ನವದೆಹಲಿ: ದುರುಪಯೋಗದ ಹಣ ವಶಪಡಿಸಿಕೊಳ್ಳಬಾರದು ಎಂದರೆ ಹೇಗೆ? ಹಣ ಕದಿಯುವುದರಲ್ಲಿ ಯಾರ ಪಾಲು ಇದೆಯೋ ಅವರು ಸಿಕ್ಕಿಬೀಳುತ್ತಾರೆ ಎಂದು ವಿಪಕ್ಷಗಳಿಗೆ ಪ್ರಧಾನಿ ನರೇಂದ್ರ ಮೋದಿ (Narendra Modi) ಟಾಂಗ್ ಕೊಟ್ಟಿದ್ದಾರೆ.
ವಿಪಕ್ಷ ನಾಯಕರ ಹತ್ತಿಕ್ಕಲು ಇ.ಡಿ, ಸಿಬಿಐ ಮತ್ತು ಐಟಿ ಬಳಕೆ ಆರೋಪ ಕುರಿತು ಮಾತನಾಡಿ, ವಿರೋಧ ಪಕ್ಷಗಳು ಇಂತಹ ಕಸವನ್ನು ಎಸೆಯುವ ಪ್ರಯತ್ನ ಮಾಡುತ್ತಿದ್ದಾರೆ. ಈ ಕಸ ಎಸೆಯುವ ವ್ಯಕ್ತಿಯನ್ನು ಕೇಳಿ, ನೀವು ಹೇಳುತ್ತಿರುವುದಕ್ಕೆ ಪುರಾವೆ ಏನು? ನಾನು ಇಂತಹ ಕಸವನ್ನು ಗೊಬ್ಬರವಾಗಿ ಪರಿವರ್ತಿಸುತ್ತೇನೆ. ಅದರಿಂದ ದೇಶಕ್ಕೆ ಒಂದಿಷ್ಟು ಒಳ್ಳೆಯದನ್ನು ಉತ್ಪಾದಿಸುತ್ತೇನೆ. ಮನಮೋಹನ್ ಸಿಂಗ್ 10 ವರ್ಷ ಅಧಿಕಾರದಲ್ಲಿದ್ದಾಗ 34 ಲಕ್ಷ ರೂ.ಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಪ್ರಸ್ತುತ ಕಳೆದ 10 ವರ್ಷಗಳಲ್ಲಿ ಇ.ಡಿ 2,200 ಕೋಟಿ ರೂ.ಗಳನ್ನು ವಶಪಡಿಸಿಕೊಂಡಿದೆ. ದುರುಪಯೋಗ ಹಣ ವಶ ಪಡಿಸಿಕೊಳ್ಳಬಾರದು ಎಂದರೆ ಹೇಗೆ? ಹಣ ಕದಿಯುವುದರಲ್ಲಿ ಯಾರ ಪಾಲು ಇದೆಯೋ ಅವರು ಸಿಕ್ಕಿಬಿಳುತ್ತಾರೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಅದಾನಿ ಗ್ರೂಪ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡದಂತೆ ಮೋದಿ, ರಾಹುಲ್‌ಗೆ ನಿರ್ದೇಶಿಸಿ: ಕೋರ್ಟ್‌ಗೆ ಅರ್ಜಿ ಸಲ್ಲಿಕೆ
Advertisement
Advertisement
ಎಸ್ಸಿ-ಎಸ್ಟಿ ಓಬಿಸಿಯನ್ನು ಕತ್ತಲೆಯಲ್ಲಿ ಇಟ್ಟು ಲೂಟಿ ಮಾಡುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ ಜಾಗೃತಿ ಮೂಡಿಸಬೇಕು. ಸಂವಿಧಾನದ ಮೂಲ ಭಾವನೆ ಮತ್ತು ಅದರ ಗೌರವವನ್ನು ವೋಟ್ ಬ್ಯಾಂಕ್ ರಾಜಕೀಯಕ್ಕೆ ದುರ್ಬಳಕೆ ಮಾಡಲಾಗುತ್ತಿದೆ. ರಾತ್ರೋರಾತ್ರಿ ಶಿಕ್ಷಣ ಸಂಸ್ಥೆಗಳನ್ನು ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳಾಗಿ ಮಾಡಿದರು. ಹಲವು ಯೂನಿವರ್ಸಿಟಿಗಳಿಗೆ ಅಲ್ಪಸಂಖ್ಯಾತ ಮಾನ್ಯತೆ ನೀಡಲಾಯಿತು. ಶಿಕ್ಷಣ ಮತ್ತು ಉದ್ಯೋಗದಲ್ಲಿ ಎಸ್ಟಿ-ಎಸ್ಟಿ ಓಬಿಸಿಗೆ ಮೀಸಲಾತಿ ಇಲ್ಲದಂತೆ ಮಾಡಲಾಯಿತು. ಹಿಂಬಾಗಿಲ ಮೂಲಕ ಮೀಸಲಾತಿ ಕಿತ್ತುಕೊಳ್ಳಲಾಯಿತು. ಈ ಬಾರಿಯ ಕಾಂಗ್ರೆಸ್ ಪ್ರಣಾಳಿಕೆ ನೋಡಿ ಆಶ್ಚರ್ಯಗೊಂಡೆ. ಅದಕ್ಕಾಗಿ ಇದು ಮುಸ್ಲಿಂ ಲೀಗ್ ಮುದ್ರೆ ಪ್ರಣಾಳಿಕೆ ಮೇಲಿದೆ ಎಂದು ಹೇಳಿದೆ ಎಂದಿದ್ದಾರೆ.
Advertisement
ಯಾರು ಜೈಲಿಗೆ ಹೋಗಬೇಕು ಎಂಬುದನ್ನು ಪ್ರಧಾನಿ ಮೋದಿಯೇ ನಿರ್ಧರಿಸುತ್ತಾರೆ ಎಂಬ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಆರೋಪಕ್ಕೆ ಪ್ರತಿಕ್ರಿಯಿಸಿ, ಈ ಜನರು ಸಂವಿಧಾನವನ್ನು ಓದಿದರೆ ಒಳ್ಳೆಯದು. ದೇಶದ ಕಾನೂನನ್ನು ಓದುವುದು ಒಳ್ಳೆಯದು. ನಾನು ಯಾರಿಗೂ ಏನೂ ಹೇಳುವ ಅಗತ್ಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ಮಾಜಿ ಮ್ಯಾನೇಜರ್ ಹತ್ಯೆ ಪ್ರಕರಣ – ಸ್ವಯಂ ಘೋಷಿತ ದೇವಮಾನವ ರಾಮ್ ರಹೀಮ್ ಸಿಂಗ್‌ಗೆ ರಿಲೀಫ್
Advertisement
ಕಾಶ್ಮೀರದಲ್ಲಿ ಹೆಚ್ಚಿನ ಮತದಾನದ ಕುರಿತು ಮಾತನಾಡಿ, ಮೊದಲು ನಮ್ಮ ದೇಶದ ನ್ಯಾಯ ವ್ಯವಸ್ಥೆಗೆ ನಾನು ಪ್ರಾರ್ಥಿಸಲು ಬಯಸುತ್ತೇನೆ. ಸರ್ಕಾರವು ಯಾವುದೇ ಕೆಲಸವನ್ನು ಮಾಡಲು ಬಯಸಿದರೆ, ಆ ಕೆಲಸವನ್ನು ಮಾಡಲು ಅವರು ವಿನ್ಯಾಸ, ತಂತ್ರವನ್ನು ಹೊಂದಿರುತ್ತಾರೆ. ಅಂತಹ ಸಮಸ್ಯೆಗಳನ್ನು ಪರಿಹರಿಸಲು ಕೆಲವೊಮ್ಮೆ ನಾನು ಇಂಟರ್ನೆಟ್ ಅನ್ನು ಸ್ಥಗಿತಗೊಳಿಸಬೇಕಿತ್ತು. ಆದರೆ ಇಂಟರ್ನೆಟ್ ಕಳೆದ 5 ವರ್ಷಗಳಿಂದ ಸ್ಥಗಿತಗೊಂಡಿಲ್ಲ. ಕಳೆದ 5 ವರ್ಷಗಳಿಂದ ನಾವು ಎಲ್ಲಾ ಸೌಲಭ್ಯಗಳನ್ನು ಪಡೆಯುತ್ತಿದ್ದೇವೆ ಎಂದು ಜನರು ಹೇಳುತ್ತಿದ್ದಾರೆ. ಕೆಲವು ದಿನಗಳಿಂದ ಕಾಲ ಅಲ್ಲಿ ಸ್ವಲ್ಪ ನೋವು ಇತ್ತು. ಆದರೆ ಇದು ಒಳ್ಳೆಯ ಉದ್ದೇಶಕ್ಕಾಗಿ ಮಾಡಿದ್ದು. ಸಾಮಾನ್ಯ ಜನರು ಅಲ್ಲಿ ಮತ ಚಲಾಯಿಸಿದಾಗ, ಅದು ಯಾರನ್ನಾದರೂ ಗೆಲ್ಲಿಸಲು ಅಲ್ಲ. ಮತದಾರ ಭಾರತದ ಸಂವಿಧಾನವನ್ನು ಒಪ್ಪಿಕೊಳ್ಳುತ್ತಾನೆ ಮತ್ತು ಇಡೀ ಭಾರತದ ಆತ್ಮದ ಕಡೆಗೆ ತನ್ನ ಸಮರ್ಪಣೆಯನ್ನು ವ್ಯಕ್ತಪಡಿಸುತ್ತಾನೆ. 40 ವರ್ಷಗಳ ಮತದಾನದ ದಾಖಲೆಗಳನ್ನು ಈ ಬಾರಿ ಮುರಿಯಲಾಗಿದೆ. ಇದು ನನಗೆ ಅತ್ಯಂತ ತೃಪ್ತಿ ತಂದಿದೆ. ಕಾಶ್ಮೀರದಿಂದ ನನ್ನ ಸಹೋದರ ಸಹೋದರಿಯರು ಹೆಚ್ಚಿನ ಉತ್ಸಾಹದಿಂದ ಮತ ಚಲಾಯಿಸಲು ಮುಂದಾಗಿದ್ದಾರೆ. ಮತದಾನದ ಮೂಲಕ ಅವರು ವಿಶ್ವಕ್ಕೆ ಮತ್ತು ಅನುಮಾನಗಳನ್ನು ಹೊಂದಿದ್ದವರಿಗೆ ಸಂದೇಶವನ್ನು ನೀಡಿದ್ದಾರೆ ಎಂದು ತಿಳಿಸಿದ್ದಾರೆ.
ಆರ್ಟಿಕಲ್ 370 ಕೇವಲ 4-5 ಕುಟುಂಬಗಳ ಅಜೆಂಡಾವಾಗಿತ್ತು. ಇದು ಕಾಶ್ಮೀರದ ಜನರ ಅಥವಾ ದೇಶದ ಜನರ ಅಜೆಂಡಾ ಆಗಿರಲಿಲ್ಲ. ಆರ್ಟಿಕಲ್ 370 ತೆಗೆದರೆ ಬೆಂಕಿ ಬೀಳಲಿದೆ ಎಂದು ಹೇಳುತ್ತಿದ್ದರು. ಇಂದು 370 ತೆಗೆದ ನಂತರ ಒಗ್ಗಟ್ಟಿನ ಭಾವನೆ ಕಾಶ್ಮೀರದ ಜನರಲ್ಲಿ ಹೆಚ್ಚುತ್ತಿದೆ. ಅದರ ನೇರ ಫಲಿತಾಂಶವು ಚುನಾವಣೆಗಳಲ್ಲಿಯೂ ಗೋಚರಿಸುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ಸ್ವಾತಿ ಮಲಿವಾಲ್ ದೌರ್ಜನ್ಯ ಪ್ರಕರಣ – ಬಿಭವ್ ಕುಮಾರ್ ಜಾಮೀನು ಅರ್ಜಿ ವಜಾ
ಟಿಎಂಸಿ ಪಕ್ಷವು ಬಂಗಾಳ ಚುನಾವಣೆಯಲ್ಲಿ ತನ್ನ ಅಸ್ತಿತ್ವಕ್ಕಾಗಿ ಹೋರಾಡುತ್ತಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಬಂಗಾಳದ ಜನರು ನಮ್ಮನ್ನು 80 ಸ್ಥಾನಗಳಿಗೆ ಕರೆದೊಯ್ದರು. ನಾವು ಭಾರಿ ಬಹುಮತವನ್ನು ಪಡೆದಿದ್ದೇವೆ. ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿಗೆ ಹೆಚ್ಚಿನ ಯಶಸ್ಸು ಸಿಗಲಿದೆ. ಜನರು ಅದನ್ನು ಮುನ್ನಡೆಸುತ್ತಿದ್ದಾರೆ. ಸರ್ಕಾರದಲ್ಲಿ ಕುಳಿತಿರುವ ಜನರು, ಟಿಎಂಸಿ ಜನರು ಹತಾಶರಾಗಿದ್ದಾರೆ. ಚುನಾವಣೆಗೆ ಮುನ್ನ ಬಿಜೆಪಿ ಕಾರ್ಯಕರ್ತರನ್ನು ಜೈಲಿಗೆ ಹಾಕಲಾಗುತ್ತಿದೆ. ಇಷ್ಟೆಲ್ಲಾ ದೌರ್ಜನ್ಯಗಳ ನಡುವೆಯೂ ಹೆಚ್ಚು ಜನರು ಮತ ಚಲಾಯಿಸುತ್ತಿದ್ದಾರೆ. ಮತ ಪ್ರಮಾಣ ಹೆಚ್ಚುತ್ತಿದೆ ಎಂದು ಮೋದಿ ತಿಳಿಸಿದ್ದಾರೆ.