1996ರ ವಿಶ್ವಕಪ್ ಗೆದ್ದ ಲಂಕಾ ಕ್ರಿಕೆಟ್‌ ದಿಗ್ಗಜರ ಜೊತೆ ಮೋದಿ ಸಂವಾದ!

Public TV
1 Min Read
Modi

ಕೊಲಂಬೊ: 1996ರ ವಿಶ್ವಕಪ್‌ ವಿಜೇತ ಶ್ರೀಲಂಕಾ ಕ್ರಿಕೆಟ್‌ ತಂಡದ ಆಟಗಾರರನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಶ್ರೀಲಂಕಾ ಪ್ರವಾಸದ ವೇಳೆ ಭೇಟಿಯಾಗಿ ಕೆಲಕಾಲ ಸಂವಾದ ನಡೆಸಿದರು.

ಈ ಸಂತಸದ ಕ್ಷಣಗಳನ್ನು ಫೋಟೋ ಸಹಿತ ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. 1996ನೇ ವರ್ಷ ವಿಶ್ವಕಪ್ ಗೆದ್ದ ಶ್ರೀಲಂಕಾ ಕ್ರಿಕೆಟ್ ತಂಡದ ಸದಸ್ಯರೊಂದಿಗೆ ಸಂವಹನ ನಡೆಸಲು ಸಂತೋಷವಾಯಿತು. ಈ ತಂಡವು ಅಸಂಖ್ಯಾತ ಕ್ರೀಡಾ ಪ್ರೇಮಿಗಳ ಕಲ್ಪನೆಯನ್ನು ಸೆರೆಹಿಡಿದಿದೆ ಎಂದು ಮೋದಿ ಬಣ್ಣಿಸಿದ್ದಾರೆ.

PM Modi 2

ಈ ಕುರಿತು ಮಾಜಿ ಕ್ರಿಕೆಟಿಗ ಸನತ್‌ ಜಯಸೂರ್ಯ ಮಾತನಾಡಿ, ಇದು ಒಂದು ಉತ್ತಮ ಸಂವಾದವಾಗಿತ್ತು. ಈ ವೇಳೆ ನಾವು ಹಲವು ವಿಷಯಗಳನ್ನು ಚರ್ಚಿಸಿದ್ದೇವೆ ಮತ್ತು ಕ್ರಿಕೆಟ್ ಬಗ್ಗೆ ಮಾತನಾಡಿದ್ದೇವೆ. ಮೋದಿ ಅವರು ಹೇಗೆ ಅಧಿಕಾರ ವಹಿಸಿಕೊಂಡರು ಮತ್ತು ಅವರು ದೇಶವನ್ನು ಹೇಗೆ ಅಭಿವೃದ್ಧಿಪಡಿಸಿದರು ಎಂಬುದರ ಬಗ್ಗೆ ಮಾತನಾಡಿದ್ದು ನಮಗೂ ಒಂದು ಉತ್ತಮ ಅನುಭವವಾಗಿತ್ತು. ಪ್ರಧಾನಿ ಮೋದಿ ಅವರು ಭಾರತಕ್ಕಾಗಿ ಏನೆಲ್ಲ ಮಾಡಿದ್ದಾರೆಂಬುದನ್ನು ಅವರೇ ವಿವರಿಸಿದರು.

PM Modi 3

ಟ್ರೋಫಿ ಗೆದ್ದಿದ್ದು ಹೇಗೆ?
ಮಾರ್ಚ್ 17ರಂದು ಲಾಹೋರ್‌ನಲ್ಲಿ ನಡೆದ ಅಂತಿಮ ಹಣಾಹಣಿಯಲ್ಲಿ ಅರ್ಜುನ ರಣತುಂಗ ನೇತೃತ್ವದ ಲಂಕಾ ತಂಡ ಆಸ್ಟ್ರೇಲಿಯಾವನ್ನು 7 ವಿಕೆಟ್‌ಗಳು ಮತ್ತು ಇನ್ನೂ 22 ಎಸೆತಗಳು ಬಾಕಿ ಇರುವಂತೆ ಸೋಲಿಸಿ ಟ್ರೋಫಿಗೆ ಮುತ್ತಿಟಿತು. ಅರವಿಂದ ಡಿ ಸಿಲ್ವಾ ಅವರ ಅಜೇಯ 107 ರನ್‌ಗಳು, ಅಸಂಕ ಗುರುಸಿನ್ಹ 99 ಎಸೆತಗಳಲ್ಲಿ 65 ರನ್‌, ಅರ್ಜುನ ರಣತುಂಗ ಅವರ 37 ಎಸೆತಗಳಲ್ಲಿ 47 ರನ್‌ಗಳ ವೇಗದ ಬ್ಯಾಟಿಂಗ್ ನೆರವಿನಿಂದ ಶ್ರೀಲಂಕಾ ತಂಡವು ಗೆದ್ದು ತಮ್ಮ ಚೊಚ್ಚಲ ವಿಶ್ವಕಪ್‌ ಪ್ರಶಸ್ತಿಗೆ ಮುತ್ತಿಟ್ಟಿತು.

PM Modi 4

Share This Article