– ಮಂದಿರ ವಿಳಂಬಕ್ಕೆ ಶ್ರೀರಾಮನಿಗೆ ಕ್ಷಮೆ ಕೋರಿದ ಪ್ರಧಾನಿ
ಅಯೋಧ್ಯೆ (ಉತ್ತರಪ್ರದೇಶ): ಇಡೀ ದೇಶ ಈಗ ಗುಲಾಮಗಿರಿಯಿಂದ ಮುಕ್ತವಾಗಿದೆ. ಸಾವಿರಾರು ವರ್ಷಗಳ ನಂತರವೂ ಈ ದಿನವನ್ನು ಮತ್ತು ಈ ಕ್ಷಣವನ್ನು ಜನರು ನೆನಪಿಸಿಕೊಳ್ಳುತ್ತಾರೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ತಿಳಿಸಿದ್ದಾರೆ.
ಅಯೋಧ್ಯೆಯ ರಾಮಮಂದಿರದಲ್ಲಿ (Ayodhya Ram Mandir) ಬಾಲರಾಮನ ಪ್ರಾಣಪ್ರತಿಷ್ಠೆ ನೆರವೇರಿಸಿದ ಬಳಿಕ ಬೃಹತ್ ವೇದಿಕೆ ಕಾರ್ಯಕ್ರಮವನ್ನುದ್ದೇಶಿಸಿ ಅವರು ಮಾತನಾಡಿದ್ದಾರೆ. ಇದನ್ನೂ ಓದಿ: ದೇಗುಲ ಪ್ರವೇಶಿಸಲು ಅನುಮತಿ ನಿರಾಕರಣೆ – ನಾನೇನು ಅಪರಾಧ ಮಾಡಿದ್ದೇನೆ: ರಾಗಾ ಪ್ರಶ್ನೆ
Advertisement
Advertisement
ಶತಮಾನಗಳ ಕಾಯುವಿಕೆಯ ನಂತರ ಭವಾನ್ ಶ್ರೀರಾಮ (Sri Ram) ತನ್ನ ಮೂಲ ನಿವಾಸಕ್ಕೆ ಬಂದಿದ್ದಾನೆ. ಅಭೂತಪೂರ್ವ ತಾಳ್ಮೆ, ಲೆಕ್ಕವಿಲ್ಲದಷ್ಟು ತ್ಯಾಗ, ತಪಸ್ಸುಗಳ ನಂತರ ನಮ್ಮ ಪ್ರಭುರಾಮ ಬಂದಿದ್ದಾನೆ. ಇನ್ಮುಂದೆ ನಮ್ಮ ರಾಮ ಟೆಂಟ್‌ನಲ್ಲಿ ಉಳಿಯುವುದಿಲ್ಲ ಭವ್ಯವಾದ ದೇವಾಲಯದಲ್ಲಿ ಉಳಿಯುತ್ತಾರೆ. ಜನವರಿ 22ರ ದಿನ ಕೇವಲ ದಿನಾಂಕವಲ್ಲ, ಹೊಸ ಯುಗದ ಆರಂಭ. ಈ ರಾಮಮಂದಿರ ನಿರ್ಮಾಣವು ಜನರಲ್ಲಿ ಹೊಸ ಶಕ್ತಿ ತರಲಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಕೊನೆಗೂ ನಮ್ಮ ರಾಮ ಬಂದಿದ್ದಾನೆ, ಇಂದಿನಿಂದ ಹೊಸ ಯುಗ ಉದಯವಾಗಿದೆ: ನರೇಂದ್ರ ಮೋದಿ
Advertisement
Advertisement
ದೇಶವು ಈಗ ಗುಲಾಮಗಿರಿಯಿಂದ ಮುಕ್ತವಾಗಿದ್ದು, ಸಾವಿರಾರು ವರ್ಷಗಳ ನಂತರವೂ ಈ ದಿನ ಮತ್ತು ಈ ಕ್ಷಣವನ್ನು ದೇಶದ ಜನ ನೆನಪಿಸಿಕೊಳ್ಳುತ್ತಾರೆ. ಏಕೆಂದರೆ ಭಗವಾನ್ ಶ್ರೀರಾಮ ಎಲ್ಲ ಭಾರತೀಯರ ಅಂತರಂಗದಲ್ಲಿ ನೆಲೆಸಿದ್ದಾರೆ. ಈ ಕ್ಷಣಕ್ಕಾಗಿ ಇಡೀ ದೇಶವೇ ಇಂದು ದೀಪಾವಳಿ ಆಚರಿಸಲಿದೆ ಎಂದು ಶ್ಲಾಘಿಸಿದ್ದಾರೆ.
ಶ್ರೀರಾಮನಿಗೆ ಕ್ಷಮೆ ಕೋರಿದ ಮೋದಿ:
ರಾಮಮಂದಿರ ವಿಳಂಬಕ್ಕಾಗಿ ನಾನು ಭಗವಾನ್ ಶ್ರೀರಾಮನಿಗೆ ಕ್ಷಮೆಯಾಚಿಸುತ್ತೇನೆ. ಇಂದು ಈ ಆತಂಕ ದೂರವಾಗಿದೆ. ಇದರಿಂದ ಭಗವಾನ್ ರಾಮ ನಮ್ಮನ್ನು ಕ್ಷಮಿಸುತ್ತಾನೆ ಎಂಬ ನಂಬಿಕೆ ನನಗಿದೆ ಎಂದು ತಿಳಿಸಿದರು. ಇದೇ ವೇಳೆ ಐತಿಹಾಸಿಕ ತೀರ್ಪು ನೀಡುವ ಮೂಲಕ ರಾಮಮಂದಿರ ನಿರ್ಮಾಣಕ್ಕೆ ದಾರಿ ಮಾಡಿಕೊಟ್ಟ ಸುಪ್ರೀಂ ಕೋರ್ಟ್‌ಗೂ ಧನ್ಯವಾದ ಅರ್ಪಿಸುತ್ತೇನೆ ಎಂದಿದ್ದಾರೆ.
ಪ್ರಾಣಪ್ರತಿಷ್ಠೆ ಸಂಪನ್ನ:
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಮಧ್ಯಾಹ್ನ 12 ಗಂಟೆ 30 ನಿಮಿಷ 32 ಸೆಕೆಂಡ್‌ಗಳ ಮಧ್ಯೆ ಅಭಿಜಿತ್ ಮುಹೂರ್ತದಲ್ಲಿ (ಅಭಿಜಿತ್ʼ ಅಂದ್ರೆ ʼವಿಜಯಶಾಲಿʼ ಎಂದರ್ಥ) ಶಾಸ್ತ್ರೋಕ್ತವಾಗಿ ರಾಮಲಲ್ಲಾನ ಪ್ರಾಣ ಪ್ರತಿಷ್ಠಾಪನೆ ನೆರವೇರಿಸಲಾಯಿತು. ಅರ್ಚಕರು, ಪಂಡಿತರು ಹಾಗೂ ಯಜಮಾನ ಸ್ಥಾನದಲ್ಲಿದ್ದ ಪ್ರಧಾನಿ ಮೋದಿ ಅವರ ನೇತೃತ್ವದಲ್ಲಿ ಪ್ರಾಣಪ್ರತಿಷ್ಠೆ ನೆರವೇರಿತು. ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್, ಸಿಎಂ ಯೋಗಿ ಆದಿತ್ಯನಾಥ್, ಗುಜರಾತ್ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಮೊದಲಾದವರು ಉಪಸ್ಥಿತರಿದ್ದರು. ದೇವಾಲಯ ಆವರಣದಲ್ಲಿ ಸರಿಸುಮಾರು 8 ಸಾವಿರ ಅತಿಥಿಗಳು ನೆರೆದಿದ್ದರು. ಇದನ್ನೂ ಓದಿ: ಮಂದಸ್ಮಿತ, ಮುಗ್ಧಮುಖದ ಬಾಲರಾಮನ ಕಣ್ತುಂಬಿಕೊಂಡು ಪುನೀತರಾದ ರಾಮಭಕ್ತರು