ನವದೆಹಲಿ: ನಟಿ ರಶ್ಮಿಕಾ ಮಂದಣ್ಣ (Rashmika Mandanna) ಅವರ ನಂತ್ರ ಬಾಲಿವುಡ್ ನಟಿಯರ ಡೀಪ್ಫೇಕ್ ವೀಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರನ್ನೂ ವೀಡಿಯೋವೊಂದರಲ್ಲಿ ಡೀಫ್ ಫೇಕ್ ಮಾಡಲಾಗಿದ್ದು, ಈ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ದೆಹಲಿಯಲ್ಲಿರುವ ಬಿಜೆಪಿ ಪ್ರಧಾನ ಕಚೇರಿಯಲ್ಲಿ ದೀಪಾವಳಿ ಮಿಲನ್ ಕಾರ್ಯಕ್ರಮದಲ್ಲಿ (Diwali Milan Programme) ಪತ್ರಕರ್ತರನ್ನುದ್ದೇಶಿಸಿ ಅವರು ಮಾತನಾಡಿದರು. ಪ್ರಸ್ತುತ ನಮ್ಮ ಭಾರತೀಯ ವ್ಯವಸ್ಥೆಯು ಎದುರಿಸುತ್ತಿರುವ ದೊಡ್ಡ ಬೆದರಿಕೆಗಳಲ್ಲಿ ಡೀಪ್ಫೇಕ್ (Deepfakes Video) ಕೂಡ ಒಂದಾಗಿದೆ. ಇದು ಸಮಾಜದಲ್ಲಿ ಅವ್ಯವಸ್ಥೆಯನ್ನುಂಟುಮಾಡಬಹುದು. ಆದ್ದರಿಂದ ಹೆಚ್ಚುತ್ತಿರುವ ಸಮಸ್ಯೆಗಳ ಬಗ್ಗೆ ಜನರಿಗೆ ತಿಳಿಸಿ ಅವರನ್ನು ಶಿಕ್ಷಿತರನ್ನಾಗಿ ಮಾಡಬೇಕು ಎಂದು ಕರೆ ನೀಡಿದ್ದಾರೆ.
Advertisement
Advertisement
ಡೀಪ್ಫೇಕ್ಗಳಿಗಾಗಿ ಕೃತಕ ಬುದ್ಧಿಮತ್ತೆಯನ್ನು (Artifical Intelligence) ದುರುಪಯೋಗಪಡಿಸಿಕೊಳ್ಳುವಾಗ ನಾಗರಿಕರು ಮತ್ತು ಮಾಧ್ಯಮಗಳು ಬಹಳ ಜಾಗರೂಕರಾಗಿರಬೇಕು. ಪ್ರಜಾಪ್ರಭುತ್ವದ ಸಮಗ್ರತೆಗೆ ಡೀಪ್ಫೇಕ್ಗಳು ಹೇಗೆ ಗಣನೀಯ ಸವಾಲುಗಳನ್ನು ಒಡ್ಡುತ್ತಿವೆ? ನಕಲಿ ಮತ್ತು ನೈಜ ಕ್ಲಿಪ್ಗಳ ನಡುವೆ ವ್ಯತ್ಯಾಸ ಕಂಡುಹಿಡಿಯುವುದು ಕಷ್ಟಕರವಾಗಿದೆ. ಇದು ಇತ್ತೀಚೆಗೆ ರಾಜಕಾರಣಿಗಳನ್ನೂ ಗುರಿ ಮಾಡಲಾಗುತ್ತಿದೆ, ಕೃತಕ ವಾಯ್ಸ್ಓವರ್, ನಕಲಿ ವೀಡಿಯೋ ಕ್ಲಿಪ್ಗಳನ್ನು ಬಳಸಿ ರಾಜಕಾರಣಿಗಳನ್ನ ಗುರಿಯಾಗಿಸಲಾಗುತ್ತಿದೆ. ಇಂತಹ ಎಲ್ಲ ಸಮಸ್ಯೆಗಳ ಬಗ್ಗೆ ಅರಿತುಕೊಂಡು ಸಾರ್ವಜನಿಕರು ಎಚ್ಚರದಿಂದಿರಬೇಕು ಎಂದು ಕಿವಿಮಾತು ಹೇಳಿದ್ದಾರೆ.
Advertisement
Advertisement
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಗರ್ಬಾ ನೃತ್ಯ ಮಾಡುತ್ತಿರುವ ಡೀಪ್ ಫೇಕ್ ವಿಡಿಯೋ ಉಲ್ಲೇಖಿಸಿ ಮಾತನಾಡಿದ್ದು, ತಾನು ಚಿಕ್ಕಂದಿನಿಂದಲೂ ಗರ್ಬಾ ನೃತ್ಯ ಮಾಡಿಲ್ಲ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕರಾಚಿಯಲ್ಲಿ ಬೀಡುಬಿಟ್ಟ ಚೀನಾದ ಜಲಾಂತರ್ಗಾಮಿ, ಯುದ್ಧನೌಕೆ – ಭಾರತಕ್ಕೆ ಇದರ ಸಂದೇಶವೇನು?
ವೈರಲ್ ವೀಡಿಯೋದಲ್ಲಿ ಪ್ರಧಾನಿಯನ್ನೇ ಹೋಲುವ ವ್ಯಕ್ತಿಯೊಬ್ಬರು ಕೆಲ ಮಹಿಳೆಯರೊಂದಿಗೆ ನೃತ್ಯ ಮಾಡುವುದು ಕಂಡುಬಂದಿತ್ತು. ಆದ್ರೆ ಮಾಧ್ಯಮ ಸಂಸ್ಥೆಯೊಂದು ಅದನ್ನು ಫ್ಯಾಕ್ಟ್ಚೆಕ್ಗೆ ಒಳಪಡಿಸಿದಾಗ ವೀಡಿಯೋದಲ್ಲಿದ್ದ ವ್ಯಕ್ತಿ ಪ್ರಧಾನಿಯಲ್ಲ, ವಿಕಾಸ್ ಮಹಂತೆ ಎನ್ನುವ ನಟ ಎಂದು ತಿಳಿದುಬಂದಿತ್ತು.
ಇತ್ತೀಚೆಗೆ ಡೀಪ್ ಫೇಕ್ ವೀಡಿಯೋಗಳು ಹೆಚ್ಚಾಗುತ್ತಿದ್ದು, ಸಹಜವಾಗಿಯೇ ನಟಿಯರಿಗೆ ಆತಂಕ ಹೆಚ್ಚಿಸಿದೆ. ಇಂತಹ ವಿಡಿಯೋಗಳನ್ನು ಮಾಡುವವರ ವಿರುದ್ಧ ಆದಷ್ಟು ಬೇಗ ಕಠಿಣ ಕ್ರಮಕ್ಕೆ ಮುಂದಾಗಿ ಎನ್ನುವ ಮಾತುಗಳು ಕೇಳಿ ಬರುತ್ತಿವೆ. ನಟಿ ರಶ್ಮಿಕಾ ಮಂದಣ್ಣ ಅವರ ಬಳಿಕ ಕಾಜೋಲ್, ಕತ್ರಿನಾ ಕೈಫ್ ಅವರ ಡೀಪ್ಫೇಕ್ ವೀಡಿಯೋಗಳೂ ಜಾಲತಾಣದಲ್ಲಿ ಸದ್ದು ಮಾಡುತ್ತಿವೆ. ಇದನ್ನೂ ಓದಿ: ಗಾಜಾದ ಅಲ್ ಶಿಫಾ ಆಸ್ಪತ್ರೆಯೇ ಹಮಾಸ್ ಅಡ್ಡ; ಶಸ್ತ್ರಾಸ್ತ್ರ ಪತ್ತೆ – ಉಗ್ರರ ಅಡಗುದಾಣಗಳ ಮೇಲೆ ಬುಲ್ಡೋಜರ್