ರೋಮ್: ಕೋವಿಡ್ ಸಾಂಕ್ರಾಮಿಕ ವಿರುದ್ಧದ ಹೋರಾಟಕ್ಕೆ ವಿಶ್ವಕ್ಕೆ ಸಹಕಾರಿಯಾಗಲು ಭಾರತವು 2022ರ ಅಂತ್ಯಕ್ಕೆ 5 ಬಿಲಿಯನ್‍ನಷ್ಟು ಕೋವಿಡ್-19 ಲಸಿಕೆ ಡೋಸ್ ವಿತರಿಸಲಿದೆ ಎಂದು ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದರು.
ರೋಮ್‍ನಲ್ಲಿ ನಡೆದ ಜಿ-20 ಶೃಂಗಸಭೆ ಅಧಿವೇಶನದಲ್ಲಿ ಪ್ರಧಾನಿ ಮೋದಿ ಮಾತನಾಡಿದರು. ಅಲ್ಲದೇ ಕೋವಿಡ್ ಮಾರಣಾಂತಿಕ ಕಾಯಿಲೆ ಎದುರಿಸುವಲ್ಲಿ “ಒಂದು ಭೂಮಿ, ಒಂದು ಆರೋಗ್ಯ ವಿಧಾನ” ಸಹಕಾರಿ ಎಂದು ಒತ್ತಿ ಹೇಳಿದರು. ಇದನ್ನೂ ಓದಿ: ಮಣ್ಣಲ್ಲಿ ಮಣ್ಣಾದ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್
ನಮ್ಮ ನಾಗರಿಕರಿಗೆ ಮಾತ್ರವಲ್ಲ, ಪ್ರಪಂಚದ ಉಳಿದ ಭಾಗಗಳಿಗೆ ಲಸಿಕೆ ಲಭ್ಯವಿರುತ್ತದೆ. ಈ ಬಗ್ಗೆ ಯಾವುದೇ ಅನುಮಾನ ಬೇಡ. ಲಸಿಕೆ ವಿತರಣೆಯಲ್ಲಿನ ಅಸಮಾನತೆಯನ್ನು ಹೋಗಲಾಡಿಸಲು ಭಾರತ ನೀಡುವ ಕೊಡುಗೆಯಾಗಿದೆ ಎಂದರು.
150ಕ್ಕೂ ಹೆಚ್ಚು ದೇಶಗಳಿಗೆ ಭಾರತದ ವೈದ್ಯಕೀಯ ಪೂರೈಕೆ ಮತ್ತು ಸಾಂಕ್ರಾಮಿಕ ವಿರುದ್ಧದ ಹೋರಾಟದ ಸಮಯದಲ್ಲಿ ಜಾಗತಿಕ ಪೂರೈಕೆ ಸರಪಳಿಯನ್ನು ಕಾಪಾಡಿಕೊಳ್ಳುವಲ್ಲಿ ಭಾರತದ ಕೊಡುಗೆ ಬಗ್ಗೆ ಇದೇ ವೇಳೆ ಪ್ರಧಾನಿ ಮಾತನಾಡಿದರು. ಇದನ್ನೂ ಓದಿ: ಅಪ್ಪು ಹಣೆಗೆ ಮುತ್ತಿಟ್ಟು ಕಣ್ಣೀರಿಟ್ಟ ಸಿಎಂ ಬೊಮ್ಮಾಯಿ
ಭಾರತದ ಆರ್ಥಿಕ ಸುಧಾರಣೆಗಳ ಕುರಿತು ಮಾತನಾಡಿದ ಮೋದಿ ಅವರು, ಆರ್ಥಿಕ ಚೇತರಿಕೆ ಮತ್ತು ಪೂರೈಕೆ ಬಾಂಧವ್ಯದ ವೈವಿಧ್ಯೀಕರಣದಲ್ಲಿ ಭಾರತದೊಂದಿಗೆ ಪಾಲುದಾರರಾಗಲು ಜಿ20 ರಾಷ್ಟ್ರಗಳನ್ನು ಆಹ್ವಾನಿಸಿದರು.
ಕೋವಿಡ್ ಸಾಂಕ್ರಾಮಿಕ ವಿರುದ್ಧ ಹೋರಾಡಲು ಹಾಗೂ ಭವಿಷ್ಯದ ಜಾಗತಿಕ ಆರೋಗ್ಯ ಸಮಸ್ಯೆಗಳ ಬಗ್ಗೆ ಎಚ್ಚರವಹಿಸಲು “ಒಂದು ಭೂಮಿ, ಒಂದು ಆರೋಗ್ಯ” ಎಂಬ ದೃಷ್ಟಿಕೋನವನ್ನು ಪ್ರತಿಪಾದಿಸಿದರು.