ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಬಂದಾಗ ಹಾಕಿದ್ದ ರಸ್ತೆ ಕಿತ್ತೋಗಿರೋ ಪ್ರಕರಣಕ್ಕೆ ಸಂಬಂಧಿಸಿ ಬಿಬಿಎಂಪಿ ಮಟ್ಟದಲ್ಲಿ ಭಾರೀ ಹೈಡ್ರಾಮಾ ನಡೆಯುತ್ತಿದೆ.
ಕಳಪೆ ಕಾಮಗಾರಿ ಹೊಣೆ ಹೊತ್ತುಕೊಳ್ಳೋದಕ್ಕೆ ಬಿಬಿಎಂಪಿಯ ಯಾವ ಸದಸ್ಯರು ತಯಾರಿಲ್ಲ. ರಸ್ತೆ ಗುಂಡಿಗೆ ಪೈಪ್‍ಲೈನ್ ಲೀಕೇಜ್ ಕಾರಣ ಎಂದು ಜಲಮಂಡಳಿ ಹೇಳಿದೆ. ಆದ್ರೆ ಇದನ್ನು ಪರಿಗಣಿಸದ ಬಿಬಿಎಂಪಿ, ರಸ್ತೆಗುಂಡಿಗೆ ಜಲಮಂಡಳಿಯೇ ಕಾರಣ ಎಂದು ಹೇಳಿ ಪ್ರಧಾನಿ ಸಚಿವಾಲಯಕ್ಕೆ ವರದಿ ಸಲ್ಲಿಸಿದೆ. ಇದು ಇಷ್ಟಕ್ಕೆ ನಿಲ್ಲುತ್ತಿಲ್ಲ. ಇದನ್ನೂ ಓದಿ: ಮೋದಿಯವರ ವ್ಯಕ್ತಿತ್ವ, ಜೀವನದ ಹಾದಿ ಪ್ರತಿಯೊಬ್ಬರಿಗೂ ಸ್ಫೂರ್ತಿ: ರಾಜ್ಯಪಾಲ
ಇಡೀ ಪ್ರಕರಣವನ್ನು ಉಲ್ಟಾಪಲ್ಟಾ ಮಾಡಲು ಬಿಬಿಎಂಪಿ ಯತ್ನಿಸುತ್ತಿದೆ. ಗುಂಡಿ ಬಿದ್ದ ರಸ್ತೆಗೆ ಮೋದಿ ಬಂದಾಗ ನಾವು ಡಾಂಬರು ಹಾಕಿರಲಿಲ್ಲ. ಬದಲಾಗಿ 2021ರ ನವೆಂಬರ್‌ನಲ್ಲೇ ಡಾಂಬರು ಹಾಕಲಾಗಿತ್ತು. ಆ ರಸ್ತೆಯಲ್ಲಿ ಪ್ರಧಾನ ಮಂತ್ರಿ ಓಡಾಡಿಲ್ಲ. ಅವರು ಪಕ್ಕದ ರಸ್ತೆಯಲ್ಲಿ ಓಡಾಡಿದರು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೊಸ ಕತೆ ಹೇಳಿದ್ದಾರೆ.
ಮಹದೇವಪುರ ಶಾಸಕ ಅರವಿಂದ್ ಲಿಂಬಾವಳಿ ಟ್ವೀಟ್ ಮಾಡಿ, ಕುಂದಲಹಳ್ಳಿ ಅಂಡರ್‍ಪಾಸ್‍ನಲ್ಲಿ ಕೊಕ್ಕರೆ ಚಿತ್ರ ಬಿಡಿಸಿದ್ದೇವೆ. ಟ್ರಾಫಿಕ್‍ನಲ್ಲಿ ಸಿಲುಕಿರೋರು ಇದನ್ನು ನೋಡ್ತಾ ಮನಸ್ಸನ್ನು ಫ್ರೆಶ್ ಮಾಡಿಕೊಳ್ಳಿ ಎಂದು ಕರೆ ನೀಡಿದ್ದಾರೆ. ಇದಕ್ಕೆ ನೆಟ್ಟಿಗರಿಂದ ಭಾರೀ ಟೀಕೆ ಕೇಳಿಬಂದಿದೆ. ಮೊದಲು ರಸ್ತೆ ಸರಿ ಮಾಡಿ. ಗುಂಡಿ ಮುಚ್ಚಿಸಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ. ಇದನ್ನೂ ಓದಿ: ಸೋನಿಯಾ ಗಾಂಧಿ ಆಪ್ತ ಸಹಾಯಕನ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು
ಈ ಮಧ್ಯೆ, ಮಾಜಿ ಸಿಎಂ ಎಸ್.ಎಂ.ಕೃಷ್ಣ ಮಾತನಾಡಿ, ಜಗತ್ತಿನ ಗಮನ ಸೆಳೆಯುತ್ತಿರುವ ಬೆಂಗಳೂರು ನಗರ ಇನ್ನಷ್ಟು ಬೆಳೆಯಬೇಕು. ಈ ದಿಸೆಯಲ್ಲಿ ರಾಜ್ಯ ಸರ್ಕಾರ ದೃಢವಾದ ಹೆಜ್ಜೆ ಇಡಬೇಕು ಎಂದು ಸಿಎಂ ಬೊಮ್ಮಾಯಿಗೆ ಸಲಹೆ ನೀಡಿದ್ದಾರೆ.