ನವದೆಹಲಿ: ದೇಶದಲ್ಲಿ ಕೆಲವರನ್ನು ಗಣ್ಯ ವ್ಯಕ್ತಿಗಳೆಂದು ಗುರುತಿಸುವ ಬದಲು ಎಲ್ಲರನ್ನೂ ಗಣ್ಯರೆಂದು ಪರಿಗಣಿಸಬೇಕಿದೆ ಎಂದು ಮೋದಿ ಕೆಂಪು ದೀಪ ನಿಷೇಧವನ್ನು ಸಮರ್ಥಿಸಿಕೊಂಡಿದ್ದಾರೆ.
31ನೇ ವಾರದ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಾಹನಗಳ ಮೇಲೆ ಕೆಂಪು ದೀಪ ಬಳಕೆ ವಿಐಪಿ ಸಂಸ್ಕೃತಿ. ಕೆಂಪು ದೀಪಗಳ ಬಳಕೆ ನಿಷೇಧಿಸಿದ ನಂತರ ನನಗಿದು ಮನವರಿಕೆಯಾಯಿತು. ಕೆಂಪು ದೀಪ ಬಳಕೆ ನಿಷೇಧಿಸಿದ್ದಕ್ಕೆ ಜಬಲ್‍ಪುರ್ ನಿಂದ ಕರೆ ಮಾಡಿದ ವ್ಯಕ್ತಿಯೊಬ್ಬರು ಅಭಿನಂದನೆ ಸಲ್ಲಿಸಿದ್ದಾರೆ ಅಂತಾ ಅವರು ಹೇಳಿದ್ರು.
Advertisement
Advertisement
ಹವಾಮಾನ ವೈಪರೀತ್ಯ ಹಾಗೂ ಬೇಸಿಗೆಯಲ್ಲಿ ವಿದ್ಯಾರ್ಥಿಗಳ ಪಾತ್ರದ ಬಗ್ಗೆ ವಿದ್ಯಾರ್ಥಿಗಳಿಗೆ ಹಾಗೂ ದೇಶದ ನಾಗರಿಕರಿಗೆ ಕಿವಿಮಾತು ಹೇಳಿದ್ರು. ಹವಾಮಾನ ವೈಪರೀತ್ಯ ದೇಶದ ಆರ್ಥಿಕಾಭಿವೃದ್ಧಿಗೆ ಅಡ್ಡಿಯಾಗಿದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ರಜೆ ದಿನದಲ್ಲಿ ಹೊಸ ಆವಿಷ್ಕಾರಗಳನ್ನ ಕೈಗೊಳ್ಳಬೇಕು. ಮಕ್ಕಳು, ಯುವಜನತೆ ಪರಿಸರ ಸಂರಕ್ಷಣೆಯ ಬಗ್ಗೆ ಕಾಳಜಿ ವಹಿಸಬೇಕು. ಗಾಳಿ, ನೀರಿನ ಮಾಲಿನ್ಯ ತಡೆಯುವುದು ಇಂದಿನ ಮೂಲಭೂತ ಸಮಸ್ಯೆಯಾಗಿದೆ. ಜಗತ್ತಿನಲ್ಲಿ ತಾಪಮಾನ ಏರಿಕೆಯಿಂದ ಋತುಮಾನದಲ್ಲಿ ಬದಲಾವಣೆಗಳು ಆಗುತ್ತಿರುವುದು ಎಲ್ಲರ ಗಮನಕ್ಕೆ ಬಂದಿದೆ. ಮೇ-ಜೂನ್ ನಲ್ಲಿನ ಬಿಸಿಲು ತಾಪ ಇದೀಗ ಏಪ್ರಿಲ್-ಮೇನಲ್ಲೇ ಆಗುತ್ತಿದೆ. ಇದರಿಂದಾಗಿ ಅಂತರ್ಜಲ ಕುಸಿಯುತ್ತಿದ್ದು ಕುಡಿಯುವ ನೀರಿಗೆ ಹಾಹಾಕಾರ ಶುರುವಾಗಿದೆ. ಬೇಸಿಗೆಯಲ್ಲಿ ಪ್ರಾಣಿ, ಪಕ್ಷಿಗಳಿಗೆ ಕೈಲಾದಷ್ಟು ನೀರು, ಆಹಾರ ವ್ಯವಸ್ಥೆ ಮಾಡಬೇಕು ಅಂತಾ ಅಂದ್ರು.
Advertisement
Advertisement
ಬಡವರ ಬಳಿಗೆ ಹೋಗಿ ಅವರ ಸಂಕಷ್ಟ ಅರಿತು ನೆರವಾಗಬೇಕು. ಯುವಕರು ರೋಬೋಟ್ ನಂತೆ ವರ್ತಿಸಬಾರದು. ತಂತ್ರಜ್ಞಾನದಿಂದಾಗಿ ಮನೆಯೊಳಗಿದ್ದರೂ ದೂರವಾದಂತಿದ್ದಾರೆ. ದೇಶವನ್ನು ಸುತ್ತಬೇಕು. ವೈವಿಧ್ಯತೆಯನ್ನು ಅರಿಯಬೇಕು ಎಂದು ಸಲಹೆ ನೀಡಿದ ಅವರು, ಮಕ್ಕಳು ಹೊರಗೆ ಹೋಗಿ ಆಟವಾಡುವುದನ್ನು ಕಲಿಯಿರಿ ಅಂತಾ ಹೇಳಿದ್ದಾರೆ. ಇದೇ ವೇಳೆ ಸಂತ ರಾಮಾನುಜ ಆಚಾರ್ಯರ ಜನ್ಮ ದಿನಾಚರಣೆಯನ್ನೂ ಪ್ರಧಾನಿ ಸ್ಮರಿಸಿದರು.
New India is about EPI- every person is important. Be it on the cars or in the mind, no place for VIP syndrome. https://t.co/9IN85xQuqh
— Narendra Modi (@narendramodi) April 30, 2017
Also urging my young friends to get more & more people on the BHIM App. #MannKiBaat https://t.co/VUn1tcsng9
— Narendra Modi (@narendramodi) April 30, 2017
Sant Ramanujacharya’s rich thoughts & service to our society eternally motivate us. https://t.co/mwYwhHSOUY
— Narendra Modi (@narendramodi) April 30, 2017
Young friends, I know you are excited about the vacations. Make them about new experiences, new skills & new places. https://t.co/FXyEVWBczX
— Narendra Modi (@narendramodi) April 30, 2017