Connect with us

Latest

ಕಾರ್ನಾಡ್ ವಿಧಿವಶ – ಮೋದಿ, ಕೋವಿಂದ್ ಸೇರಿದಂತೆ ಗಣ್ಯರಿಂದ ಕಂಬನಿ

Published

on

ನವದೆಹಲಿ: ಇಂದು ವಿಧಿವಶರಾದ ಜ್ಞಾನಪೀಠ ಪುರಸ್ಕೃತ ಕನ್ನಡದ ಹೆಮ್ಮೆಯ ಸಾಹಿತಿ ಗಿರೀಶ್ ಕಾರ್ನಾಡ್ ಅವರನ್ನು ನೆನೆದು ಪ್ರಧಾನಿ ನರೇಂದ್ರ ಮೋದಿ, ರಾಷ್ಟ್ರಪತಿ ರಾಮನಾಥ್ ಕೋವಿಂದ್ ಹಾಗೂ ಇತರೇ ಗಣ್ಯರು ಸಂತಾಪ ಸೂಚಿಸಿದ್ದಾರೆ.

ಬಹು ಅಂಗಾಂಗ ವೈಫಲ್ಯದಿಂದ ಕಳೆದ 1 ತಿಂಗಳಿನಿಂದ ಬಳಲುತ್ತಿದ್ದ ಸಾಹಿತಿ ಬೆಂಗಳೂರಿನ ಲ್ಯಾವೆಲ್ಲಾ ರಸ್ತೆಯ ತಮ್ಮ ನಿವಾಸದಲ್ಲಿ ನಿಧನ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಧಾನಿ, ರಾಷ್ಟ್ರಪತಿ ಸೇರಿದಂತೆ ಚಿತ್ರರಂಗದ ಕಲಾವಿದರು, ರಾಜಕಾರಣಿಗಳು ಹಾಗೂ ಸಾಹಿತಿಗಳು ಸಂತಾಪ ಸೂಚಿಸಿದ್ದಾರೆ. ಅಲ್ಲದೆ ಒಳ್ಳೆಯ ವಿಚಾರಗಳಿಗೆ ಭಾವೋದ್ವೇಗದಿಂದ ಮಾತನಾಡುವುದು ಅವರಿಗೆ ಅಚ್ಚುಮೆಚ್ಚು. ಇಂತಹ ಅದ್ಭುತ ಸಾಹಿತಿ, ಕಲಾವಿದ ನಮ್ಮನ್ನು ಅಗಲಿರುವುದು ನನಗೆ ಬಹಳ ದುಃಖವಾಗಿದೆ ಎಂದು ಮೋದಿ ಟ್ವೀಟ್ ಮಾಡಿ ನೊಂದಿದ್ದಾರೆ. ಇದನ್ನೂ ಓದಿ:ಗಿರೀಶ್ ಕಾರ್ನಾಡ್ ಬರೆದ ಪತ್ರ ಬಹಿರಂಗ ಪಡಿಸಿದ ಪ್ರಕಾಶ್ ರಾಜ್

ಪ್ರಧಾನಿ ನರೇಂದ್ರ ಮೋದಿ
ಗಿರೀಶ್ ಕಾರ್ನಾಡ್ ಅವರು ತಮ್ಮ ಅದ್ಭುತ ನಟನೆಯಿಂದ ಎಲ್ಲಾ ಮಾಧ್ಯಮಗಳಲ್ಲೂ ಹೆಸರು ಮಾಡಿದವರು. ಹಾಗೆಯೇ ಒಳ್ಳೆಯ ವಿಚಾರಗಳಿಗೆ ಭಾವೋದ್ವೇಗದಿಂದ ಮಾತನಾಡುವುದು ಅವರಿಗೆ ಅಚ್ಚುಮೆಚ್ಚು. ಅವರ ಕೃತಿಗಳು ಹೀಗೆಯೇ ಮುಂಬರುವ ವರ್ಷಗಳಲ್ಲೂ ಜನಪ್ರಿಯವಾಗಿರಲಿ. ಅವರ ಸಾವಿನಿಂದ ದುಃಖಿತನಾಗಿದ್ದೇನೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಕೋರಿದ್ದಾರೆ.

ರಾಷ್ಟ್ರಪತಿ
ಭಾರತೀಯ ರಂಗಭೂಮಿಯ ಹಿರಿಯ ನಟ, ಸಾಹಿತಿ ಗಿರೀಶ್ ಕಾರ್ನಾಡ್ ಅವರು ನಿಧನರಾದ ಸುದ್ದಿ ಕೇಳಿ ಬಹಳ ದುಃಖವಾಯಿತು. ನಮ್ಮ ಸಾಂಸ್ಕೃತಿಕ ಜಗತ್ತು ಇಂದು ಬಡವಾಗಿದೆ. ಅವರ ಕುಟುಂಬಕ್ಕೆ ಹಾಗೂ ಅವರ ಬರಹಗಳನ್ನು ಅನುಸರಿಸುವವರಿಗೆ ನಾನು ಸಂತಾಪ ಸೂಚಿಸುತ್ತೇನೆ ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:ಗಿರೀಶ್ ಕಾರ್ನಾಡ್ ಒಬ್ಬ ಒಳ್ಳೆಯ ಮನುಷ್ಯರಾಗಿದ್ದರು – ಹ್ಯಾಟ್ರಿಕ್ ಹೀರೋ

ರಣ್‍ದೀಪ್ ಸಿಂಗ್ ಸುರ್ಜೆವಾಲ
ಸಾಹಿತಿ, ನಟ, ಕಲಾವಿದ, ನಿರ್ದೇಶಕ, ಸಾಮಾಜಿಕ ಹೋರಾಟಗಾರ ಗಿರೀಶ್ ಕಾರ್ನಾಡ್ ಅವರ ನಿಧನದಿಂದ ಭಾರತೀಯ ಸೃಜನಶೀಲ ರಂಗಕ್ಕೆ ಭರಿಸಲಾಗದ ನಷ್ಟವಾಗಿದೆ. ನನ್ನ ಆಲೋಚನೆ ಹಾಗೂ ಪಾರ್ಥನೆ ಅವರ ಕುಟುಂಬ, ಸ್ನೇಹಿತರು ಮತ್ತ ಅಭಿಮಾನಿಗಳೊಂದಿಗಿದೆ. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂತಾಪ ಸೂಚಿಸಿದ್ದಾರೆ.

ಅರವಿಂದ್ ಕೇಜ್ರಿವಾಲ್
ಇಂದು ಬೆಳಗ್ಗೆ ಅನುಭವಿ ಖ್ಯಾತ ನಟ, ನಾಟಕಕಾರ ಗಿರೀಶ್ ಕಾರ್ನಾಡ್ ಅವರು ವಿಧಿವಶರಾದರೆಂಬ ದುಃಖದ ಸುದ್ದಿ ಬಂತು. ಗಿರೀಶ್ ಜಿ ಅವರ ಆಲೋಚನೆ, ಕಲಾತ್ಮಕ ಕೊಡುಗೆಯನ್ನು ನಮ್ಮ ರಾಷ್ಟ್ರ ಇನ್ನು ಮುಂದೆ ಮಿಸ್ ಮಾಡುತ್ತೆ ಎಂದು ಟ್ವೀಟ್ ಮಾಡಿದ್ದಾರೆ. ಇದನ್ನೂ ಓದಿ:ಗಿರೀಶ್ ಅವರನ್ನು ನೋಡ್ತಿದ್ದರೆ ವಿವೇಕಾನಂದ ನೆನಪಾಗ್ತಿದ್ರು: ಬಿ.ಟಿ ಲಲಿತಾ ನಾಯಕ್

ಕಮಲ್ ಹಾಸನ್
ಗಿರೀಶ್ ಕಾರ್ನಾಡ್ ಅವರ ಕೃತಿಗಳು ನನ್ನನ್ನು ವಿಶ್ಮಯಗೊಳಿಸಿದೆ ಮತ್ತು ನನಗೆ ಸ್ಫೂರ್ತಿಯಾಗಿದೆ. ಅವರು ತಮ್ಮಿಂದ ಪ್ರೇರೆಪಿತರಾಗಿ ಅಭಿಮಾನಿಗಳಾದ ಬಹಳಷ್ಟು ಬರಹಗಾರರನ್ನು ಬಿಟ್ಟುಹೋಗಿದ್ದಾರೆ. ಅವರ ಕೃತಿಗಳು, ಕೆಲಸಗಳು ಬಹುಶಃ ಕಾರ್ನಾಡ್ ಅವರ ಅಗಲಿಕೆಯಿಂದಾದ ನಷ್ಟವನ್ನು ಭಾಗಶಃ ಭರಿಸಬಲ್ಲವು ಅಂದುಕೊಂಡಿದ್ದೇನೆ ಎಂದು ಬರೆದು ಸಂತಾಪ ವ್ಯಕ್ತಪಡಿಸಿದ್ದಾರೆ.

Click to comment

Leave a Reply

Your email address will not be published. Required fields are marked *