ದಾವಣಗೆರೆ: ಪರಿಸರಕ್ಕೆ ಸಂಬಂಧಿಸಿದ ಚಿತ್ರ ಕಳಿಸಿಕೊಟ್ಟಿದ್ದ ಹೊನ್ನಾಳಿಯ (Honnali) ವಿದ್ಯಾರ್ಥಿಯೊಬ್ಬನಿಗೆ ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಪ್ರಶಂಸನಾ ಪತ್ರ ಕಳಿಸಿಕೊಟ್ಟಿದ್ದಾರೆ.
ವಿಧ್ಯಾರ್ಥಿ (Student) ಅಮೋಘ್ ಹೆಚ್.ಪಿ ಮೋದಿಯವರಿಗೆ ಇತ್ತೀಚೆಗೆ ಚಿತ್ರವನ್ನು ಕಳುಹಿಸಿಕೊಟ್ಟಿದ್ದ. ಬಾಲಕನ ಕಲಾ ಅಭಿರುಚಿಯನ್ನು ಗುರುತಿಸಿ, ಆತನ ವಿಳಾಸಕ್ಕೆ ಮೆಚ್ಚುಗೆಯ ಪತ್ರವನ್ನು ಪ್ರಧಾನಿ ಕಾರ್ಯಾಲಯ ಕಳುಹಿಸಿದೆ. ಮೋದಿ ಮೆಚ್ಚುಗೆಯಿಂದ ಬಾಲಕ ಹಾಗೂ ಆತನ ಪೋಷಕರು ಸಂತೋಷ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಕಾವೇರಿ ಒಡಲಲ್ಲೇ ಕುಡಿಯುವ ನೀರಿಗೆ ಹಾಹಾಕಾರ..!
ಈ ಬಗ್ಗೆ ಪ್ರತಿಕ್ರಿಯಿಸಿರುವ ಅಮೋಘ್, ಪರಿಸರದ ಚಿತ್ರ ಬಿಡಿಸಲು ಶಿಕ್ಷಕರು ಹಾಗೂ ಪೋಷಕರು ಸಹಾಯ ಮಾಡಿದ್ದಾರೆ. ಅವರ ಬೆಂಬಲದಿಂದಲೇ ಚಿತ್ರ ಬಿಡಿಸಲು ಸಾಧ್ಯವಾಯಿತು ಎಂದು ಹೇಳಿದ್ದಾನೆ.
ಅಮೋಘ್ ನಗರದ ಭರತ್ ಹಾಗೂ ಚಂದನ ಜಿ.ಪಿ ದಂಪತಿಯ ಪುತ್ರ. ಬಾಲಕನಿಗೆ ಚಿತ್ರಕಲೆಯಲ್ಲಿ ವಿಶೇಷ ಆಸಕ್ತಿ ಇದ್ದು, ಆತನ ಪ್ರತಿಭೆಗೆ ಶಿಕ್ಷಕರು ಹಾಗೂ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಗ್ರೇಟರ್ ಬೆಂಗಳೂರು? ಹೆಚ್ಚು ಮಳೆಯಾದ್ರೆ ಮುಳುಗುತ್ತದೆ, ಕಡಿಮೆ ಸುರಿದರೆ ತೇಲುತ್ತದೆ: ಹೆಚ್‌ಡಿಕೆ ಕಿಡಿ