ವೈಯಕ್ತಿಕ ದುಃಖದ ನಡುವೆಯೂ ಗೆಲುವಿಗೆ ಶ್ರಮಿಸಿದ್ರು- ನಡ್ಡಾ ಕೊಂಡಾಡಿದ ಪ್ರಧಾನಿ

Public TV
1 Min Read
NARENDRA MODI JP NADDA

ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ (JP Nadda) ಅವರನ್ನು ಹಾಡಿಹೊಗಳಿದ್ದಾರೆ.

ರಾಷ್ಟ್ರ ರಾಜಧಾನಿಯ ಬಿಜೆಪಿ ಪ್ರಧಾನ ಕಛೇರಿಯಲ್ಲಿ ನಡೆದ ವಿಜಯೋತ್ಸವದಲ್ಲಿ ಪಕ್ಷದ ಬೆಂಬಲಿಗರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ, ನಡ್ಡಾ ಅವರ ಸಂಘಟನಾ ಕೌಶಲ್ಯ ಮತ್ತು ತೆರೆಮರೆಯಲ್ಲಿ ಅವರು ಮಾಡಿದ ದಣಿವರಿಯದ ಕೆಲಸವನ್ನು ಕೊಂಡಾಡಿದರು. ಇದು ಪಕ್ಷದ ಅಂತಿಮ ಚುನಾವಣಾ ಯಶಸ್ಸಿಗೆ ಕಾರವಾಯಿತು ಎಂದರು.

ನಡ್ಡಾ ಕುಟುಂಬದಲ್ಲಿ ಒಬ್ಬರು ಸಾವನ್ನಪ್ಪಿದ್ದರು. ಈ ದುಃಖದ ನಡುವೆಯೂ ಪಕ್ಷಕ್ಕೆ ದುಡಿದು ಇಂದು ಪಕ್ಷವನ್ನು ಗೆಲ್ಲಿಸಿಕೊಟ್ಟಿದ್ದಾರೆ. ಮಧ್ಯಪ್ರದೇಶ, ಛತ್ತೀಸ್‍ಗಢ ಹಾಗೂ ರಾಜಸ್ಥಾನದ ಅಭೂತಪೂರ್ವ ಗೆಲುವಿಗೆ ಜೆ.ಪಿ ನಡ್ಡಾ ಕಾರಣರಾಗಿದ್ದಾರೆ. ಪಕ್ಷದ ಅದ್ಭುತ ಗೆಲುವಿಗೆ ನಡ್ಡಾ ಅವರ ಸಮರ್ಥ ಉಸ್ತುವಾರಿ ಮತ್ತು ಚುನಾವಣಾ ಚಾಣಾಕ್ಷತೆ ಮತ್ತು ತಂತ್ರಗಳು ಕಾರಣವೆಂದು ಹೇಳಿದರು. ಈ ವೇಳೆ ಕಾರ್ಯಕರ್ತರು ‘ಭಾರತ್ ಮಾತಾ ಕೀ ಜೈ’ ಎಂದು ಘೊಷಣೆಗಳನ್ನು ಕೂಗಿದರು. ಇದನ್ನೂ ಓದಿ: ಗ್ಯಾರಂಟಿ ವಿಫಲವಾಗಿಲ್ಲ, ನಮ್ಮ ತಪ್ಪುಗಳನ್ನು ಸರಿಪಡಿಸಿಕೊಳ್ಳುತ್ತೇವೆ – ಅಧಿವೇಶನಕ್ಕೂ ಮುನ್ನ ಸಿಎಂ ರಿಯಾಕ್ಷನ್‌

JP NADDA

ಚುನಾವಣೆಗೆ ಮುನ್ನ ಅವರ ಕುಟುಂಬದಲ್ಲಿ ಒಬ್ಬರು ಮೃತಪಟ್ಟಿದ್ದರು. ಈ ದುಃಖದ ನಡುವೆಯೇ ನಡ್ಡಾ ಅವರು ಪಕ್ಷಕ್ಕಾಗಿ ದುಡಿದರು. ಪಕ್ಷವನ್ನು ಸಂಪೂರ್ಣ ಬದ್ಧತೆ ಮತ್ತು ಶ್ರದ್ಧೆಯಿಂದ ಮುನ್ನಡೆಸಿದರು ಎಂದರು. ಇತ್ತ ವಿಜಯೋತ್ಸವದಲ್ಲಿ ತಮ್ಮ ಬೆಂಬಲಿಗರನು ಉದ್ದೇಶಿಸಿ ಮಾತನಾಡಿದ ನಡ್ಡಾ ಅವರು ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವನ್ನು ಶ್ಲಾಘಿಸಿದರು.

ಮೂರು ರಾಜ್ಯಗಳ ಚುನಾವಣಾ ಫಲಿತಾಂಶದಲ್ಲಿ ಗೆದ್ದ ಬಳಿಕ ನಡ್ಡಾ ಅವರು ತಮ್ಮ ಕುಟುಂಬಸ್ಥರ ಜೊತೆ ದೆಹಲಿಯಲ್ಲಿರುವ ಆಂಜನೇಯನ ದೇಗುಲಕ್ಕೆ ತೆರಳಿ ಪೂಜೆ ಸಲ್ಲಿಸಿದರು.

Share This Article