ಥಿಂಪು: ಎರಡು ದಿನಗಳ ಭೇಟಿಗಾಗಿ ಭೂತಾನ್ (Bhutan) ತಲುಪಿದ ನರೇಂದ್ರ ಮೋದಿಯವರಿಗೆ (Narendra Modi) ಭವ್ಯ ಸ್ವಾಗತ ಕೋರಲಾಗಿದೆ. ಭೂತಾನ್ ಪ್ರಧಾನಿ ತ್ಶೆರಿಂಗ್ ಟೊಬ್ಗೇ ಅವರು ಮೋದಿಯವರನ್ನು ಆಲಿಂಗಿಸಿ ʼನನ್ನ ಹಿರಿಯ ಸಹೋದರ ನಿಮಗೆ ಸ್ವಾಗತʼ ಎಂದು ಹೇಳಿದ್ದಾರೆ.
ಈ ಹಿಂದೆ ಪ್ರಧಾನಿ ಮೋದಿಯವರ ಭೂತಾನ್ ಭೇಟಿ ಮಾರ್ಚ್ 21 ಹಾಗೂ 22 ರಂದು ನಡೆಯಬೇಕಿತ್ತು. ಆದರೆ ಪ್ರತಿಕೂಲ ಹವಾಮಾನದಿಂದಾಗಿ ಪ್ರಧಾನಿ ಮೋದಿಯವರ ಈ ಭೇಟಿಯನ್ನು ಮುಂದೂಡಲಾಯಿತು. ಬಳಿಕ ಭಾರತೀಯ ವಿದೇಶಾಂಗ ಸಚಿವಾಲಯವು ಭೂತಾನ್ ಸರ್ಕಾರದೊಂದಿಗೆ ಮಾತನಾಡಿದೆ ಮತ್ತು ಹೊಸ ದಿನಾಂಕಗಳನ್ನು ಘೋಷಿಸಲಾಗುವುದು ಎಂದು ಹೇಳಿದರು. ಅಂತೆಯೇ ಪರಸ್ಪರ ಒಪ್ಪಿಗೆಯ ನಂತರ ಪ್ರಧಾನಿ ಮೋದಿ ಇಂದು ಭೂತಾನ್‌ಗೆ ತೆರಳಿದ್ದಾರೆ.
Advertisement
I am grateful to the people of Bhutan, especially the young children, for the memorable welcome to their beautiful country. pic.twitter.com/R2JuC1CfYg
— Narendra Modi (@narendramodi) March 22, 2024
Advertisement
ಇಂದು ಭೂತಾನ್ ವಿಮಾನ ನಿಲ್ದಾಣದಲ್ಲಿ ಬಂದಿಳಿದ ನರೇಂದ್ರ ಮೋದಿಯವರಿಗೆ ಪ್ರಧಾನಿ ತ್ಶೆರಿಂಗ್ ತೊಬ್ಗೇ (Tshering Tobgay) ಅವರು ಭವ್ಯ ಸ್ವಾಗತ ಕೋರಿದರು. ಜೊತೆಗೆ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಮೋದಿ ಅವರಿಗೆ ಗೌರವ ರಕ್ಷೆ ನೀಡಲಾಯಿತು. ಒಟ್ಟಿನಲ್ಲಿ ರಾಜಧಾನಿ ಥಿಂಪುವಿನಲ್ಲಿ ಪ್ರಧಾನಿ ಮೋದಿಗೆ ಅದ್ಧೂರಿ ಸ್ವಾಗತ ದೊರೆಯಿತು. ರಸ್ತೆಬದಿಯಲ್ಲಿ ಜನ ನಿಂತು ಪ್ರಧಾನಿ ಮೋದಿಯವರನ್ನು ವಿಶೇಷವಾಗಿ ಸ್ವಾಗತಿಸಿದರು.
Advertisement
Advertisement
ಪ್ರಧಾನಿ ಮೋದಿಯವರ ಭೂತಾನ್ ಭೇಟಿಯಿಂದ ಸ್ಥಳೀಯರು ಸಂತಸಗೊಂಡಿದ್ದಾರೆ. ಪ್ರಧಾನಿ ಮೋದಿ ನಮ್ಮ ದೇಶಕ್ಕೆ ಬಂದಿದ್ದಾರೆ, ನಮಗೆ ತುಂಬಾ ಸಂತೋಷವಾಗಿದೆ ಎಂದು ಮಗುವೊಂದು ಹೇಳಿದೆ. ಇದನ್ನೂ ಓದಿ: ಕೋಟಾಗೆ ಚುನಾವಣಾ ಖರ್ಚಿಗೆ 25 ಸಾವಿರ ರೂ. ನೀಡಿದ ಚುರುಮುರಿ ವ್ಯಾಪಾರಿ
ಪ್ರಧಾನಿ ಮೋದಿಯವರು ಭೂತಾನ್‌ಗೆ ಆಗಮಿಸಿದ ನಂತರ, ಪ್ರಧಾನಿ ತ್ಶೆರಿಂಗ್ ತೊಬ್ಗೇ ಅವರು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಅನ್ನು ಹಂಚಿಕೊಂಡಿದ್ದಾರೆ, ಅದರಲ್ಲಿ ಅವರು ‘ನನ್ನ ಹಿರಿಯ ಸಹೋದರ, ಭೂತಾನ್‌ಗೆ ಸ್ವಾಗತ’ ಎಂದು ಬರೆದುಕೊಂಡಿದ್ದಾರೆ.