस #মৈত্রী_দিবস#MaitriDiwas
— Narendra Modi (@narendramodi) December 6, 2021
Advertisement
ನರೇಂದ್ರ ಮೋದಿ ಅವರು ಮಾರ್ಚ್‍ನಲ್ಲಿ ಬಾಂಗ್ಲದೇಶದ ರಾಷ್ಟ್ರೀಯ ದಿನಾಚರಣೆಯಲ್ಲಿ ಪಾಲ್ಗೊಳ್ಳಲು ಭೇಟಿ ನೀಡಿದ್ದ ವೇಳೆ, ನವೆಂಬರ್ 6 ರಂದು ಮೈತ್ರಿ ದಿವಸ್ ಎಂದು ಆಚರಿಸಲು ನಿರ್ಧರಿಸಿದರು. ಬಾಂಗ್ಲಾದೇಶದೊಂದಿಗೆ ದ್ವಿಪಕ್ಷೀಯ ರಾಜತಾಂತ್ರಿಕ ಸಂಬಂಧವನ್ನು ಬೆಳೆಸಿದ ಮೊದಲ ದೇಶಗಳಲ್ಲಿ ಭಾರತವೂ ಸಹ ಒಂದಾಗಿದೆ. ಇದನ್ನೂ ಓದಿ: ಪಕ್ಷ ಅಧಿಕಾರಕ್ಕೆ ಬಂದ್ರೆ 18 ವರ್ಷ ಮೇಲ್ಪಟ್ಟಯುವತಿಯರಿಗೆ ಪತ್ರಿ ತಿಂಗಳು 1 ಸಾವಿರ- ಕೇಜ್ರಿವಾಲ್