ಹಳೆ ಸಂಸತ್‌ ಭವನದಲ್ಲಿ ಸಂಸದರ ಮೆಗಾ ಫೋಟೋಶೂಟ್‌ – ಸುಂದರ ನೆನಪುಗಳೊಂದಿಗೆ ವಿದಾಯ

Public TV
1 Min Read
old parliament photoshoot

– ಇಂದಿನಿಂದ ಹೊಸ ಸಂಸತ್‌ ಭವನದಲ್ಲಿ ಅಧಿವೇಶನ

ನವದೆಹಲಿ: ಸುಂದರ ನೆನಪುಗಳೊಂದಿಗೆ ಹಳೆ ಸಂಸತ್‌ ಭವನಕ್ಕೆ (Old Parliament Building) ಸಂಸದರು ಇಂದು (ಮಂಗಳವಾರ) ವಿದಾಯ ಹೇಳಿದರು. ಪ್ರಧಾನಿ ಮೋದಿ (Narendra Modi) ಸೇರಿದಂತೆ ಎಲ್ಲಾ ಸಂಸತ್‌ ಸದಸ್ಯರು ಒಟ್ಟಾಗಿ ಸೇರಿ ಮೆಗಾ ಫೋಟೋಶೂಟ್‌ ಮಾಡಿಸಿದರು.

ಪ್ರಧಾನಿ ನರೇಂದ್ರ ಮೋದಿ, ಉಪರಾಷ್ಟ್ರಪತಿ ಜಗದೀಪ್ ಧನಕರ್‌, ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಮತ್ತು ಇತರ ಸಂಸದರು ಇಂದಿನ ಸಂಸತ್ತಿನ ಅಧಿವೇಶನದ ಮೊದಲು ಜಂಟಿ ಫೋಟೋ ಸೆಷನ್‌ಗಾಗಿ ಪಾಲ್ಗೊಂಡಿದ್ದರು. ಇದನ್ನೂ ಓದಿ: ಹಳೆ ಸಂಸತ್‌ ಭವನಕ್ಕೆ ಬೀಳ್ಕೊಡುಗೆ – ನೆಹರೂ ಸ್ಮರಿಸಿದ ಪ್ರಧಾನಿ ಮೋದಿ

ಬಿಜೆಪಿ ಸಂಸದ ನರಹರಿ ಅಮೀನ್ ಅವರು ಸಂಸದರ ಗ್ರೂಪ್ ಫೋಟೋಶೂಟ್‌ ವೇಳೆ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಸ್ವಲ್ಪ ಹೊತ್ತು ಸುಧಾರಿಸಿಕೊಂಡು ನಂತರ ಮತ್ತೆ ಫೋಟೋಶೂಟ್‌ನಲ್ಲಿ ಸೇರಿದರು.

ಕಾಂಗ್ರೆಸ್‌ನ ಸೋನಿಯಾ ಗಾಂಧಿ, ರಾಹುಲ್‌ ಗಾಂಧಿ ಸೇರಿದಂತೆ ಸಂಸತ್‌ ಸದಸ್ಯರೂ ಆಗಿರುವ ವಿಪಕ್ಷಗಳ ನಾಯಕರು ಸಹ ಫೋಟೋಶೂಟ್‌ನಲ್ಲಿ ಪಾಲ್ಗೊಂಡರು. ಇಂದಿನಿಂದ ನೂತನ ಸಂಸತ್ ಭವನದಲ್ಲಿ ಸದನದ ಕಲಾಪ ನಡೆಯಲಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ವಿಶೇಷ ಅಧಿವೇಶನದಲ್ಲಿ ಹಳೆ ಸಂಸತ್‌ ಭವನಕ್ಕೆ ವಿದಾಯದ ಭಾಷಣ ಮಾಡಿದ್ದರು. ಈ ವೇಳೆ ದೇಶದ ಮೊದಲ ಪ್ರಧಾನಿ ಜವಾಹರ್‌ಲಾಲ್‌ ನೆಹರೂ ಅವರನ್ನು ಸ್ಮರಿಸಿದ್ದರು. ಇದನ್ನೂ ಓದಿ: ಮಹಿಳಾ ಮೀಸಲಾತಿ ಮಸೂದೆಗೆ ಕೇಂದ್ರ ಸಂಪುಟ ಅನುಮೋದನೆ

Web Stories

Share This Article