ನವದೆಹಲಿ: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ತಮ್ಮ ತಾಯಿ ಹೀರಾಬೆನ್ ಕಳೆದುಕೊಂಡ ದುಃಖದಲ್ಲಿದ್ದರೂ ರಿಷಭ್ ಪಂತ್ (Rishabh Pant) ಅವರ ಆರೋಗ್ಯದ ಬಗ್ಗೆ ಕ್ಷಣ-ಕ್ಷಣದ ಮಾಹಿತಿ ಪಡೆಯುತ್ತಿದ್ದಾರೆ. ನಿನ್ನೆಯಷ್ಟೇ ಟ್ವೀಟ್ ಮೂಲಕ ಶೀಘ್ರ ಗುಣಮುಖರಾಗುವಂತೆ ಪ್ರಾರ್ಥಿಸಿದ್ದ ಮೋದಿ ಅವರಿಂದು ಪಂತ್ ಅವರ ಕುಟುಂಬಕ್ಕೆ ಕರೆ ಮಾಡಿ ಅಭಯ ನೀಡಿದ್ದಾರೆ.
Distressed by the accident of noted cricketer Rishabh Pant. I pray for his good health and well-being. @RishabhPant17
— Narendra Modi (@narendramodi) December 30, 2022
Advertisement
ಇಂದು ಬೆಳಗ್ಗೆ ಪಂತ್ ಅವರ ತಾಯಿಗೆ ಕರೆ ಮಾಡಿ, ರಿಷಭ್ ಅವರ ಆರೋಗ್ಯ ಸ್ಥಿತಿಗತಿಯ ಬಗ್ಗೆ ಸಮಗ್ರ ಮಾಹಿತಿ ಪಡೆದುಕೊಂಡಿದ್ದಾರೆ. ಅಲ್ಲದೇ ರಿಷಭ್ ಅವರು ಶೀಘ್ರವೇ ಗುಣಮುಖರಾಗಿ ಬರಲಿದ್ದಾರೆ. ಅದಕ್ಕೆ ಅಗತ್ಯ ರೀತಿಯ ಎಲ್ಲ ಸಹಕಾರಗಳನ್ನು ನೀಡಲಾಗುವುದು ಎಂದು ಅಭಯ ನೀಡಿದ್ದಾರೆ. ಇದನ್ನೂ ಓದಿ: ಮ್ಯಾಂಚೆಸ್ಟರ್ ಯುನೈಟೆಡ್ ತಂಡಕ್ಕೆ ಗುಡ್ ಬೈ – ಸೌದಿ ಅರೇಬಿಯಾ ಪಾಲಾದ ರೊನಾಲ್ಡೊ
Advertisement
Advertisement
`ಖ್ಯಾತ ಕ್ರಿಕೆಟಿಗ ಪಂತ್ ಅಪಘಾತಕ್ಕೀಡಾಗಿ ಆಸ್ಪತ್ರೆ ಸೇರಿರುವುದನ್ನು ಅರಿತು ಪಂತ್‌ಗೆ ಅಪಘಾತವಾಗಿರುವ ಸುದ್ದಿ ಕೇಳಿ ದುಃಖವಾಗಿದೆ. ಆದಷ್ಟು ಬೇಗ ಆರೋಗ್ಯ ಸುಧಾರಿಸಲಿ, ಚೇತರಿಕೆ ಕಾಣಲೆಂದು ದೇವರಲ್ಲಿ ಪ್ರಾರ್ಥಿಸುತ್ತೇನೆ’ ಎಂದು ನಿನ್ನೆಯಷ್ಟೇ ಟ್ವೀಟ್ ಮಾಡಿದ್ದರು. ಇದನ್ನೂ ಓದಿ: ತಾಯಿ ಮಡಿದ ನೋವಿನಲ್ಲೂ ಪಂತ್ ಆರೋಗ್ಯ ಚೇತರಿಕೆಗಾಗಿ ಹಾರೈಸಿದ ಮೋದಿ
Advertisement
ಕ್ರಿಕೆಟ್ ನೋಡಬೇಡಿ: ರಿಷಭ್ ಪಂತ್ ಅವರನ್ನು ಅಪಘಾತ ಸ್ಥಳದಿಂದ ರಕ್ಷಿಸಿದ ಬಸ್ ಡ್ರೈವರ್ ಸುಶೀಲ್ ಕುಮಾರ್ ಘಟನೆಯ ಸನ್ನಿವೇಶವನ್ನು ಎಳೆ-ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಅಲ್ಲದೇ ಅವರನ್ನು ಗುರುತಿಸದಿದ್ದ ಮೇಲೆ ಕ್ರಿಕೆಟ್ ನೋಡಬೇಡಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಭಯೋತ್ಪಾದನೆಯಿಂದ ಭಾರತ ನೊಂದಷ್ಟು ಬೇರಾವ ದೇಶವೂ ನೊಂದಿಲ್ಲ: ಜೈಶಂಕರ್
ರಿಷಭ್ ಪಂತ್ ಅವರನ್ನು ನೋಡಿದಾಗ ಮುಖವೆಲ್ಲಾ ರಕ್ತದ ಮಡುವಿನಲ್ಲಿತ್ತು. ಬಟ್ಟೆ ಚಿಂದಿಯಾಗಿ ಅವರ ಬೆನ್ನೆಲ್ಲಾ ತರಚಿದ ಗಾಯಗಳಾಗಿತ್ತು. ಅತೀವ ನೋವಿನಿಂದ ಬಳಲಿದ್ದ ಅವರು ಕುಂಟುತ್ತಿದ್ದರು, ಎಂದು ಸುಶೀಲ್ ಕುಮಾರ್ ಸಂದರ್ಶನದಲ್ಲಿ ಘಟನೆಯ ವಿವರಗಳನ್ನು ತೆರೆದಿಟ್ಟಿದ್ದಾರೆ. ನಾವು ಸಹಾಯಕ್ಕಾಗಿ ಕೂಗಿದರೂ ಯಾರೊಬ್ಬರೂ ಬರಲಿಲ್ಲ. ರಾಷ್ಟ್ರೀಯ ಹೈದಾರಿ ಸಹಾಯವಾಣಿಗೆ ಕರೆ ಮಾಡಿದೆವು. ಯಾವ ಅಧಿಕಾರಿಗಳಿಂದಲೂ ಸ್ಪಂದನೆ ಸಿಗಲಿಲ್ಲ. ಬಳಿಕ ನಾನು ಪೊಲೀಸ್‌ಗೆ ಮಾಹಿತಿ ನೀಡಿದೆ. ಬಸ್ ಕಂಡಕ್ಟರ್ ಅಂಬುಲೆನ್ಸ್ಗೆ ಕರೆ ಮಾಡಿದರು. ಅವರ ಸ್ಥಿತಿ ಬಗ್ಗೆ ನಾವು ಕೇಳುತ್ತಲೇ ಇದ್ದೆವು. ನೀರು ಕೂಡ ಕೊಟ್ಟೆವು. ಕೊಂಚ ಸುಧಾರಿಸಿದ ಬಳಿಕ ಅವರೇ `ನಾನು ರಿಷಭ್ ಪಂತ್’ ಎಂದು ಹೇಳಿಕೊಂಡಿರುವುದಾಗಿ ತಿಳಿಸಿದ್ದಾರೆ.
ಪಂತ್ ಉತ್ತರಾಖಂಡದಿಂದ ದೆಹಲಿಗೆ ಹಿಂದಿರುಗುತ್ತಿದ್ದ ವೇಳೆ ರೂರ್ಕಿಯ ನರ್ಸನ್ ಗಡಿಯಲ್ಲಿ ಕಾರು ಡಿವೈಡರ್‌ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು. ಕೆಲ ಕ್ಷಣಗಳಲ್ಲೇ ಕಾರಿನಲ್ಲಿ ಬೆಂಕಿ ಹೊತ್ತಿಕೊಂಡಿತ್ತು. ಕೂಡಲೇ ಕಾರಿನಲ್ಲಿದ್ದ ಪಂತ್ ಗಾಜನ್ನು ಹೊಡೆದುಕೊಂಡು ಹೊರ ಬಂದು ಗ್ರೇಟ್ ಎಸ್ಕೇಪ್ ಆಗಿದ್ದರು. ಸದ್ಯ ರಿಷಭ್ ಆರೋಗ್ಯ ಸ್ಥಿರವಾಗಿದ್ದು, ಆತಂಕ ಪಡಬೇಕಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.