ಜಕಾರ್ತ್: 17ನೇ ಆವೃತ್ತಿಯ ಜಿ20 ಶೃಂಗಸಭೆಯ (G20 Summit) ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಮಂಗಳವಾರ ಮೊದಲ ಬಾರಿಗೆ ಬ್ರಿಟನ್ ಪ್ರಧಾನಿ, ಭಾರತ ಮೂಲದ ರಿಷಿ ಸುನಾಕ್ (Rishi Sunak) ಅವರನ್ನು ಭೇಟಿಯಾದರು.
ಇಂಡೋನೇಷ್ಯಾದ (Indonesia) ಬಾಲಿಯಲ್ಲಿ ನಡೆಯುತ್ತಿರುವ G20 ಶೃಂಗಸಭೆಯ ಮೊದಲ ದಿನದ ಸಂವಾದದಲ್ಲಿ ಭಾರತ ಮತ್ತು ಬ್ರಿಟನ್ ದೇಶದ ಪ್ರಧಾನಿಗಳಾದ ನರೇಂದ್ರ ಮೋದಿ, ರಿಷಿ ಸುನಾಕ್ ಪರಸ್ಪರ ಭೇಟಿಯಾಗಿ ಮಾತುಕತೆ ನಡೆಸಿದ ಬಗ್ಗೆ ಪ್ರಧಾನ ಮೋದಿ ಅವರ ಕಚೇರಿ ಟ್ವೀಟ್ ಮಾಡಿ ತಿಳಿಸಿದೆ. ಇದನ್ನೂ ಓದಿ: ಉಕ್ರೇನ್‌ನಲ್ಲಿ ಕದನ ವಿರಾಮ, ರಾಜತಾಂತ್ರಿಕತೆ ಮಾರ್ಗ ಕಂಡುಕೊಳ್ಳಬೇಕಿದೆ – ಜಿ20 ಶೃಂಗಸಭೆಯಲ್ಲಿ ಮೋದಿ ಮಾತು
Advertisement
Advertisement
ಉಭಯ ನಾಯಕರ ನಡುವೆ ನಡೆದ ಮೊದಲ ಮುಖಾಮುಖಿ ಮಾತುಕತೆ ಇದಾಗಿದೆ. ಇದಕ್ಕೂ ಮೊದಲು ಅಕ್ಟೋಬರ್‌ನಲ್ಲಿ ಪಿಎಂ ಮೋದಿ ಮತ್ತು ಸುನಾಕ್ ಅವರು ಫೋನ್‌ನಲ್ಲಿ ಮಾತನಾಡಿದ್ದರು. ಉಭಯ ದೇಶಗಳ ನಡುವಿನ “ಸಮತೋಲಿತ ಮತ್ತು ಸಮಗ್ರ” ಮುಕ್ತ ವ್ಯಾಪಾರ ಒಪ್ಪಂದದ ಕುರಿತು ಚರ್ಚಿಸಿದ್ದರು.
Advertisement
Advertisement
ಸೋಮವಾರ ಬಾಲಿಗೆ ಆಗಮಿಸಿದ ಪ್ರಧಾನಿ ಮೋದಿ, ಸೆನೆಗಲ್ ಗಣರಾಜ್ಯದ ಅಧ್ಯಕ್ಷ ಮ್ಯಾಕಿ ಸಾಲ್, ನೆದರ್‌ಲ್ಯಾಂಡ್‌ನ ಪ್ರಧಾನಿ ಮಾರ್ಕ್ ರುಟ್ಟೆ ಮತ್ತು ಯುಎಸ್ ಅಧ್ಯಕ್ಷ ಜೋ ಬಿಡನ್ ಅವರನ್ನು ಭೇಟಿಯಾದರು. ಇದನ್ನೂ ಓದಿ: ಇಂದಿಗೆ 8 ಶತಕೋಟಿ ಮೀರಿತು ಜಾಗತಿಕ ಜನಸಂಖ್ಯೆ: ವಿಶ್ವಸಂಸ್ಥೆ