– ನಾನು ಎಂದಿಗೂ ಹಿಂದೂ-ಮುಸ್ಲಿಂ ಅಂತ ಪ್ರತ್ಯೇಕಿಸಲ್ಲ: ಶಪಥ
– ಸಬ್ಕಾ ಸಾಥ್, ಸಬ್ಕಾ ವಿಕಾಸ್ ಅನ್ನು ನಂಬುತ್ತೇನೆ ಎಂದ ಪ್ರಧಾನಿ
ನವದೆಹಲಿ: 2002ರ ಗೋಧ್ರಾ ಗಲಭೆ (Godhra Riots 2002) ನಂತರ ವಿರೋಧಿಗಳು ಮುಸ್ಲಿಮರಲ್ಲಿ ನನ್ನ ವ್ಯಕ್ತಿತ್ವಕ್ಕೆ ಕಳಂಕ ತಂದಿದ್ದಾರೆ ಎಂದು ಪ್ರಧಾನಿ ಮೋದಿ (PM Modi) ಅಸಮಾಧಾನ ಹೊರಹಾಕಿದ್ದಾರೆ.
ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅವರು, 2002ರಲ್ಲಿ ಗೋಧ್ರಾ ಹತ್ಯಾಕಾಂಡದ ಬಳಿಕ, ವಿರೋಧಿಗಳು ಮುಸ್ಲಿಮರಲ್ಲಿ (Muslims) ನನ್ನ ವ್ಯಕ್ತಿತ್ವಕ್ಕೆ ಕಳಂಕ ತಂದಿದ್ದಾರೆ ಎಂದು ಕಿಡಿ ಕಾರಿದ್ದಾರೆ. ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಕೇಸ್: ಜಾರ್ಖಂಡ್‌ನ ಕಾಂಗ್ರೆಸ್ ಸಚಿವ ಅಲಂಗೀರ್ ಆಲಂ ಬಂಧನ!
ಮುಸ್ಲಿಮರು ನಮಗೆ ಎಷ್ಟು ಬೆಂಬಲ ಕೊಡುತ್ತಾರೆ ಎಂಬುದನ್ನು ಲೆಕ್ಕಿಸದೇ ಅವರ ಪರ ಕೆಲ ಮಾಡುತ್ತಿದ್ದೇನೆ. ನಮ್ಮ ಮನೆಯ ಸುತ್ತ ಎಲ್ಲಾ ಮುಸ್ಲಿಂ ಕುಟುಂಬಗಳೇ (Muslim Families) ಇವೆ. ನಮ್ಮ ಮನೆಯಲ್ಲಿ ಈದ್ ಜೊತೆಗೆ ಬೇರೆ ಬೇರೆ ಹಬ್ಬಗಳ ಆಚರಿಸುತ್ತಿದ್ದೆವು. ಈದ್ ಆಚರಿಸುವಾಗ ನಮ್ಮ ಮನೆಯಲ್ಲಿ ಅಡುಗೆಯೇ ಮಾಡುತ್ತಿರಲಿಲ್ಲ. ಸುತ್ತಮುತ್ತಲಿನ ಮುಸ್ಲಿಂ ಕುಟುಂಬಗಳಿಂದಲೇ ಊಟ ಬರುತ್ತಿತ್ತು. ಆ ಪ್ರಪಂಚದಲ್ಲೂ ನಾನು ಬೆಳೆದಿದ್ದೇನೆ. ಇಂದಿಗೂ ಮೊಹರಂ ಸಂದರ್ಭದಲ್ಲಿ ಕೆಲ ಮುಸ್ಲಿಂ ಸ್ನೇಹಿತರು ಮನೆಗೆ ಊಟ ತಂದುಕೊಡುತ್ತಾರೆ. ಆದ್ರೆ 2002ರಲ್ಲಿ ನಡೆದ ಗೋಧ್ರಾ ಹತ್ಯಾಕಾಂಡದ ಬಳಿಕ ಮುಸ್ಲಿಮರಲ್ಲಿ ನನ್ನ ವ್ಯಕ್ತಿತ್ವಕ್ಕೆ ಕಳಂಕ ತರಲಾಗಿದೆ ಎಂದು ಬೇಸರ ಹೊರಹಾಕಿದ್ದಾರೆ.
ಮುಂದುವರಿದು ಮಾತನಾಡಿದ ಅವರು, ನಾನು ಯಾವತ್ತಿಗೂ ಹಿಂದೂ-ಮುಸ್ಲಿಮರು ಅಂತ ಪ್ರತ್ಯೇಕಿಸುವುದಿಲ್ಲ. ನಾನು ಹಿಂದೂ-ಮುಸ್ಲಿಮರನ್ನು ಪ್ರತ್ಯೇಕಿಸುವ ದಿನ ಸಾರ್ವಜನಿಕ ಜೀವನದಲ್ಲಿ ಇರಲು ಅರ್ಹನಾಗುವುದಿಲ್ಲ. ಎಂದಿಗೂ ನಾನು ಹಿಂದೂ-ಮುಸ್ಲಿಂ ಅಂತ ಪ್ರತ್ಯೇಕಿಸಲ್ಲ, ಇದು ನನ್ನ ಪ್ರತಿಜ್ಞೆ ಎಂದು ಮೋದಿ ನುಡಿದಿದ್ದಾರೆ. ಇದನ್ನೂ ಓದಿ: ಮೋದಿ ಬೀಳ್ಕೊಡುಗೆಗೆ ದೇಶದ ಜನರು ಸಿದ್ಧವಾಗಿದ್ದಾರೆ: ಮಲ್ಲಿಕಾರ್ಜುನ ಖರ್ಗೆ
ಇದೇ ವೇಳೆ ಕೆಲ ದಿನಗಳ ಹಿಂದೆ ರಾಜಸ್ಥಾನದ ಬನ್ಸ್ವಾರಾದಲ್ಲಿ ಚುನಾವಣಾ ಸಮಾವೇಶವನ್ನುದ್ದೇಶಿಸಿ ಮಾತನಾಡುವ ವೇಳೆ, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ ಸಂಪತ್ತನ್ನು ಒಳನುಗ್ಗುವವರು ಮತ್ತು ಹೆಚ್ಚು ಮಕ್ಕಳನ್ನು ಹೊಂದಿರುವವರಿಗೆ ಹಂಚಬಹುದು ಎಂದಿದ್ದ ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ. ನಾನು ಇದನ್ನು ಮುಸ್ಲಿಮರಿಗೆ ಹೇಳಿದ್ದಲ್ಲ. ನಾನು ಯಾವುದೇ ಕಾರಣಕ್ಕೂ ವೋಟ್ ಬ್ಯಾಂಕ್‌ಗಾಗಿ ಕೆಲಸ ಮಾಡುವುದಿಲ್ಲ. ಸಬ್ಕಾ ಸಾಥ್, ಸಬ್ಕಾ ವಿಕಾಸ್ ಅನ್ನು ನಂಬುತ್ತೇನೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಹೆಚ್ಚು ಮಕ್ಕಳನ್ನು ಹೊಂದಿರುವವರು ಎಂದು ಮಾತನಾಡಿದ್ದೇನೆ, ಆದ್ರೆ ಮುಸ್ಲಿಮರು ಎಂದು ಯಾರು ಹೇಳಿದ್ದು? ಇಂದಿನ ಬಡ ಕುಟುಂಬಗಳಲ್ಲಿಯೂ ಇದೇ ಪರಿಸ್ಥಿತಿ ಇದೆ. ಬಡತನ ಇರುವ ಕುಟುಂಬಗಳಲ್ಲೇ ಹೆಚ್ಚು ಮಕ್ಕಳಿರುತ್ತಾರೆ. ಆದ್ರೆ ನಾನು ಈ ಹೇಳಿಕೆ ನೀಡುವಾಗ ಹಿಂದೂ ಅಥವಾ ಮುಸ್ಲಿಂ ಎಂದು ಹೇಳಿಲ್ಲ. ಎಷ್ಟು ಮಕ್ಕಳನ್ನು ಸಾಕಲು ಸಾಧ್ಯವೋ ಅಷ್ಟು ಮಕ್ಕಳನ್ನು ಹೊಂದಬೇಕು. ಏಕೆಂದರೇ ಸರ್ಕಾರವೇ ನಿಮ್ಮಕ್ಕಳನ್ನು ರಕ್ಷಣೆ ಮಾಡುವ ಪರಿಸ್ಥಿತಿ ಎಂದಿಗೂ ಬರದಿರಲಿ ಎಂದು ಸಲಹೆ ನೀಡಿದ್ದಾರೆ. ಇದನ್ನೂ ಓದಿ: 400 ಕ್ಕೂ ಅಧಿಕ ಸ್ಥಾನ ಬಂದ್ರೆ ಮಥುರಾ, ಕಾಶಿಯಲ್ಲಿ ಭವ್ಯ ಮಂದಿರ ನಿರ್ಮಾಣ: ಅಸ್ಸಾಂ ಸಿಎಂ
ಪ್ರಧಾನಿ ಅವರ ಹೇಳಿಕೆಗೆ ತಿರುಗೇಟು ನೀಡಿರುವ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ (Priyanka Gandhi), ಧರ್ಮದ ಹೆಸರಿನಲ್ಲಿ ಜನರನ್ನು ವಂಚಿಸಿ ಮತ್ತೆ ಅಧಿಕಾರಕ್ಕೆ ಬರಬಹುದು ಎಂದು ಬಿಜೆಪಿ ನಾಯಕರು ನಂಬಿದ್ದಾರೆ. ನರೇಂದ್ರ ಮೋದಿ ಅವರಿಂದ ಹಿಡಿದು ಬಿಜೆಪಿಯ ನಾಯಕರೆಲ್ಲರೂ, ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ದೇಶದಲ್ಲಿ ಎರಡು ರೀತಿಯ ರಾಜಕಾರಣ ನಡೆಯುತ್ತಿದೆ. ಬಿಜೆಪಿಯ ರಾಜಕೀಯ ಜನರ ಭಾವನೆಗಳೊಂದಿಗೆ ಆಟವಾಡುತ್ತಿದೆ. ಧರ್ಮದ ಹೆಸರಿನಲ್ಲಿ ಮತಯಾಚಿಸುತ್ತಾರೆ. ಮತದಾರರ ಬಗ್ಗೆ ಯಾವುದೇ ಕಾಳಜಿಯಿಲ್ಲದೇ ಅಧಿಕಾರದಲ್ಲಿ ಉಳಿಯುತ್ತಾರೆ. ಮತ್ತೊಂದೆಡೆ ಕಾಂಗ್ರೆಸ್ ನಿಜವಾದ ರಾಜಕಾರಣ ಮಾಡುತ್ತಿದ್ದು, ಜನರಿಗಾಗಿ ಕೆಲಸ ಮಾಡಲು ಸದಾ ಸಿದ್ಧವಿದೆ ಎಂದಿದ್ದಾರೆ.
ಮೋದಿ ನಮ್ಮನ್ನು ನಮ್ಮನ್ನು ಭ್ರಷ್ಟರೆಂದು ಕರೆಯುತ್ತಾರೆ. ಆದ್ರೆ ಅಧಿಕಾರದಲ್ಲಿದ್ದ 55 ವರ್ಷಗಳಲ್ಲಿ ಕಾಂಗ್ರೆಸ್‌ಗೆ ಶ್ರೀಮಂತ ಪಕ್ಷವಾಗಲು ಸಾಧ್ಯವಾಗಲಿಲ್ಲ. ಆದ್ರೆ ಬಿಜೆಪಿ 10 ವರ್ಷಗಳಲ್ಲೇ ವಿಶ್ವದ ಅತಿ ಶ್ರೀಮಂತ ಪಕ್ಷವಾಗಿದೆ ಎಂದು ಕುಟುಕಿದ್ದಾರೆ. ಇದನ್ನೂ ಓದಿ: 6 ವರ್ಷ ಮೋದಿಯನ್ನು ಚುನಾವಣೆಯಿಂದ ನಿರ್ಬಂಧಿಸುವಂತೆ ಕೋರಿದ್ದ ಅರ್ಜಿ ವಜಾಗೊಳಿಸಿದ ಸುಪ್ರೀಂ