ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಶನಿವಾರ (ಏ.29) ಬೆಂಗಳೂರಿನಲ್ಲಿ ರೋಡ್‌ಶೋ (Modi Roadshow) ನಡೆಸಲಿರುವ ಹಿನ್ನೆಲೆಯಲ್ಲಿ ಮದುವೆಗೆ ತೆರಳಲು ಮದುಮಗನಿಗೆ ಅನುಮತಿಯೇ ಇಲ್ಲದಂತಾಗಿತ್ತು.
ಕರ್ನಾಟಕ ಚುನಾವಣೆ ಹಿನ್ನೆಲೆಯಲ್ಲಿ ಅದ್ಧೂರಿ ಪ್ರಚಾರಕ್ಕಾಗಿ ಬೆಂಗಳೂರಿಗೆ ಭೇಟಿ ನೀಡುತ್ತಿರುವ ಮೋದಿ ಹೆಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಬಂದಿಳಿಯಲಿದ್ದಾರೆ. ನಂತರ ಬಿಐಇಸಿ ನಿಂದ ನೈಸ್ ರಸ್ತೆ ಮೂಲಕ ಮಾಗಡಿ ರಸ್ತೆವರೆಗೆ ರೋಡ್ ಶೋ ನಡೆಲಿದ್ದಾರೆ. ಆದ್ರೆ ಮಾಗಡಿ ರೋಡ್ ನಲ್ಲಿರೋ ಅಕ್ಷಯ್ ಕಲ್ಯಾಣ ಮಂಟಪದಲ್ಲಿ ಏಪ್ರಿಲ್ 29, 30 ರಂದು ಮದುವೆ ನಿಗದಿಯಾಗಿದ್ದು, ಮದುವೆಗೆ ತೆರಳಲು ಮಧುಮಗನಿಗೆ ಅನುಮತಿ ನಿರಾಕರಿಸಲಾಗಿತ್ತು. ಇದನ್ನೂ ಓದಿ: ಪರಮೇಶ್ವರ್ ಮೇಲೆ ಕಲ್ಲು ತೂರಾಟ ಖಂಡನೀಯ: ಯಡಿಯೂರಪ್ಪ ಕಿಡಿ
ವಧು ಮಮತಾ ಹಾಗೂ ವರ ರುದ್ರೇಶ್ ನಡುವೆ ಮದುವೆ ನಿಶ್ಚಯವಾಗಿತ್ತು. ಮಧುಮಗ ಕಲ್ಯಾಣ ಮಂಟಪಕ್ಕೆ ತೆರಳಲು ಕಾರಿನಲ್ಲಿ ಕಳಶದೊಂದಿಗೆ ಬಂದಿದ್ದ. ಈ ವೇಳೆ ಪೊಲೀಸರು ಕಾರನ್ನು ತಡೆದು ನಿಲ್ಲಿಸಿದ್ದರು. ಕೊನೆಗೆ ಇವತ್ತು ನನ್ನ ಮದುವೆಯಿದೆ, ನಾನು ಹೋಗಲೇಬೇಕು ಬಿಡಿ ಎಂದು ವರ ಕೇಳಿಕೊಂಡಿದ್ದಾನೆ. ನಂತರ ಪೊಲೀಸರು ಮಧುಮಗ ಮತ್ತು ಅವನ ಕುಟುಂಬಸ್ಥರನ್ನು ಕಳುಹಿಸಿಕೊಟ್ಟಿದ್ದಾರೆ. ಇದನ್ನೂ ಓದಿ: ಸೋನಿಯಾ, ರಾಹುಲ್ ಗಾಂಧಿ ಹೇಳಿಕೊಟ್ಟಂತೆ ಖರ್ಗೆ ಮಾತಾಡಿದ್ದಾರೆ: ಜೆ.ಪಿ ನಡ್ಡಾ